ನಾಣ್ಯಾಪುರ:ನೈರ್ಮಲ್ಯತೆ ಕಾಪಾಡಿ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ…!!!!

Listen to this article

*ನಾಣ್ಯಾಪುರ:ನೈರ್ಮಲ್ಯತೆ ಕಾಪಾಡಿ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ*- ವಿಜಯನಗರ ಜಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕುದಶಮಾಪುರ ಗ್ರಾಮಪಂಚಾಯ್ತಿ ವ್ಯಾಪ್ತಿಯ ನಾಣ್ಯಾಪುರ ಗ್ರಾಮದ ಚಪ್ಪರದಳ್ಳಿಯಲ್ಲಿ, ಕೆಲ ಚರಂಡಿಗಳು ತ್ಯಾಜ್ಯ ನೀರು ಕಸದಿಂದ ಹೂಳು ತುಂಬಿ ಕೊಳೆತು ನಾರುತ್ತಿವೆ. ಚಪ್ಪರದಹಳ್ಳಿ ಭಾಗದಲ್ಲಿ ನೈರ್ಮಲ್ಯತೆ ಮರೀಚಿಕೆಯಾಗಿದೆ ಇಲ್ಲಿ ಮೂಲಭೂತ ಸೌಕರ್ಯ ಗಳನ್ನು ಸಮರ್ಪಕವಾಗಿ ಕಲ್ಪಿಸಬೇಕೆಂದು ಗ್ರಾಮಸ್ಥರು ಕೋರಿದ್ದಾರೆ.
ಚರಂಡಿಗಳು ತುಂಬಿ ಹಲವು ತಿಂಗಳುಗಳೇ ಕಳೆದು ಹೋಗಿದ್ದು ರೋಗ ಋಜನಗಳಿಂದ ಬಳಲುವಂತಾಗಿದೆ,ಮಕ್ಕಳು ವೃದ್ಧರು ಆಸ್ಪತ್ರೆಗೆ ಅಲೆದಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ ಎಂದು ಕೆಲವು ಗ್ರಾಮಸ್ಥರು ದೂರಿದ್ದಾರೆ,
*ಸದಸ್ಯರ ಸ್ಪಂಧನೆ:-* ಗ್ರಾಮಪಂಚಾಯ್ತಿ ಸದಸ್ಯರು ತಮ್ಮ ಅಹವಾಲಿಗೆ ಸ್ಪಂಧಿಸಿದ್ದಾರೆ ಸ್ಥಳಕ್ಕೆ ಬಂದು ಪರಿಶೀಲಿಸಿ, ಸಮಸ್ಯಗಳ ಪಟ್ಟಿ ಮಾಡಿ ಗ್ರಾಪಂಗೆ ತಮ್ಮ ಲರವಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಗ್ರಾಮಸ್ಥರು ಸದಸ್ಯರ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಹುದಿನಗಳಿಂದೂ ಈ ಕುರಿತು ಗ್ರಾಪಂ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ಹಲವು ಬಾರಿ ತಂದಿದೆ,ಈ ಈವರೆಗೂ ಸೌಜನ್ಯಕ್ಕೆ ಸ್ಥಳಕ್ಕಾಗಮಿಸದೇ ಉದ್ಧಠನ ತೋರಿದ್ದಾರೆಂದು ಚಪ್ಪರದಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯೆಕ್ತಪಡಿಸಿದ್ದಾರೆ.ನಾಣ್ಯಾಪುರ ಗ್ರಾಮದ ಚಪ್ಪರದಹಳ್ಳಿಯಲ್ಲಿ ನೈರ್ಮಲ್ಯತೆ ಮರೀಚಿಕೆಯಾಗಿದ್ದು ವಾತಾವರಣವನ್ನು ಸ್ವಚ್ಚಗೊಳಿಸಬೇಕಿದೆ. ಅಗತ್ಯ ಮೂಲಭೂತ ಸೌರ್ಕಗಗಳನ್ನು ಸಮರ್ಪಕವಾಗಿ ಶೀಘ್ರವೇ ಒದಗಿಸಬೆಕಿದೆ ಎಂದು ನಾಣ್ಯಾಪುರ ಚಪ್ಪರದಳ್ಳಿ ನಿವಾಸಿಗಳು ಹಕ್ಕೊತ್ತಾಯ ಮಾಡಿದ್ದಾರೆ. ಗ್ರಾಮದಲ್ಲಿಯ ಎಲ್ಲಾ ಕುಡಿಯೋ
ನೀರಿನ ಟ್ಯಾಂಕ್ ಗಳನ್ನು ತೊಳೆದು ಸ್ವಚ್ಚಗೊಳಿಸಬೇಕಿದೆ, ಮತ್ತು ಟ್ಯಾಂಕ್ ಗಳ ಸುತ್ತ ಮುತ್ತ ಬೃಹತ್ ಕೆಸರು ಗದ್ದೆ ನಿರ್ಮಾಣವಾಗಿದ್ದು.ಕಲುಷಿತ ನೀರು ಸರಬರಾಜಾಗೋ ಸಾಧ್ಯತೆ ಇದ್ದು ವಾತಾವರಣದಲ್ಲಿ ಸ್ವಚ್ಚತೆ ಕಾಪಾಡಬೇಕಿದೆ.ಕೆಲವೆಡೆಗಳಲ್ಲಿ ಮನೆಗಳಿಗೆ ಹೊಂದಿಕೊಂಡಂತೆ ತಿಪ್ಪೆಗಳಿದ್ದು ,ಕೊಳೆತು ರೋಗ ಹರಡುತ್ತಿವೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ನಿರ್ಮಾಣವಾಗಿದೆ.ಕಾರಣ ಶೀಘ್ರವೇ ತಿಪ್ಪೆಗಳನ್ನು ಗ್ರಾಮದ ಜನ ವಸತಿ ಸ್ಥಳದಿಂದ ಕನಿಷ್ಠ 1000ಮೀಟರ್ ಅಂತರ ಕಾಪಾಡಬೇಕಿದೆ.
ಈ ನಿಟ್ಟಿನಲ್ಲಿ ದಶಮಾಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕ್ರಮ ಜರುಗಿಸಬೇಕಿದೆ,
ಸಮರ್ಪಕವಾಗಿ ಕುಡಿಯೋ ನೀರಿನ ವ್ಯವಸ್ಥೆ ಮಾಡಬೇಕಿದೆ ಮತ್ತು ಹಲವೆಡೆಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಿ ವ್ಯವಸ್ಥೆ ಮಾಡಬೇಕಿದೆ, ಪಿಡಿಓ ಅತಿಶೀಘ್ರವೇ ಚಪ್ಪರದಳ್ಳಿಗೆ ಬೆಟ್ಟಿ ನೀಡಿ ಪರಿಶೀಲಿಸಬೇಕು ಹಾಗೂ ಶೀಘ್ರವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು, ನಾಣ್ಯಾಪುರ ಚಪ್ಪರದಳ್ಳಿ ನಿವಾಸಿಗಳು ಗ್ರಾಮಸ್ಥರು ಈ ಮೂಲಕ ಒತ್ತಾಯಿಸಿದ್ದಾರೆ.ಗ್ರಾಪಂ ಸದ್ಯರು ಗ್ರಾಮಸ್ಥರ ಮನವಿಗೆ ಸ್ಪಂಧಿಸಿದ್ದು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಮನವಿ ಅರ್ಪಿಸಿದ್ದಾರೆ,
ಆದರೆ ದಸದಮಾಪುರ ಗ್ರಾಪಂ ಆಧಿಕಾರಿ ಹಾಗೂ ಸಿಬ್ಬಂದಿ ಸಕಾಲಕ್ಕೆ ಸ್ಪಂಧಿಸಬೇಕಿದೆ.
ಗ್ರಾಪಂ ಅಧಕಾರಿ ನಿರ್ಲಕ್ಷ್ಯ ತೋರಿದ್ದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಲ್ಲಿ ಹಾಗೂ ಜಿಲ್ಲಾಧಿಕಾರಿಗಳಲ್ಲಿ ದೂರು ನೀಡಲಾಗುವುದೆಂದು ನಾಣ್ಯಾಪುರ ಚಪ್ಪರದಳ್ಳಿ ನಿವಾಸಿಗಳು ಈ ಮೂಲಕ ಎಚ್ಚರಿಸಿದ್ದಾರೆ…

ವರದಿ. ಧನಂಜಯ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend