ಹೊಳಲು ಗ್ರಾಮೀಣ ಕಾಲೇಜಿಗೆ ಬಂಪರ್ ಫಲಿತಾಂಶ…!!!

Listen to this article

ಹೊಳಲು ಗ್ರಾಮೀಣ ಕಾಲೇಜಿಗೆ ಬಂಪರ್ ಫಲಿತಾಂಶ

ಹೊಳಲು: ಹೂವಿನಹಡಗಲಿ ತಾಲೂಕಿನ ಪ್ರಥಮ ಸರ್ಕಾರಿ ಪದವಿಪೂರ್ವ ಕಾಲೇಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಲ್ಲಿನ ಸ್ವಾಮಿ ವಿವೇಕಾನಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಬಂಪರ್ ಫಲಿತಾಂಶ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು 29 ವಿದ್ಯಾರ್ಥಿಗಳಲ್ಲಿ 04 ಡಿಸ್ಟ್ರಿಕ್ಷನ್, 12 ಪ್ರಥಮ ಶ್ರೇಣಿ, 04 ದ್ವಿತೀಯ ಶ್ರೇಣಿ ಹಾಗೂ 03 ವಿದ್ಯಾರ್ಥಿಗಳು ತೃತೀಯ ಶ್ರೇಣಿ ಪಡೆದಿದ್ದಾರೆ. ಇನ್ನೊಂದು ವಿಶೇಷವೆಂದರೆ ಹಾಜರಾದ 29 ವಿದ್ಯಾರ್ಥಿಗಳಲ್ಲಿ 27 ಜನ ವಿದ್ಯಾರ್ಥಿನಿಯರಿದ್ದು, ಇಬ್ಬರು ವಿದ್ಯಾರ್ಥಿಗಳಿದ್ದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಾಗಿಯೂ ಇಂಗ್ಲಿಷ್ ವಿಷಯದಲ್ಲಿ ಶೇಕಡಾ 86% ಹಾಗೂ ಕನ್ನಡ ವಿಷಯದಲ್ಲಿ ಶೇಕಡಾ 100 ಫಲಿತಾಂಶ ಗಳಿಸಿ ದಾಖಲೆ ಬರೆದಿದ್ದಾರೆ. ಮೊಹಮ್ಮದ್ ರಫಿ ನೆಗಳೂರು ಶೇಕಡಾ 93.3, ಸಿರಿನ್ ಬಾನು ಶೇಕಡಾ 92.5, ಸಂಗೀತ ಹೆಬ್ಬಾರೆ ಮತ್ತು ನಿರ್ಮಲ ಬೆಳಗಟ್ಟಿ ಶೇಕಡಾ 88.33 ಅಂಕಗಳಿಸಿ ಅತೀ ಹೆಚ್ಚು ಅಂಕ ಪಡೆದ ಸಾಧನೆ ಮಾಡಿದ್ದಾರೆ.

ಇವರ ಸಾಧನೆಗೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಪ್ರಾಚಾರ್ಯರು ಉಪನ್ಯಾಸಕರು ಹಾಗೂ ಹೊಳಲಿನ ಶಿಕ್ಷಣ ಪ್ರೇಮಿಗಳು ಅಭಿನಂದಿಸಿದ್ದಾರೆ…

ವರದಿ, ಅಜಯ್ ಛಲವಾದಿ, ಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend