ವನ್ಯಜೀವಿಗಳ ಹಾವಳಿ-ರೈತರಿಗೆ ನಿತ್ಯ ವನವಾಸ…!!!

Listen to this article

ವನ್ಯಜೀವಿಗಳ ಹಾವಳಿ-ರೈತರಿಗೆ ನಿತ್ಯ ವನವಾಸ

-ಜನ್ಮ ನೀಡಿರೋ ತಾಯಿ, ಜೀವನ ನೀಡಿರೋ ನಾಡು,ದೇಶ ಕಾಯೋ ಸೈನಿಕ,ಅನ್ನ ನೀಡೋ ರೈತ ಇವರೆಲ್ಲಾ ಪೂಜ್ಯ ನೀಯರು.
ಆದ್ರೆ ನಮ್ಮ ಬ್ರಷ್ಠ ರಾಜಕೀಯ ಹಾಗೂ ಬ್ರಷ್ಠ ಅಧಿಕಾರಿಗಳಿರೋ ವ್ಯವಸ್ಥೆಯೊಂದಾಗಿ,ಸರ್ಕಾರದಿಂದ ಅನ್ನದಾತರಿಗೆ ಕೊಂಚಿತ್ತೂ ಗೌರವ ಸಿಗುತ್ತಿಲ್ಲ ಅವರಿಗೆ ನೆಮ್ಮದಿ ಸಿಗುತಿಲ್ಲ.
ಇದಕ್ಕೆ ಸಾಕ್ಷಿ ಬಳ್ಳಾರಿ ಹಾಗೂ
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ,ಕೂಡ್ಲಿಗಿ, ಸಂಡೂರು ತಾಲೂಕುಗಳಲ್ಲಿನ. ಅರಣ್ಯದಂಚಿನ ಹೊಲಗಳ ಬಹುತೇಕ ರೈತರ ಗೋಳಾಗಿದೆ.
ಅರಣ್ಯದಂಚಿನ ಬಹುತೇಕ ಗ್ರಾಮಗಳ ರೈತರು ವನ್ಯ ಜೀವಿಗಳ ಹಾವಳಿಯಿಂದಾಗಿ,ಹಗಲಿರುಳು ಹೊಲದಲ್ಲಿನ ಫಲ ಕಾಯಬೇಕಿದೆ ಅದಕ್ಕಾಗಿ ಅವರು ನಿತ್ಯ ವನವಾಸ ಅನುಭವಿಸುವಂತಾಗಿದೆ,
ಹಗರಿಬೊಮನಹಳ್ಳಿ ತಾಲೂಕು ನಾಣ್ಯಾಪುರ ಗ್ರಾಮದಲ್ಲಿನ ಬಹುತೇಕ ರೈತರು,ಕತ್ತಲಾದರೆ ಸಾಕು ಮನೆಗೊಬ್ಬರಂತೆ ಬೆತ್ತ ಹಾಗೂ ಬ್ಯಾಟರಿ ಹಿಡಿದು ಹೊಲಗಳಿಗೆ ತೆರಳುತ್ತಾರೆ. ತಮ್ಮ ಜೀವದ ಹಂಗು ತೊರೆದು ಹೆಂಡರು ಮಕ್ಕಳನ್ನು ಮನೆಯಲ್ಲಿ ಬಿಟ್ಟು, ಅಡವಿಗೆ ಅಂಟಿಕೊಂಡುರುವ ತಮ್ಮ ಹೊಲ ಸೇರುತ್ತಾರೆ
ಕಾರಣ ಬಿತ್ತನೆ ಸಂದರ್ಭದಲ್ಲಿ ಕಾಡುಹಂದಿಗಳು ಹೊಲದಲ್ಲಿ ಬಿತ್ತರುವ ಕಾಳುಗಳನ್ನು ಹೆಕ್ಕಿ ಹೆಕ್ಕಿ ತಿನ್ನುತ್ತವೆ,ಅವುಗಳ ಹಾವಳಿ ತಪ್ಪಿಸಲೆಂದೇ ರೈತರು ರಾತ್ರಿ ಹೊತ್ತಲ್ಲಿ ನಿದ್ದೆಗೆಟ್ಟು ಹೊಲದಲ್ಲಿನ ಬಿತ್ತಿದ ಕಾಳನ್ನು ಕಾಯಬೇಕಿದೆ.
ಬೆಳೆ ಬಿತ್ತನೆ ಮಾಡಿದಾಗಿನಿಂದ ಫಸಲು ಕೊಯ್ಲು ಮಾಡಿ ಫಲ ಮನೆ ತಲುಪುವ ವರೆಗೂ ವನ್ಯ ಜೀವಿಗಳಿಂದ ರಕ್ಷಿಸಬೇಕಿದೆ.
ಕರಡಿ ಹಾಗೂ ಚಿರತೆ ಕಾಣಿಸಿಕೊಳ್ಳುವ ಅರಣ್ಯದಂಚಿನ ಹೊಲದ ರೈತರು ತಮ್ಮ ಪ್ರಾಣದ ಹಂಗು ತೊರೆದು ತಾವು ಬಿತ್ತಿರುವ ಕಾಳನ್ನು ಕಾಯಬೇಕಿದೆ.
ಇದು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ತಾಲೂಕುಗಳ ಅರಣ್ಯದಂಚಿನಲ್ಲಿರುವ ಗ್ರಾಮಗಳ ರೈತರ ನಿತ್ಯದ ಗೋಳಾಗಿದೆ.
ಬಹುತೇಕ ಗ್ರಾಮಗಳ ಹೊಲಗಳಿಗೆ ಅಡವಿ ಹಂದಿಗಳು ಗುಂಪು ಗುಂಪಾಗಿ ಲಗ್ಗೆ ಇಡುತ್ತಿದ್ದು, ಕೆಲವೆಡೆಗಳಲ್ಲಿ ಕರಡಿ,ನವಿಲು, ಗುಬ್ಬಿ,ಪಾರಿವಾಳ ಸೇರಿದಂತೆ ಕೆಲ ಪಕ್ಷಿಗಳು ಹೊಲಗಳಿಗೆ ಲಗ್ಗೆ ಹಾಕಿ ಬೆಳೆ ಹಾಳು ಮಾಡುತ್ತಿವೆ ಎಂದು ರೈತರು ದೂರಿದ್ದಾರೆ.ಕೆಲವೊಮ್ಮೆ ದಾಳಿ ಮಾಡಿದ ಹಂದಿಗಳನ್ನು ಹಿಮ್ಮೆಟ್ಟಲು ಪ್ರಯತ್ನಿಸಿದಾಗ, ಅವುಗಳ ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿರುವ ಸಾಕ್ಷಿಗಳೂ ಇವೆ. ಹಾಗೂ ದಾಳಿ ಯಿಂದಾಗಿ ಗಂಭೀರವಾಗಿ ಗಾಯಗೊಂಡು ಅಂಗಹೂನರಾಗಿರುವ ರೈತರೂ ಇದ್ದಾರೆ,ಅವರಿಗೆ ಯಾವುದೇ ಪರಿಹಾರ ನೆರವು ಸಿಕ್ಲಿಲ್ಲ ಬೆಳೆ ಪರಿಹಾರ ಕೇವಲ ಲಕ್ಕ ಪತ್ರಗಳಿಗೇ ಸೀಮಿತವಾಗಿವೆ,ಅದು ರೈತರ ಪಾಲಿಗೆ ಕುಸುಮ..
ಸೈನಿಕರು ಹಗಲಿರುಳು ದೇಶಕಾದರೆ ಇಲ್ಲಿ ರೈತ ಹಗಲಿರುಳು ಜನರ ಅನ್ನವನ್ನ ಕಾಯುತ್ತಿದ್ದಾನೆ,ಆದ್ರೆ ಇವರ ಒಳಿತನ್ನ ಕಾಯ ಬೇಕಿರೋ ಸರ್ಕಾರಗಳು ಇವರ ಒಳಿತನ್ನ ಕಾಯದೇ ಹೊಣೆಗೇಡಿತನ ತೋರುತ್ತಿದೆ.. ನಾಚಿಕೆಯಾಬೇಕಿದೆ ಭ್ರಷ್ಠ ರಾಜಕಾರಣಿಗಳಿಗೆ ಹಾಗೂ ಭ್ರಷ್ಠ ಅಧಿಕಾರಿಗಳಿಗೆ..
ಸರ್ಕಾರ ವನ್ಯ ಜೀವಿಗಳಿಂದ ರಕ್ಷಿಸಲು ಹತ್ತಾರು ಯೋಜನೆಗಳನ್ನ ಜಾರಿಗೆ ತಂದಿದೆ ಯಾದರೂ ಅವೆಲ್ಲಾ ಕೇವಲ ಲೆಕ್ಕ ಪತ್ರಕ್ಕೆ ಸೀಮಿತವಾಗಿವೆ,
ಪರಿಹಾರಗಳು ಪಲಾನುಭವಿಗಳಿ ತಲುಪುತಿಲ್ಲವೆಂದು ರೈತ ಮುಖಂಡರು ದೂರಿದ್ದಾರೆ.
*ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು-ವಂದೇ ಮಾತರಂ ಜಾಗೃತಿ ವೇದಿಕೆ ಒತ್ತಾಯ*
ಇದು ಕೇವಲ ಒಂದು ಗ್ರಾಮದ ರೈತರ ಗೋಳಲ್ಲ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಎಲ್ಲಾ ತಾಲೂಕು ಗಳಲ್ಲಿನ ಅರಣ್ಯದಂಚಿನ ಹೊಲಗಳ ರೈತರ ಗೋಳಾಗಿದೆ. ಕಾರಣ ಸಚಿವರಾದ ಆನಂದ ಸಿಂಗ್ ರವರು ಹಾಗೂ ಜಿಲ್ಲಾಧಿಕಾರಿಗಳು, ಸೂಕ್ತ ಕ್ರಮಗಳನ್ನು ಶೀಘ್ರವೇ ಕೈಗೊಳ್ಳಬೇಕಿದೆ ಎಂದು ವಂದೇ ಮಾತರಂ ಜಿಲ್ಲಾಧ್ಯಕ್ಷ ವಿ.ಜಿ.ವೃಷಭೇಂದ್ರ ಈ ಮೂಲಕ ಒತ್ತಾಯಿಸಿದ್ದಾರೆ.
ಸಚಿವರಾದ ಆನಂದ ಸಿಂಗ್ ರವರು ಹಾಗೂ ಜಿಲ್ಲಾಧಿಕಾರಿಗಳು ಜನಪರ ಕಾಳಜಿ ಮತ್ತು ರೈತರ ಪರ ಒಲವು ಹೊಂದಿದವರಾಗಿದ್ದು, ವನ್ಯ ಜೀವಿಗಳಿಂದಾಗಿ ರೈತರು ಅನುಭವಿಸುತ್ತಿರುವ ವನವಾಸದಿಂದ ಮುಕ್ತಗೊಳಿಸಬೇಕಿದೆ.ಈ ನಿಟ್ಟಿನಲ್ಲಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆಗೆ ಸೂಕ್ತ ನಿರ್ಧೇಶನಗಳನ್ನು ನೀಡಿ,
ಅಗತ್ಯ ಕ್ರಮಗಳನ್ನು ಶೀಘ್ರವೇ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಸೂಚಿಸಬೇಕಿದೆ ಎಂದು ವಂದೇ ಮಾತರಂ ಜನ ಜಾಗೃತಿ ವೇದಿಕೆ ಈ ಮೂಲಕ ಅವರಲ್ಲಿ ಮನವಿ ಮಾಡಿದೆ..

ವರದಿ. ಬಸಣ್ಣಿ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend