ಹೋಳಿ ಹಬ್ಬ ಆಚರಣೆ ಶಾಂತಿಯುತವಾಗಿರಬೇಕು ಪಿ.ಎಸ್.ಐ ಸೌಮ್ಯ ಹಿರೇಮಠ ಖಡಕ್ ಎಚ್ಚರಿಕೆ…!!!

Listen to this article

ಹೋಳಿ ಹಬ್ಬ ಆಚರಣೆ ಶಾಂತಿಯುತವಾಗಿರಬೇಕು ಪಿ.ಎಸ್.ಐ ಸೌಮ್ಯ ಹಿರೇಮಠ ಖಡಕ್ ಎಚ್ಚರಿಕೆ.

ಸಿಂಧನೂರು : ಮೋಜು ಮಸ್ತಿ ಅಬ್ಬರದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು.ಮೆರವಣಿಗೆಗೆ, ಸಭೆ ಸಮಾರಂಭಗಳಿಗೆ ಅವಕಾಶವಿಲ್ಲ ಕಟ್ಟುನಿಟ್ಟಿನ ನಿಷೇಧ ಮಾಡಲಾಗಿದೆ.ಹೋಳಿ ಹಬ್ಬ ಆಚರಣೆ ಶಾಂತಿಯುತವಾಗಿರಬೇಕು ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು.

ಇಂದು ನಡೆದ ಹೋಳಿ ಹಬ್ಬದ ಪೂರ್ವಭಾವಿಯಾಗಿ ನಗರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ನಗರ ಠಾಣೆ ಪಿ.ಎಸ್. ಐ ಸೌಮ್ಯ ಹಿರೇಮಠ ವಿವಿಧ ಸಮೂದಾಯದ ಮುಖಂಡರಿಗೆ ಮನವಿ ಮಾಡಿದರು.

ಬಲವಂತವಾಗಿ ಬಣ್ಣ ಎರಚುವಾಗ ಕೇವಲ ಗೊತ್ತಿರುವವರಿಗೆ ಮಾತ್ರ ಬಣ್ಣ ಹಾಕಬೇಕು. ಬಲಾತ್ಕಾರವಾಗಿ, ಹಿಂಸಾತ್ಮವಾಗಿ ಬಣ್ಣ ಎರಚಬಾರದು. ಅನ್ಯ ಧರ್ಮದವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಹೋಳಿ ಆಚರಣೆ ಮಾಡಬೇಕು. ಮಹಿಳೆಯರು ಮತ್ತು ಮಕ್ಕಳ, ವಿದ್ಯಾರ್ಥಿಗಳ ರಕ್ಷಣೆಗೆ ಹೆಚ್ಚಿನ ಗಮನ ನೀಡಬೇಕು. ತಾಲೂಕಿನಲ್ಲಿ ಅಂತರಾಜ್ಯ ಕಳ್ಳರು ಬಂದಿದ್ದು ಸಾರ್ವಜನಿಕ ಎಚ್ಚರಿಕೆಯಿಂದರಲೂ ಆಟೋದಲ್ಲಿ ದ್ವನಿವರ್ದಕ ಅಳವಡಿಸಿ ಸಾರ್ವಜನಿಕರಿಗೆ ತಿಳಿಸಲಾಗಿದೆ. ಕಳ್ಳತನ ಕಂಡು ಬಂದಿದ್ದರಿಂದ ರಾತ್ರಿವೇಳೆಯಲ್ಲಿ ಗುಂಪು ಗುಂಪಾಗಿ ಸೇರಿದ್ದು ಕಂಡುಬಂದಲ್ಲಿ ಅನುಮಾನಸ್ಪದವಾಗಿ ನಿರ್ದಾಕ್ಷಿಣ್ಯವಾಗಿ ಠಾಣೆಗೆ ಕರೆದೊಯ್ದು ಕೇಸ ದಾಖಲು ಮಾಡಿ ಕಾನೂನು ಕ್ರಮ ಕೈಗೊಳ್ಳುವುದು.ಮದ್ಯಪಾನ ಸೇವಿಸಿ ಮೆರವಣಿಗೆಯಲ್ಲಿ ಭಾಗವಹಿಸುವುದನ್ನು ತಡೆಯಬೇಕು.ಏನೇ ತೊಂದರೆ ಆದರೂ ಇಲಾಖೆಯ ಗಮನಕ್ಕೆ ತರಬೇಕು. ಕಾನೂನು ಕೈಗೆತ್ತಿಕೊಳ್ಳುವ ಕೆಲಸಕ್ಕೆ ಯಾರೂ ಮುಂದಾಗಬಾರದು, ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮದ್ವರಾಜ ಆಚಾರ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರು,ನಗರಸಭೆ ಸದಸ್ಯರಾದ ಚಂದ್ರ ಮೈಲಾರ, ಜಿಲಾನಿ ಪಾಷ, ನದಿಮುಲ್ಲಾ ಜೆಡಿಎಸ್ ಮುಖಂಡರು, ಗಂಗಣ್ಣ ಡಿಸ್ ಕರವೇ ಅಧ್ಯಕ್ಷರು, ಖಾಜಿಮಲ್ಲಿಕ್, ಅನಿಲಕುಮಾರ ವೈ ಕಾಂಗ್ರೆಸ್ ಮುಖಂಡರು,ಉಮೇಶ ಅರಳಹಳ್ಳಿ, ದೌವಲಸಾಭ್ ದೊಡ್ಮನಿ, ಇನ್ನೂ ಅನೇಕ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend