ರೈತರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು – ವೆಂಕಟರಾವ್ ನಾಡಗೌಡ…!!!

Listen to this article

ರೈತರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು – ವೆಂಕಟರಾವ್ ನಾಡಗೌಡ.

ಸಿಂಧನೂರು : ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಜಾರಿಗಾಗಿ ಜೆಡಿಎಸ್ ಹಮ್ಮಿಕೊಂಡಿರುವ 3ನೇ ದಿನದ ‘ಜನತಾ ಜಲಧಾರೆ ಗಂಗಾ ರಥಯಾತ್ರೆ ತಾಲೂಕಿನ ವಲ್ಕಂದಿನ್ನಿ, ರಾಗಲಪರ್ವಿ, ಜವಳಗೇರಾ ಗ್ರಾಮಸ್ಥರು ಸ್ವಾಗತ ನೀಡಲಾಯಿತು.

ನಂತರ ಮಾತನಾಡಿದ ಶಾಸಕ ವೆಂಕಟರಾವ್ ನಾಡಗೌಡ ರವರು ರಾಜ್ಯದಲ್ಲಿ ಜೆಡಿಎಸ್ ಸರ್ಕಾರದ ಅವಧಿಯಲ್ಲಿನ ನೀರಾವರಿ ಯೋಜನೆಗಳಿಗೆ ಒತ್ತು ನೀಡಿದೆ. ಮುಂದಿನ 2023ರ ವಿಧಾನಸಭೆ ಚುನಾವಣೆಯಲ್ಲಿ ಜನರ ಆಶ್ರೀವಾದದಿಂದ ಜೆಡಿಎಸ್ ಪಕ್ಷವನ್ಮು ಆಡಳಿತಕ್ಕೆ ಬಂದರೆ ಮುಂದಿನ ಐದು ವರ್ಷದ ಅಧಿಕಾರದ ಅವಧಿಯಲ್ಲಿ ಬಾಕಿ ಇರುವ 3 ಲಕ್ಷ ಕೋಟಿ ರೂಪಾಯಿಗಳಲ್ಲಿ ಸಂಪೂರ್ಣಗೊಳಿಸಲಾಗುವುದು.

ಸಿರನಗುಡಿ,ಬೆಳಗುರ್ಕಿ, ಆಯನೂರ, ತಿಮ್ಮಾಪುರ, ರಾಮತ್ತಾಳ, ಮಲ್ಲಿಕಾರ್ಜುನ ರಾಗಲಪರ್ವಿ, ಒಳಬಳ್ಳಾರಿ ಗೊರೇಬಾಳ ದೇವರಗುಡಿ ಸೇರಿದಂತೆ ತಾಲ್ಲೂಕಿನ 15 ಏತ ನೀರಾವರಿ ಯೋಜನೆಗಳನ್ನು ಉದ್ಘಾಟಿಸಿದ್ದು ಇನ್ನೂ ಕೆಲವು ಆರಂಭ ‌ಗೊಳ್ಳಬೇಕಿದೆ, ಖಾಲಿ ಹರಿದು ಹೋಗುವ ನೀರನ್ನು ಶೇಖರಣೆ ಮಾಡಿ ರೈತರ ಜಮೀನುಗಳಿಗೆ ನೀರು ಕೊಟ್ಟರೆ ಉತ್ತಮ ಬೆಳೆ ಬೆಳೆದು ರೈತರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವುದು, ತುಂಗಾಭದ್ರಾ ಜಲಾಶಯದಲ್ಲಿನ ನೀರನ್ನು ಸಂಗ್ರಹಣೆ ಕೊರತೆಯನ್ನು ಸರಿದೂಗಿಸಲು ನವಲೆ ಬಳಿ ಸಮತೋಲನ ಜಲಾಶಯ ನಿರ್ಮಿಸುವುದು, ದೇವೇಗೌಡ ಹಾಗೂ ಕುಮಾರಸ್ವಾಮಿ ಯವರ ಕನಸ್ಸಾಗಿದೆ.

ಸಮ್ಮಿಶ್ರ ಸರಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಿದ್ದ ರಾಮಯ್ಯನವರ ಎಲ್ಲಾ ಯೋಜನೆಗಳನ್ನು ಮುಂದುವರೆಸಿ ಸಂಕಷ್ಟದ ಸಮಯದಲ್ಲಿ ರೈತರ ಎಲ್ಲಾ ಬ್ಯಾಂಕಗಳ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು ಇತಿಹಾಸದಲ್ಲಿಯೇ ಮೊದಲು. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೆವೆ ಎಂದರು.

ಮೊದಲ ಬಾರಿಗೆ ಶಾಸಕನಾಗಿ ನಂತರ ಮಂತ್ರಿ ಕೂಡಾ ಆಗಲೂ ನನ್ನ ಗ್ರಾಮದ ಜನರ ಆಶ್ರೀವಾದದಿಂದ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬಹುಮತ ನೀಡಿ ರಾಜ್ಯದಲ್ಲಿ ಸಂಪೂರ್ಣ ಬಹುಮತ ದ ಜೆಡಿಎಸ ಸರ್ಕಾರ ಬರುವಂತೆ ಆಶೀರ್ವಾದ ಮಾಡುವಂತೆ ಜನತೆಯಲ್ಲಿ ಶಾಸಕರು ಕೈಮುಗಿದು ಮನವಿ ಮಾಡಿಕೊಂಡರು.

ಸ್ವಗ್ರಾಮ ಜವಳಗೇರಾದಲ್ಲಿ ಮಹಿಳೆಯರು ಕಳಸದೊಂದಿಗೆ ಭಾಜ ಭಜಂತ್ರಿಯೊಂದಿಗೆ ಅದ್ದೂರಿಯಾಗಿ ಸ್ವಾಗತ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಬಸವರಾಜ ನಾಡಗೌಡ, ನಾಗೇಶ ಹಂಚಿನಾಳಕ್ಯಾಂಪ, ಚಂದ್ರಭೂಪಾಲ ನಾಡಗೌಡ, ಧರ್ಮನಗೌಡ, ಬಾಬುಗೌಡ, ವೆಂಕಟರೆಡ್ಡಿ ,ಸಂಗಮೇಶ್ವರ ನಾಡಗೌಡ, ವೆಂಕಟೇಶ ನಂಜಲಧಿನ್ನಿ, ಅಲ್ಲಮಪ್ರಭು, ಜಾನಿ ದೊಡ್ಡಮನಿ,ಪಂಪಾರೆಡ್ಡಿ, ವೆಂಕೊಬ ಕಲ್ಲೂರು,ಸಾಬಯ್ಯ, ಆಂಜನೇಯ, ಮಲ್ಲಿಕಾರ್ಜುನ ವಕೀಲ, ಶರಣಬಸವ,ಸುಮೀತ ತಡಕಲ್ ಪಕ್ಷದ ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend