ಸಿಂಧನೂರು :” ರಸ್ತೆಗಳು ಬತ್ತ ನಾಟುವ ಗದ್ದೆಯಂತಿದೆ…!!!

Listen to this article

ಸಿಂಧನೂರು :” ರಸ್ತೆಗಳು ಬತ್ತ ನಾಟುವ ಗದ್ದೆಯಂತಿದೆ ”

ಸಿಂಧನೂರು ನಗರದ ವಾರ್ಡ್ ನಂ -೧೪ ರಲ್ಲಿ ವಿಕಾಸ ಭಾರತಿ ಶಾಲೆಯ ಹತ್ತಿರದ ರಸ್ತೆಯು ಮಳೆ ಬಂದರೆ ಸಾಕು ಬತ್ತ ನಾಟಿಸುವ ಗದ್ದೆಯಂತೆ ಆಗಿ ಪಾದಚಾರಿಗಳಿಗೆ ಮತ್ತು ದ್ವಿಚಕ್ರ ವಾಹನ ಸವಾರರಿಗೆ ಓಡಾಡಲು ಮಳೆಗಾಲದಲ್ಲಿ ತುಂಬಾ ತೊಂದರೆ ಅನುಭವಿಸಿತ್ತಿದ್ದಾರೆ. ವಯಸ್ಕರು,ವೃದ್ದರೂ ಈ ರಸ್ತೆಯಲ್ಲಿ ಒಡಾಡುವಾಗ ಜಾರಿ ಬಿದ್ದಿದ್ದುಂಟು .ಅಷ್ಟೇ ಅಲ್ಲ ಮಡುವಿನಂತಿರುವ ರಸ್ತೆಯ ತಗ್ಗಿನಲ್ಲಿ ಮಳೆ ನೀರು ನಿಂತಲ್ಲಿ ನಿಂತು ಜೌಗ ಪ್ರದೇಶದಲ್ಲಿ ಸೊಳ್ಳೆಗಳು ಕಾಟ ಹೆಚ್ಚಾಗಿ ಇಲ್ಲಿ ವಾಸಿಸುವ ಜನತೆಗೆ ಮಲೇರಿಯಾ, ಡೆಂಗ್ಯೂದಂತ ಕಾಯಿಲೆಗಳಿಗೆ ತುತ್ತಾಗುವ ಆತಂಕದಲ್ಲಿದ್ದಾರೆ.ಕೋರೊನಾದಿಂದ ತತ್ತರಿಸುವ ಸಂಧರ್ಭದಲ್ಲಿ ಇಂತಹ ಹಿನಾಯ ಪರಿಸ್ಥಿತಿಯಲ್ಲಿ ಬದುಕುವುದು ತುಂಬಾ ಕಷ್ಟವಾಗಿದೆ. ರಾತ್ರಿ ಸಮಯವಂತೂ ಒಬ್ಬಂಟಿಯಾಗಿ ಒಡಾಡಲು ಭಯ ಬರುತ್ತದೆ.ಕಾರಣ ರಸ್ತೆಯ ಬದಿಯಲ್ಲಿ ಬಿದಿ ದ್ವೀಪಗಳಿಲ್ಲದೆ ಕತ್ತಲಾಗುವದಕ್ಕಿಂತ ಮುಂಚೆ ಮನೆ ಸೆರುವಂತಾಗಿದೆ, ಮತ್ತು ರಾತ್ರಿ ಕಳ್ಳ ಕಾಕರಿಗೆ ತುಪ್ಪವೇ ಜಾರಿ ರೊಟ್ಟಿಗೆ ಬಿದ್ದಂತಾಗಿದೆ.ಈ ರಸ್ತೆಗೆ ಸಿ.ಸಿ ರೋಡ್ ಅಥವಾ ತಾತ್ಕಾಲಿಕವಾಗಿ ಮರ್ಮವಾದರೂ ಹಾಕಿಸಿ ಕೊಡಲು ಮತ್ತು ರಸ್ತೆಯ ಬಿದಿ ದ್ವೀಪ ಹಾಕಲು ಕಳೆದ ಆರು ತಿಂಗಳಿಂದಲೂ ಅರ್ಜಿ ಕೊಟ್ಟಿದ್ದರೂ ಯಾವದೇ ಪ್ರಯೋಜನೆ ಆಗಿಲ್ಲ. ಎರಡೂ ಮೂರು ಸಲ ನಗರ ಸಭೆ ಸದಸ್ಯರನ್ನು ಮತ್ತು ನಗರ ಸಭೆ ಅಧ್ಯಕ್ಷರನ್ನು ಬೇಟಿಯಾಗಿ ಪರಿಸ್ಥಿತಿಯನ್ನು ಮನವರಿಕೆ ಮಾಡಿದರೂ ವಾರ ತಿಂಗಳೆಂದು ಕಾಲಕಳೆದು ಸುಳ್ಳುಬರವಸೆ ಕೊಟ್ಟಿದ್ದಾರೆ. ಎಂದು ವಾರ್ಡಿನ ಜನರು ದೂರಿದ್ದಾರೆ.ನಗರ ಸಭೆಯು ಈಗಾಲಾದರೂ ಹೆಚ್ಚೆತ್ತುಕೊಂಡು ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ನಗರ ಸಭೆಯ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದರು .

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend