ಸಿಂಧನೂರು : ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಹುಟ್ಟು ಹಬ್ಬ ಆಚರಣೆ…!!!

Listen to this article

ಸಿಂಧನೂರು : ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಹುಟ್ಟು ಹಬ್ಬ ಆಚರಣೆ.
ಡಾ. ಜಿ. ಪರಮೇಶ್ವರ ರವರು 06-ಅಗಸ್ಟ್1951 ರಂದು ಗೊಲ್ಲಹಲ್ಲಿಯಲ್ಲಿ ಜನಿಸಿದ್ದಾರೆ.1993 ರಿಂದ ವಿವಿಧ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಹಲವಾರು ಖಾತೆಗಳ ಮಂತ್ರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಸತತ ಎರಡು ಅವದಿಗೂ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದ ಶಿಸ್ತಿನ ಸಿಪಾಯಿ ಆಗಿ ಕೆಲಸ ಮಾಡಿದ್ದಾರೆ. ಉಪ ಮುಖ್ಯಮಂತ್ರಿಗಳಾಗಿಯೂ ರಾಜ್ಯಕ್ಕೆ ಅನೇಕ ಜನಪರ ಕೆಲಸ ಮಾಡಿದ್ದಾರೆ. ರಾಜಕೀಯದಲ್ಲಿ ಅಷ್ಟೇ ಅಲ್ಲದೆ ಶಿಕ್ಷಣ ಕ್ರಾಂತಿಯ ಹರಿಕಾರರು ಕೂಡಾ,ಇವರ ಹುಟ್ಟು ಹಬ್ಬವನ್ನು ಅಖಿಲ ಕರ್ನಾಟಕ ಡಾ.ಜಿ ಪರಮೇಶ್ವರ್ ಯುವ ಸೈನ್ಯವತಿಯಿಂದ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಜಿ ಪರಮೇಶ್ವರ್ ಅವರ 70ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು,ಬ್ರೆಡ್ ಮತ್ತು ಹಣ್ಣುಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಕೆಪಿಸಿಸಿ ಕಾರ್ಯದರ್ಶಿಗಳಾದ ಕೆ. ಕರಿಯಪ್ಪ,ಎಚ್ ಎನ್ ಬಡಿಗೇರ್, ಅಖಿಲ ಕರ್ನಾಟಕ ಡಾ.ಜಿ ಪರಮೇಶ್ವರ್ ಯುವ ಸೈನ್ಯ ತಾಲೂಕು ಅಧ್ಯಕ್ಷ ಬಾಲರಾಜ್ ವಿರುಪಾಪುರ, ಪ್ರಧಾನ ಕಾರ್ಯದರ್ಶಿ ವೀರೇಶ ಬೂದಿವಾಳ ಕ್ಯಾಂಪ್, ಸಹ ಕಾರ್ಯದರ್ಶಿ ಹೇಮಣ್ಣ ಉಪ್ಪಳ, ಪಂಪಾಪತಿ ಜಾಲಿಹಾಳ, ಸಿದ್ದಪ್ಪ, ಮೈಬು,ರುದ್ರಪ್ಪ, ಹನುಮಂತ , ನಾಗರಾಜ,ನರಸಪ್ಪ ಕಟ್ಟಿಮನಿ, ಹನುಮಂತಪ್ಪ ವಕೀಲರು, ಬೂದಿವಾಳ ಹನುಮಂತ, ಗೋಮರ್ಸಿ,ನಿರುಪಾದಿ ಸಾಸಲಮರಿ, ಹನುಮಂತ ವಕೀಲರು ಮಲ್ಲಯ್ಯ ಕ್ಯಾಂಪ್, ಶರಣಬಸವ ಮಲ್ಲಾಪೂರ, ವಿರುಪಣ್ಣ ಬೂದಿವಾಳ, ಸಿದ್ದಪ್ಪ ಸೋಮಲಾಪುರ, ಹೊನ್ನೂರು ಕಟ್ಟಿಮನಿ, ಶಿವರಾಜ ಗುಡುಗಲದಿನ್ನಿ,ಶಾಮಣ್ಣ, ವೆಂಕಟೇಶ ನವಲಿ, ದೇವರಾಜ ಹೊಸಳ್ಳಿ, ಆದಿ ಮಲ್ಲಾಪೂರ ಇನ್ನಿತರರು ಭಾಗವಸಿದ್ದರು….

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend