ಥ್ಯಾಲಸೇಮಿಯ ಕಾಯಿಲೆಗೆ ತುತ್ತಾಗಿರುವ ಗೌತಮಗೆ ಲಾಕಡೌನನಿಂದ ಚಿಕಿತ್ಸೆಗೆ ತೊಂದರೆ…!!!

Listen to this article

ಥ್ಯಾಲಸೇಮಿಯ ಕಾಯಿಲೆಗೆ ತುತ್ತಾಗಿರುವ ಗೌತಮಗೆ ಲಾಕಡೌನನಿಂದ ಚಿಕಿತ್ಸೆಗೆ ತೊಂದರೆ.

ವರದಿ ವೀರೇಶ್ ಹಳೇಕೋಟೆ.

ಪ್ರಿಯ ಓದುಗರೇ ವಿದಿಯಾಟ ಎಂಥಹ ವಿಚಿತ್ರ ಅಲ್ವಾ ಖುಷಿ ಖುಷಿಯಿಂದ ಗೆಳೆಯರೊಂದಿಗೆ ಆಟವಾಡಬೇಕಿದ ಪುಟ್ಟ ಬಾಲಕ ಗೌತಮ ಹುಟ್ಟಿದ ಮೂರು ತಿಂಗಳ ನಂತರ ಥ್ಯಾಲಸೇಮಿಯ ಮೇಜರ್ ಕಾಯಿಲೆ ತುತ್ತಾಗಿದಾನೆ.ಪುಟ್ಟ ಕಂದನ ಕಥೆ ಕೇಳಿದರೆ ಎಂಥವರ ಮನಸ್ಸಿಗೆ ನೋವುಗುತ್ತೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಮೊರಿಗೆರಿ ಗ್ರಾಮದ ಹೇಮನಗೌಡ ವಸಂತಿಕುಮಾರಿ ದಂಪತಿಗೆ ಇಬ್ಬರೂ ಗಂಡು ಮಕ್ಕಳಿದ್ದಾರೆ ಮೊದಲನೇ ಮಗ ಗೌತಮ.ಜನನವಾದ 3 ತಿಂಗಳ ನಂತರ ನೆಗಡಿ ಜ್ವರ ಕೆಮ್ಮು ಚರ್ಮ ಬೆಳಗಾಗುವ ಲಕ್ಷಣಗಳು ಕಂಡುಬಂದಿದ್ದಾವೆ. ಹೊಸಪೇಟೆ ಮಕ್ಕಳ ವೈದ್ಯರ ಬಳಿ ಚಿಕಿತ್ಸೆಯನ್ನು ಕೋಡಿಸಿದ್ದಾಗ ಮಗು ಬಹಳ ನಿಶ್ಯಕ್ತಿಯಿದೆ ದಾವಣಗೆರೆಗೆ ಹೋಗಿರೆಂದು ಸಲಹೆ ಕೊಟ್ಟಿದ್ದಾರೆ.ಅಲ್ಲಿನ ವೈದರ ಬಳಿ ಹೋದಗ ರಕ್ತ ಕಡಿಮೆಯೆಂದು ಹೇಳಿದ್ದಾರೆ. ಮೊದಲು ರಕ್ತ ಹಾಕಿಸಿ ನಂತರ ಕೆಲವು ಟೆಸ್ಟ್ ಮಾಡಿಸಿದ್ದಾರೆ ರಿಪೋರ್ಟನಲ್ಲಿ ಬಿ ಥ್ಯಾಲಸೇಮಿಯ ಮೇಜರ್ ಕಾಯಿಲೆಯಿದೆ ರಕ್ತ ಹಾಕಿಸಿದರೆ ಕಡಿಮೆಯಾಗುತ್ತದೆಂದು ಹೇಳಿದ್ದಾರೆ. ಬೆಂಗಳೂರು ಮಣಿಪಾಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮಾಡಿಸಿದರು ರಕ್ತದ ತೊಂದರೆಯಿದೆ ಎಂದು ಹೇಳಿದ್ದಾರೆ.ಗೌತಮಗೆ ಈಗ 17 ವರ್ಷ 9ನೇ ತರಗತಿ ಓದುತ್ತಿದ್ದಾನೆ.ಆರಂಭದ ಪ್ರತಿ ತಿಂಗಳು 100 ಮಿ.ಲಿ ರಷ್ಟು ರಕ್ತ ಬೇಕಾಗಿತ್ತು ಈಗ ಪ್ರತಿ ತಿಂಗಳು 600 ರಿಂದ 700 ಮಿ.ಲಿ ರಷ್ಟು ರಕ್ತ ಬೇಕಾಗುತ್ತಿದೆ ಯಾರದಾರು ದಾನಿಗಳು ರಕ್ತ ಕೊಡುತ್ತಾರೆ.ರಕ್ತ ಹಾಕಿಸಿದ 20 ರಿಂದ 25 ದಿನಗಳು ಎಲ್ಲಾ ಮಕ್ಕಳಂತೆ ಚೆನ್ನಾಗಿರುತ್ತಾನೆ.ದೇಹದಲ್ಲಿ ರಕ್ತ ಕಡಿಮೆಯಾದರೆ ನಿಶ್ಯಕ್ತಿಯಾಗಿ ಸರಿಯಾಗಿ ಊಟ ಮಾಡುವುದಿಲ್ಲ ಆಟವಾಡುವುದಿಲ್ಲ ಮುದರಿಕೊಂಡು ಮಲಗಿಕೊಳ್ಳುತ್ತಾನೆ.ಈ ಕಾಯಿಲೆ ಅನುವಂಶಿಕವಾಗಿ ಬರಬಹುದು ಕೆಂಪು ರಕ್ತ ಕಣಗಳ ಜೀವಿತ ಅವಧಿ ಕಡಿಮೆಯಾಗಿರುತ್ತದೆ ಮತ್ತು ಸಹಜವಾಗಿ ರಕ್ತ ಉತ್ಪತ್ತಿಯಾಗುವುದಿಲ್ಲ.ಪ್ರತಿ ತಿಂಗಳು ರಕ್ತ ಹಾಕಿಸಬೇಕು ಇಲ್ಲಂದ್ರೆ ಬದುಕುವುದು ಕಷ್ಟವೆಂದು ವೈದ್ಯರು ಹೇಳಿದ್ದಾರೆ.ಅಸ್ತಿ ಮಜ್ಜೆ ಶಸ್ತ್ರಚಿಕಿತ್ಸೆಯಿಂದ(Bone Merrow.Transplantion surgery)ಶಾಶ್ವತ ಪರಿಹಾರವಾಗುತ್ತದೆ ಅದರೆ ಗ್ಯಾರಂಟಿಯಿಲ್ಲ.ಶಸ್ತ್ರಚಿಕಿತ್ಸೆಗೆ 25 ಲಕ್ಷ ರೂಪಾಯಿ ಖರ್ಚುಗುತ್ತೆಂದು ವೈದ್ಯರು ತಿಳಿಸಿದ್ದಾರೆ ಬಾಲಕನ ತಂದೆ ಕೂಲಿ ಕೆಲಸ ತಾಯಿ ಟೈಲರಿಂಗ್ ಮಾಡಿ ಜೀವನ ನೆಡೆಸುತ್ತಾರೆ ಇಂತಹ ಕಷ್ಟದಲ್ಲಿ ಇದ್ದಿವಿ ಅಷ್ಟೊಂದು ದುಡ್ಡು ಕೊಟ್ಟು ಶಸ್ತ್ರಚಿಕಿತ್ಸೆ ಮಾಡಿಸುದಕ್ಕೆ ಅಗುವುದಿಲ್ಲವೆಂದು ಪ್ರತಿ ತಿಂಗಳು ರಕ್ತ ಹಾಕಿಸುವುದೆ ಒಳಿತೆಂದು ಸುಮಾರು 16 ವರ್ಷಗಳಿಂದ ಪ್ರತಿ ತಿಂಗಳಿಗೆ 7 ರಿಂದ 8 ಸಾವಿರ ರೂಪಾಯಿ ಚಿಕಿತ್ಸೆಯ ವೆಚ್ಚವಾಗುತ್ತದೆ. ಲಾಕಡೌನಯಿಂದ ಕೆಲಸವಿಲ್ಲದೆ ಜೀವನ ನೆಡೆಸುವುದೆ ತುಂಬಾ ಕಷ್ಟವಾದ ಸಮಯದಲ್ಲಿ ಇನ್ನೂ ಚಿಕಿತ್ಸೆಗೆ 7 ರಿಂದ 8 ಸಾವಿರ ರೂಪಾಯಿ ಎಲ್ಲಿಂದ ತರಬೇಕೆಂದು ವರದಿಗಾರರು ದೂರವಾಣಿ ಮೂಲಕ ಸಂಪರ್ಕ ಮಾಡಿದಾಗ ತಮ್ಮ ಅಳಲು ತೋಡಿಕೊಂಡರು.ಈ ವರದಿ ಓದಿದವರು ತಮ್ಮ ಕೈಲಾದಷ್ಟು ಹಣಕಾಸಿನ ಸಹಾಯ ಮಾಡಬೇಕೆಂದು ಹೇಮನಗೌಡರ ಕಳಿಕಳಿಯ ಮನವಿ ಮಾಡಿದ್ದಾರೆ. ಅವರ ಪರವಾಗಿ ನಮ್ಮ ಸಂಪಾದಕರು ಹಾಗೂ ವರದಿಗಾರರು ಕಡೆಯಿಂದ ಕಳಿಕಳಿಯ ಮನವಿ.ದಯವಿಟ್ಟು ನಿಮ್ಮ ಕೈಲಾದಷ್ಟು ಸಹಾಯ ಮಾಡಿರಿ. ಪೋನ್ ಪೇ ನಂಬರ್ 9980728741. ಅಥವಾ ಅಕೌಂಟ್ ನಂಬರ್..64055542591 SBI ಹಗರಿಬೋಮ್ಮನಹಳ್ಳಿ ಬ್ರಾಂಚ್ IFSC ಕೋಡ್ SBIN0040271…

 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend