ಕೇಂದ್ರ ಮತ್ತು ರಾಜ್ಯ ಸರಕಾರಗಳ ಆಡಳಿತ ವೈಫಲ್ಯ ಖಂಡಿಸಿ ಹಾಗೂ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ…!!!

Listen to this article

ಸಿಂಧನೂರು :ಕೇಂದ್ರ ಮತ್ತು ರಾಜ್ಯ ಸರಕಾರಗಳ ಆಡಳಿತ ವೈಫಲ್ಯ ಖಂಡಿಸಿ ಹಾಗೂ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ “ಡಾ. ಬಿ.
ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರುಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪಂಪನಗೌಡ ಬಾದರ್ಲಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರಗಳು ದುರಾಡಳಿತ ನಡೆಸುತ್ತಿವೆ.ತೈಲ ಬೆಲೆ ಸೇರಿದಂತೆ ಅಗತ್ಯ ವಸ್ತುಗಆರ್. ಅಂಬೇಡ್ಕರ್ ವೃತ್ತ ಪಿಡಬ್ಲ್ಯೂಡಿಕ್ಯಾಂಪ್ ದಿಂದ ತಹಸಿಲ್ದಾರ್ ಕಾರ್ಯಲಯದವರಿಗೆ “ಸೈಕಲ್ ಜಾಥಾ” ನಡೆಸಲಾಯಿತು.ಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಬದುಕಿಗೆ ಕೊಳ್ಳಿ ಇಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ೭ ವರ್ಷಗಳಲ್ಲಿ ಕೇಂದ್ರ ಸರಕಾರ ೪೦ಕ್ಕೂ ಹೆಚ್ಚು ಬಾರಿ ತೈಲ ಬೆಲೆ ಹೆಚ್ಚಳ ಮಾಡಿ ಜನಸಾಮಾನ್ಯರ ಮೇಲೆ ಅನಗತ್ಯ ಹೊರೆ ಹೊರಿಸಿದೆ. ಇದರ ಭಾಗವಾಗಿ ಗ್ಯಾಸ್, ಅಡುಗೆ ಎಣ್ಣೆ,ಬೆಳೆ, ದಿನಸಿ ಪದಾರ್ಥಗಳ ಬೆಲೆ ಹೆಚ್ಚಳವಾಗಿದ್ದು, ಜನಸಾಮಾನ್ಯರು ಕೊಳ್ಳಲು ಇಂದು ,ಮುಂದು ನೋಡುವಂತಾಗಿದೆ.ಕಾಂಗ್ರೆಸ್ ಪಕ್ಷ ಹಲವಾರು ಬಾರಿ, ಪ್ರತಿಭಟನೆಯ ಮೂಲಕ ಎಚ್ಚರಿಕೆ ನೀಡಿದ್ದರೂ ಸರಕಾರದ ದಪ್ಪ ಚರ್ಮದ ವರ್ತನೆಯಲ್ಲಿ ಬದಲಾವಣೆ ಕಂಡಿಲ್ಲ. ಹಾಗಾಗಿ ಬಡವರ ಪರವಾಗಿರುವ ಕಾಂಗ್ರೆಸ್ ಪಕ್ಷ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಮೂಲಕ ಸರಕಾರಕ್ಕೆ ಎಚ್ಚರಿಕೆಯ ಸಂದೇಶ ಕಳುಹಿಸಿದೆ ಎಂದು ಬಿ. ವಿ. ನಾಯಕ ನುಡಿದರು.
ಈ ಸಂದರ್ಭದಲ್ಲಿ ಪಂಪನಗೌಡ ಬಾದರ್ಲಿ ಅಧ್ಯಕ್ಷರು ಗ್ರಾಮೀಣ ಬ್ಲಾಕ್ ಕಾಂಗ್ರೆಸ್, ಮಲ್ಲಿಕಾರ್ಜುನ ನಾಗಪ್ಪ ಮಾಜಿ ಸಚಿವರು, ಬಿ.ವಿ.ನಾಯಕ್ ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಸಮಿತಿ ರಾಯಚೂರು, ಬಸನಗೌಡ ದದ್ದಲ್ ಶಾಸಕರು ಗ್ರಾಮೀಣ ರಾಯಚೂರು, ಖಾಜಿಮಲ್ಲಿಕ್ ನಗರ ಬ್ಲಾಕ್ ಕಾಂಗ್ರೆಸ್, ಬಾಬುಗೌಡ ಬಾದರ್ಲಿ, ಬಸವರಾಜ ಹಿರೇಗೌಡ, ಸಣ್ಣ ಬೀಮನಗೌಡ್ರು, ಜಾಫರ್ ಅಲಿ ಜಹಗೀರ್ದಾರ, ಮಲ್ಲಿಕಾರ್ಜುನ ಪಾಟೀಲ್ ಅಧ್ಯಕ್ಷರು ನಗರಸಭೆ, ಅನಿಲ್ ಕುಮಾರ್.ವೈ ಪ್ರಧಾನ ಕಾರ್ಯದರ್ಶಿ ಬ್ಲಾಕ್ ಕಾಂಗ್ರೆಸ್, ಮುರ್ತುಜಾ ಹುಸೇನ್ ಉಪಾಧ್ಯಕ್ಷರು ನಗರಸಭೆ, ನಗರಸಭಾ ಸದಸ್ಯರಾದ ಶಬ್ಬೀರ್ ನಾಯಕ್, ಮುನೀರ್ ಪಾಷಾ, ಪ್ರಭುರಾಜ, ಸುರೇಶ ಜಾಧವ್, ವೆಂಕಟೇಶ ದತ್ತುರಾವ್, ಶೇಖರಪ್ಪ ಗಿಣಿವಾರ್, ಚಂದ್ರಶೇಖರ ಮೇಟಿ, ಆಲಂಬಾಷಾ, ನನ್ಯಾ ಮೇಸ್ತ್ರಿ, ತಿಮ್ಮಯ್ಯ ಭಂಗಿ, ಶಫುಖಾನ್, ನಾಗರಾಜ ನಾಯಕ್, ಅಲಿ ಮೌಲಾಲಿ, ದುರುಗಪ್ಪ ಕಠಾಲಿ, ಛತ್ರಪ್ಪ ಕುರುಕುಂದಿ, ಇಲಿಯಾಸ್ ಪಾಷಾ, ನಾಗರಾಜ ಗಸ್ತಿ, ರಮೇಶ ಬಾಲಿ, ಬಸವರಾಜ ಪಾಟೀಲ್ ಸೇರಿದಂತೆ ಇನ್ನು ಮುಂತಾದವರು ಭಾಗವಹಿಸಿದ್ದರು.

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend