ಧುಪದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ನೀರಾವರಿ ನಿಗಮಕ್ಕೆ ಸೇರಿದ ಜಾಗದಲ್ಲಿ ಅತೀಕ್ರಮಣವಾಗಿ ನಿರ್ಮಿಸಿದ್ದ ಮನೆಗಳನ್ನು ತೆರವುಗೊಳಿಸಲಾಯಿತು…!!!

Listen to this article

ಘಟಪ್ರಭಾ: ಧುಪದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ನೀರಾವರಿ ನಿಗಮಕ್ಕೆ ಸೇರಿದ ಜಾಗದಲ್ಲಿ ಅತೀಕ್ರಮಣವಾಗಿ ನಿರ್ಮಿಸಿದ್ದ ಮನೆಗಳನ್ನು ಶುಕ್ರವಾರದಂದು ಗೋಕಾಕ ತಹಶಿಲ್ದಾರ ಪ್ರಕಾಶ ಹೊಳೆಪ್ಪಗೋಳ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

ಆರು ಜೆಸಿಬಿ ಹಾಗೂ ಐದು ಟ್ರ್ಯಾಕ್ಟ್‌ರ್‌ಗಳು ನೂರಾರು ಜನ ಸಿಬ್ಬಂದಿಗಳೊಂದೆ ತೆರವು ಕಾರ್ಯಚರಣೆಗೆ ಮುಂದಾದ ಅಧಿಕಾರಿಗಳು ನೀರಾವರಿ ನಿಗಮದ ಕಛೇರಿ ಹಿಂದುಗಡೆ ಇರುವ ರಿ.ಸ.ನಂ-120 ರಲ್ಲಿ ಇರುವ ನೀರಾವರಿ ಇಲಾಖೆಗೆ ಸೇರಿದ 82 ಎಕರೆ ಜಮೀನ ಪೈಕಿ ಸುಮಾರು 30 ಎಕರೆ ಜಮೀನು ಅತಿಕ್ರಮಣವಾಗಿದ್ದು, ಅದರಲ್ಲಿ ಸುಮಾರು 30ಕ್ಕೂ ಹೆಚ್ಚು ಆರ್.ಸಿ.ಸಿ ಹಾಗೂ ಕೆಂಪು ಹಂಚಿನ ಅನಧಿಕೃತ ಮನೆಗಳನ್ನು ತೆರವುಗೊಳಿಸಿದರು.

ಅನೇಕ ವರ್ಷಗಳಿಂದ ಅತೀಕ್ರಮನವಾಗಿದ್ದರೂ ಸಹ ನಿದ್ರೆಯಲ್ಲಿದ್ದ ನೀರಾವರಿ ಇಲಾಖೆ ಅಧಿಕಾರಿಗಳು ಇತ್ತೀಚಿಗೆ ಕೋರ್ಟ ಆದೇಶದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡು ಪೋಲಿಸ ಅಧಿಕಾರಿಗಳ ಸಹಾಯದಿಂದ ಅತೀಕ್ರಮಣ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಅತೀಕ್ರಮಣ ತೆರವುಗೆ ಮುಂದಾದ ಅಧಿಕಾರಿಗಳಿಗೆ ಅತೀಕ್ರಮನಕಾರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಮನೆ ಕಳೆದುಕೊಂಡ ಹೆಣ್ಣು ಮಕ್ಕಳ ರೋಧನ ಮುಗಲು ಮುಟ್ಟಿತ್ತು. ತಮ್ಮ ಕಣ್ಣ ಮುಂದೆ ತಾವು ವಾಸವಿರುವ ಮನೆ ನೆಲ ಸಮವಾಗುದನ್ನು ಕಂಡು ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ಹಿಡಿ ಶಾಪ ಹಾಕುತ್ತಿದ್ದ ದೃಶ್ಯ ಸರ್ವೆ ಸಾಮಾನ್ಯವಾಗಿತ್ತು. ಆದೂ ಯಾವುದಕ್ಕೂ ಜಗ್ಗದ ಅಧಿಕಾರಿಗಳು ನಿರಂತರ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ತೆರವು ಕಾರ್ಯಾಚರಣೆಯಲ್ಲಿ ಬೈಲಹೊಂಗಲ ಡಿ.ಎಸ್.ಪಿ ಶಿವಾನಂದ ಕಟಗಿ, ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ, ಘಟಪ್ರಭಾ ಸಿಪಿಐ ಶ್ರೀಶೈಲ ಬ್ಯಾಕೂಡ, ಮೂಡಲಗಿ ಪಿಎಸ್‌ಐ ಹಾಲಪ್ಪಾ ಬಾಲದಂಡಿ, ಪಿಎಸ್‌ಐ ಆರ್.ಎಸ್.ಕೋತ, ಮುಖ್ಯಾಧಿಕಾರಿ ಕೆ.ಭಿ.ಪಾಟೀಲ, ದುಪದಾಳ ಗ್ರಾಮ ಲೆಕ್ಕಾಧಿಕಾರಿ ಎಂ.ಎಸ್.ಗಡಕರಿ, ನೀರಾವರಿ ಇಲಾಖೆಯ ಚೀಫ್ ಇಂಜಿನಿಯರ್ ಕಣಗಲಿ, ಹಾಗೂ ಸಿಬ್ಬಂದಿ ವರ್ಗವರು, ಮಹಿಳಾ ಹಾಗೂ ಪುರುಷ ಪೊಲೀಸ ಅಧಿಕಾರಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಈಗಾಗಲೆ ಇಲ್ಲಿರುವ ಎಲ್ಲ ಅತಿಕ್ರಮಣಕಾರರಿಗೆ ಮುಂಚಿತವಾಗಿ ತೆರವುಗೊಳಿಸಲು ಸೂಚನೆ ನೀಡಿದ್ದರೂ ತೆರವು ಮಾಡದ ಕಾರಣ ಕೋರ್ಟ ಆದೇಶದಂತೆ ಅತೀಕ್ರಮಣ ತೆರವು ಮಾಡುವದು ಅನಿವಾರ್ಯವಾಯಿತು.
ಪ್ರಕಾಶ ಹೊಳೆಪ್ಪಗೋಳ, ತಹಶಿಲ್ದಾರರು ಗೋಕಾಕ.

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend