ಕೆ. ಆರ್. ಎಸ್ ಪಕ್ಷದ ಲಿಂಗಸುಗೂರು ತಾಲೂಕು ಘಟಕ ಉದ್ಘಾಟನೆ…!!!

Listen to this article

ಕೆ. ಆರ್. ಎಸ್ ಪಕ್ಷದ ಲಿಂಗಸುಗೂರು ತಾಲೂಕು ಘಟಕ ಉದ್ಘಾಟನೆ.

ಲಿಂಗಸುಗೂರು : ತಾಲೂಕಿನ ಗುರು ಭವನದಲ್ಲಿ ನಡೆದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ತಾಲೂಕ ಮಾಸಿಕ ಸಭೆ ನಡೆಯಿತು.

ಕೆ. ಆರ್. ಎಸ್. ಪಕ್ಷದ ಜಿಲ್ಲಾಧ್ಯಕ್ಷ ವೆಂಕಟೇಶ ಮ್ಯಕಲದೊಡ್ಡಿ ಮಾತನಾಡಿ ಬ್ರಷ್ಟ ರಾಜಕೀಯ ಪಕ್ಷಗಳ ಆಡಳಿತ ವ್ಯವಸ್ಥೆಯನ್ನು ಕಿತ್ತೊಗೆದು ರಾಜ್ಯದಲ್ಲಿ ಸ್ವಚ್ಚ,ಪ್ರಾಮಾಣಿಕ, ಪ್ರಾದೇಶಿಕ, ಜನಪರ ರಾಜಕಾರಣಕ್ಕೆ ಪಕ್ಷವನ್ನೂ ಬೆಂಬಲಿಸಬೇಕು ಹಾಗೂ ಲಿಂಗಸೂಗೂರು ಕ್ಷೇತ್ರದ ಜನತೆ ಬರುವ ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯುವ ಘಟಕದ ಅಧ್ಯಕ್ಷ ನಿರುಪಾದಿ ಕೆ ಗೋಮರ್ಸಿ ಮಾತನಾಡಿ ರಾಜ್ಯದಲ್ಲಿ ಬ್ರಷ್ಟಚಾರ ಮಿತಿ ಮೀರಿದೆ. ಇದರಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೆ ಪೈಪೋಟಿಯ ರೀತಿಯಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ತೊಂದರೆ ಅನುಭವಿಸುತ್ತಿದ್ದು ಇದನ್ನು ತಪ್ಪಿಸಿ ನೆಮ್ಮದಿಯ ಜೀವನ ನಡೆಸುವಂತಹ ವಾತಾವರಣ ನಿರ್ಮಿಸಲು ಪರ್ಯಾಯ ರಾಜಕಾರಣ ಅಗತ್ಯವಾಗಿದೆ.ಇದರ ಮಹತ್ವ ಜನರಿಗೆ ತಿಳಿಸುವುದೇ ಕೆ. ಆರ್. ಎಸ್. ಪಕ್ಷದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ತಾಲೂಕ ಅಧ್ಯಕ್ಷ ದುರಗಪ್ಪ ಹೊನ್ನಳ್ಳಿ ಮಾತನಾಡಿ ಕೆ. ಆರ್. ಎಸ್. ಪಕ್ಷವು ಕಳೆದ ಅನೇಕ ವರ್ಷಗಳಿಂದ ನಿರಂತರವಾಗಿ ಬ್ರಷ್ಟಚಾರ ,ಅಧಿಕಾರಿಗಳ,
ದುರಾಡಳಿತ ವಿರುದ್ಧ ಹಾಗೂ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುತ್ತಿದೆ.ಈ ನಿಟ್ಟಿನಲ್ಲಿ ರಾಜಕೀಯ ಕ್ಷೇತ್ರದಲ್ಲಿ ಸುಧಾರಣೆಗೆ ಒತ್ತು ನೀಡಿದ್ದು ಮುಂದಿನ 2023 ರ ವಿಧಾನ ಸಭಾ ಚುನಾವಣೆಗೆ ಮೊದಲ ಹಂತದಲ್ಲಿ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಈಗಾಗಲೇ ಆಯಿಕೇ ಮಾಡಲಾಗಿದೆ ಎಂದು ತಿಳಿಸಿದರು.

ಲಿಂಗಸುಗೂರು ತಾಲೂಕಿನ ಪದಾಧಿಕಾರಿ ಪಟ್ಟಿ ತಾಲೂಕ ಯುವ ಘಟಕದ ಅಧ್ಯಕ್ಷರಾಗಿ ವೀರೇಶ ಗೌಡ ತಾಲೂಕ ವಿದ್ಯಾರ್ಥಿ ಘಟಕದ ಅಧ್ಯಕ್ಷನ್ನಾಗಿ ಅಮರೇಶ 5 ಭಾವೀ ಅವರನ್ನು ನೇಮಕ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ PSಗುರುವಿನಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ S ನಝೀರ್,ಗೌರವಾಧ್ಯಕ್ಷ ಆದಪ್ಪ,ಜಿಲ್ಲಾ ಎಸಿ /ಎಸ್. ಟಿ. ಘಟಕದ ಅಧ್ಯಕ್ಷ ಚನ್ನಬಸವ ಕುಣೆ ಕೆಲ್ಲುರು ,ಮಸ್ಕಿ ತಾಲೂಕು ಅಧ್ಯಕ್ಷ ಮಲ್ಲಯ್ಯ ಸ್ವಾಮಿ, ಸಿಂಧನೂರು ತಾಲೂಕ ಅಧ್ಯಕ್ಷ ವೀರಭದ್ರಯ್ಯ ಸ್ವಾಮಿ ದೇವದುರ್ಗ ತಾಲೂಕ ಅಧ್ಯಕ್ಷ ಪ್ರಕಾಶ್ ಪಾಟೀಲ್ ,ಜಿಲ್ಲಾ ಯುವ ಮೋರ್ಚಾ ಸಂಘಟನಾ ಕಾರ್ಯದರ್ಶಿ ಮಲ್ಲನಗೌಡ ಗೊರೆಬಾಳ ಹಾಗೂ ಜಿಲ್ಲಾ ಪದಾಧಿಕಾರಿಗಳು ಹಾಗೂ ಲಿಂಗಸೂಗೂರು ತಾಲೂಕ ಬಸವರಾಜಯ್ಯ ಸ್ವಾಮಿ, ಚೇತನ್ ಕುಮಾರ್ , ನಾಗರಾಜ,ಚಂದಪ್ಪಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend