ಸಾರ್ವಜನಿಕ ಆಸ್ಪತ್ರೆಯಲ್ಲಿನ ಗೋಳು ಕೇಳುವರ್ಯಾರು…?

Listen to this article

ಸಾರ್ವಜನಿಕ ಆಸ್ಪತ್ರೆಯಲ್ಲಿನ ಗೋಳು ಕೇಳುವರ್ಯಾರು…?

ಸಿಂಧನೂರು : ವೈದ್ಯ ಮತ್ತು ರೋಗಿಗಳ ನಡುವಣ ಸಂಬಂಧ ದಿನೇ ದಿನೇ ಹಳಸುತ್ತಿದೆ. “ವೈದ್ಯೋ ನಾರಾಯಣೋ ಹರಿಃ’. ಇದರ ಅರ್ಥ “ವೈದ್ಯ ಎಂದರೆ ದೇವರ ಸಮಾನ. ಆದರೆ ಈ ವೈದ್ಯರು ರಾಕ್ಷಸರಂತೆ ವರ್ತಿಸಿದ ಘಟನೆ ಇಂದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಗೆಂದು ಬಂದ ಮಹಿಳೆಗೆ ಮೂರು ತಾಸುಗಳಾದರೂ ಚಿಕಿತ್ಸೆ ಕೊಡದ ಸಿಬ್ಬಂದಿ ಮತ್ತು ವೈದ್ಯಾಧಿಕಾರಿಗಳು ವಿಷಯ ತಿಳಿದರು ಚಿಕಿತ್ಸೆಗೆ ಅಂಗಲಾಚಿ ಬೇಡಿಕೊಂಡರು ಪತ್ರಕರ್ತರ ಎದುರಲ್ಲೆ ಆಸ್ಪತ್ರೆಯಿಂದ ಹೊರ ನಡೆದರು.

ಚಿರತ್ನಾಳ ಗ್ರಾಮದ ವಜ್ರಮ್ಮ ಗಂಡ ರಮೇಶ್ ಎಂಬ ಮಹಿಳೆ ಹೆರಿಗೆಗೆಂದು ಆಸ್ಪತ್ರೆಗೆ ಬಂದಾಗ ಯಾವುದೇ ಸಿಬ್ಬಂದಿಗಳು, ವೈದ್ಯಾಧಿಕಾರಿಗಳು ಇಲ್ಲದಿರುವುದನ್ನು ತುಂಬಾ ನೋವು ಅನುಭವಿಸಿದ ಘಟನೆ ನಡೆದದ್ದು ಹೆರಿಗೆ ನೋವಿನಿಂದ ನರಳುತ್ತಿರುವ ಮಹಿಳೆ ಸಂಭಂದಿಕರು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಇಲ್ಲದಿರುವ ವಿಷಯ ತಾಲೂಕು ಮುಖ್ಯ ವೈದ್ಯಾಧಿಕಾರಿ ಹನುಮಂತರಡ್ಡಿಗೆ ಪೋನ ಮಾಡಿದಾಗ ಬರದೆ, ಅಂಬೇಡ್ಕರ್ ಜಯಂತಿ ನಿಮಿತ್ಯ ರೋಗಿಗಳಿಗೆ ಬ್ರೆಡ್,ಹಾಲು, ಹಣ್ಣು,ವಿತರಿಸಲು ಸಂಘಟನೆಯವರು ಪೋನ್ ಮಾಡಿ ಕರೆಸಿದಾಗ ಪೋಟೊಗೆ ಪೋಸ್ ಕೊಡಲು ಬಂದ ವೈದ್ಯಾಧಿಕಾರಿ ಎಂತಹ ವಿಪರ್ಯಾಸ ನೋಡಿ.

ಸಾರ್ವಜನಿಕರು ಈ ವಿಷಯ ಪತ್ರಕರ್ತರಿಗೆ ಮಾಹಿತಿ ತಿಳಿಸಿದಾಗ ಆಸ್ಪತ್ರೆಗೆ ಬೇಟಿ ನೀಡಿದಾಗ ಸ್ಥಳದಲ್ಲಿದ್ದ ಮುಖ್ಯ ವೈದ್ಯಾಧಿಕಾರಿಯನ್ನು ಏನು ಸಮಸ್ಯೆಯಾಗಿದೆ ಎಂದು ಕೇಳಿದಾಗ ಇಲ್ಲಾ ಇಂದು ಜಯಂತಿ ನಿಮಿತ್ತ ರಜೆಯಲ್ಲಿ ಇದ್ದಾರೆ. ಚಿಕಿತ್ಸೆ ನೀಡಲಾಗಿದೆ ಎಂದು ಸುಳ್ಳು ಹೇಳುವ ಮೂಲಕ ಬೇಜ್ವಾಬ್ದಾರಿ ಹೇಳಿಕೆ ನೀಡಿ ನೀವು ಏನು ಬೇಕಾದರೂ ಬರೆದುಕೊಳ್ಳಿ ನನಗೇನು ಸಂಬಂಧವಿಲ್ಲ ಎಂದು ಅವಸರದಲ್ಲಿ ಆಸ್ಪತ್ರೆಯಿಂದ ಓಡಿಹೋದರು.ಇದರ ಬಗ್ಗೆ ಸಂಬಂಧಪಟ್ಟ ಜಿಲ್ಲಾ ವೈದ್ಯಾಧಿಕಾರಿ ರಾಮಕೃಷ್ಣ ರವರಿಗೆ ತಿಳಿಸಿದರೆ, ಅವರ ಬಗ್ಗೆ ತುಂಬಾ ದೂರುಗಳು ಬಂದಿವೆ, ಅವರನ್ನು ಬಿಟ್ಟು ಬೇರೆಯವರು ಮುಖ್ಯಾ ವೈಧ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಲು ಯಾರು ತಯಾರಿಲ್ಲದ ಕಾರಣ ಅವರನ್ನೆ ಮುಂದುವರೆಸಲಾಗಿದೆ, ಜಯಂತಿ ಸಂಬಂಧ ಎಲ್ಲರೂ ರಜೆ ಹಾಕಿದ್ದಾರೆ ಅಂತ ಹೇಳಿಕೆ ನೀಡುತ್ತಾರಲ್ಲ ಎಂದು ಕೇಳಿದಾಗ ಆ ತರ ಹೇಳುವುದಕ್ಕೆ ಬರುವುದಿಲ್ಲ ಇಬ್ಬರೂ ಹೆರಿಗೆ ವೈಧ್ಯಾದಿಕಾರಿಗಳು ಇದ್ದಾರೆ ನಾಗರಾಜ ಕಾಟ್ವಾ, ಮತ್ತು ಒಬ್ಬರನ್ನು ಪ್ರಭಾರಿ ವೈದ್ಯಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಆದರೂ ಎರಡೂ ಜನ ರಜೆ ಯಾಕೆ ನೀಡಿದರು ಗೊತ್ತಿಲ್ಲ. ನಾಳೆ ಖುದ್ದು ಆಸ್ಪತ್ರೆಗೆ ಬೇಟಿ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.

ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ ರವರು ಇದರ ಬಗ್ಗೆ ಸಾಕಷ್ಟು ಬಾರಿ ಸಾರ್ವಜನಿಕರ ದೂರು ಬಂದ ಹಿನ್ನೆಲೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಆರೋಗ್ಯ ಮಂತ್ರಿಗಳಾದ ಡಾ. ಸುಧಾಕರ್ ಅವರ ಗಮನಕ್ಕೂ ತಂದಿದ್ದೇನೆ ಹಾಗೂ ಸ್ವತಃ ಫೋನ್ ಮೂಲಕ ನಾನು ತಿಳಿಸಿದ್ದೇನೆ ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಪತ್ರಿಕಾಗೋಷ್ಠಿ ನಡೆಸಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಮುಖ್ಯ ವೈದ್ಯಾಧಿಕಾರಿ ಡಾ.ಹನುಮಂತ್ ರೆಡ್ಡಿ ಅವರನ್ನು ಸೇವೆಯಿಂದ ವಜಾಮಾಡಿ ಆ ಸ್ಥಾನಕ್ಕೆ ಬೇರೆಯವರನ್ನು ಮುಖ್ಯ ವೈದ್ಯಾಧಿಕಾರಿಯಾಗಿ ನೇಮಕ ಮಾಡಿ ಸಾರ್ವಜನಿಕ ಆಸ್ಪತ್ರೆಯ ಸುವ್ಯವಸ್ಥೆಯನ್ನು ಕಾಪಾಡಬೇಕು.ಈ ಅವ್ಯವಸ್ಥೆಗೆ ಯಾರು ಕಾರಣ ಇರಬಹುದು ಇದನ್ನು ಶಾಸಕರ ಬೆಂಬಲದಿಂದ ಇರಬಹುದು ಎಂದು ಸಾರ್ವಜನಿಕರಿಗೆ ಅನುಮಾನ ಮೂಡುತ್ತಿದೆ.ಶಾಸಕರು ಈ ಅವ್ಯವಸ್ಥೆಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಮಾನಗಳಲ್ಲಿ ಜನರು ಶಾಸಕರಿಗೆ ತಕ್ಕ ಉತ್ತರ ಕೊಡುತ್ತಾರೆ.

ಈ ವಿಷಯವನ್ನು ಶಾಸಕರ ಗಮನಕ್ಕೆ ತಂದಾಗ ವೈದ್ಯಾಧಿಕಾರಿಗಳು ಫೋನ್ ಸ್ವಿಚ್ ಆಫ್ ಮಾಡಿದ್ದಾರೆ ಅವರು ಸಿಜರಿನ್ ಮಾಡುತ್ತೇವೆ ಎಂದು ವೈದ್ಯರು ಹೇಳಿದಾಗ ಮಾಡಿಸಿ ಮಹಿಳೆ ಪರವಾಗಿ ಮಾತನಾಡದೆ ? ಮುಖ್ಯ ವೈದ್ಯಾಧಿಕಾರಿ ಡಾ.ಹನುಮಂತರೆಡ್ಡಿ ಪರವಾಗಿ ಸಮರ್ಥನೆ ಮಾಡಿಕೊಂಡು ಶಾಸಕ ವೆಂಕಟರಾವ್ ನಾಡಗೌಡ ಬೇಜವಾಬ್ದಾರಿ ಹೇಳಿಕೆ ನೀಡಿದರು.

ಕೇವಲ ಹಣದ ಆಸೆಗೆ ಕರ್ತವ್ಯ ನಿರ್ವಹಿಸುತ್ತಿರುವ ಇಂತಹ ಮನಷತ್ವ ಇಲ್ಲದ ವೈದ್ಯಾಧಿಕಾರಿ ಯ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend