ನಾಣ್ಯಾಪುರ:ಮೆಣಸಿನಕಾಯಿ ಬೆಳೆಗೆ ರೋಗ,ಸ್ಪಂದಿಸದ ಅಧಿಕಾರಿಗಳು-ಆರೋಪ…!!!

Listen to this article

ನಾಣ್ಯಾಪುರ:ಮೆಣಸಿನಕಾಯಿ ಬೆಳೆಗೆ ರೋಗ,ಸ್ಪಂದಿಸದ ಅಧಿಕಾರಿಗಳು-ಆರೋಪ-

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ದಶಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ,ನಾಣ್ಯಾಪುರ ಗ್ರಾಮದಲ್ಲಿನ ಬಹುತೇಕ ರೈತರು ತಾವು ಹೊಲದಲ್ಲಿ ಬೆಳೆದ ಕೆಂಪು ಮೆಣಸಿನಕಾಯಿ ಬೆಳೆಗೆ. ನಿರಂತರ ಸುರಿದ ಮಳೆಗೆ ಹಾಗೂ ಸಾಂಕ್ರಾಮಿಕ ಬೆಂಕಿ ರೋಗಕ್ಕೆ ತುತ್ತಾಗಿದೆ, ಎಕರೆಯೊಂದಕ್ಕೆ 75ಸಾವಿರ ₹ದಂತೆ ರೈತರು ಬಂಡವಾಳ ಹಾಕಿದ್ದಾರೆ.ಫಲ ಕೈಗೆ ಸಿಕ್ಕಿ ಮಾರುಕಟ್ಟೆಗೆ ಹೋಗಿದ್ದರೆ ಎಕರೆಗೆ ಸುಮಾರು 2ಲಕ್ಷ ರೂ ಸಿಗುತಿತ್ತು.ಇಂತಹ ದುಭಾರಿ ಬೆಲೆಯ ಕೆಂಪು ಮೆಣಸಿನಕಾಯಿ ಬೆಳೆ ಗ್ರಾಮದಲ್ಲಿ ಒಟ್ಟು 200ಎಕರೆಯಷ್ಟು ನಷ್ಟವಾಗಿದೆ. ಅಂದಾಜು ಹತ್ತು ಕೋಟಿಯಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.ರೈತರು ಕಂಗಾಲಾಗಿದ್ದಾರೆ ಆದ್ರೆ ಯಾವೊಬ್ಬ ಕಂದಾಯ ಅಧಿಕಾರಿ ಸ್ಥಳಕ್ಕೆ ಬಂದಿಲ್ಲ,ಕಂದಾಯ ಇಲಾಖೆ ಅಧಿಕಾರಿಗಳು ರೈತರ ಸಂಕಷ್ಟಕ್ಕೆ ಸ್ಪಂದಿಸುತಿಲ್ಲ ಎಂದು ರೈತರು ದೂರಿದ್ದಾರೆ.ಕಂದಾಯ ಇಲಾಖಾಧಿಕಾರಿ ರೈತರ ಅಳಲನ್ನು ಆಲಿಸಿಲ್ಲ,ಅನನು ಭವಿ ಸಿಬ್ಬಂದಿ ಕಳುಹಿಸಿ ನಿರ್ಲಕ್ಷ್ಯ ತೋರಿದ್ದಾರೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. *ನಿದ್ರೆಯಲ್ಲಿ ಕಂದಾಯ ಅಧಿಕಾರಿ*-ತಾಲೂಕಾಡಳಿತ ಶೀಘ್ರವೇ ಸ್ಥಳ ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಬೇಕಿದೆ,ಸ್ಥಳೀಯ ಕಂದಾಯ ಅಧಿಕಾರಿ ಪ್ರಭಾಕರ ಬೇಕಾ ಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ,ಈ ಮೂಲಕ ಸ್ಥಳೀಯ ಕಂದಾಯ ಆಡಳಿತ ನಿದ್ರಿಸುತ್ತಿದೆ ಎಂದು ರೈತರು ಆಕ್ರೋಶ ವ್ಯೆಕ್ತಪಡಸಿದ್ದಾರೆ. ಸ್ಥಳ ಸಮೀಕ್ಷೆಗೆ ಅನನುಭವಿ ಸಿಬ್ಬಂದಿಯನ್ನು ನೇಮಿಸಿದ್ದು ಅವರು ಸ್ಥಳಕ್ಕೆ ಬಂದು ಜಿಪಿಎಸ್ ಮಾಡಿದ್ದು,ಮೆಣಸಿನ ಬೆಳೆ ಹೊಲದಲ್ಲಿ ಜಿಪಿಎಸ್ ಮಾಡಿದ್ದಾರೆ ಪ್ರಮಾಣ ಪತ್ರದಲ್ಲಿ ಇತರೆ ಬೆಳೆ ಬೆಳೆಯ ಮಾಹಿತಿ ನಮೂದಾಗಿದೆ ಇದು ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ರೈತರು ದೂರಿದ್ದಾರೆ.ಶೀಘ್ರವೇ ತಹಶಿಲ್ದಾರರಾದ ಶ್ರೀಮತಿ ಶರಣಮ್ಮರವರು ತಾಲೂಕಿನ ಗಡಿಭಾಗದ ಗ್ರಾಮ ನಾಣ್ಯಾಪುರ ಗ್ರಾಮಕ್ಕೆ ಖುದ್ದು ಭೆಟ್ಟಿ ನೀಡಬೇಕಿದೆ,ದುಭಾರಿ ಬೆಲೆಯ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ಹಣ ಶೀಘ್ರವಾಗಿ ಮಂಜೂರು ಮಾಡಬೇಕಿದೆ.ಈ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ರೈತರ ಬಗ್ಗೆ ಕಾಳಜಿ ವಹಿಸಿ ಸೂಕ್ತ ಪರಿಹಾರ ಶೀಘ್ರವೇ ಕಲ್ಪಿಸಿಕೊಡಬೇಕಿದೆ,ಎಂದು ಗ್ರಾಮಸ್ಥರು ಹಾಗೂ ರೈತರು,ವಿವಿದ ಸಂಘಟನೆಗಳ ಪದಾಧಿಕಾರಿಗಳು ಈ ಮೂಲಕ ಒತ್ತಾಯಿಸಿದ್ದಾರೆ…

ವರದಿ.ಧನಂಜಯ್ ಹಗರಿಬೊಮ್ಮನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend