ಇತಿಹಾಸ ಸೃಷ್ಟಿಸಿದ ಸಿಂಧನೂರು ಬಂದ್ ಯಶಸ್ವಿ.

Listen to this article

ಇತಿಹಾಸ ಸೃಷ್ಟಿಸಿದ ಸಿಂಧನೂರು ಬಂದ್ ಯಶಸ್ವಿ.

ಸಿಂಧನೂರು : ಅಂಬೇಡ್ಕರವರು ಇಡೀ ಪ್ರಪಂಚ ಮೆಚ್ಚುವಂತಹ ಸಂವಿಧಾನವನ್ನು ಕೊಟ್ಟಿದ್ದಾರೆ. ಆದರೆ ರಾಯಚೂರು ಜಿಲ್ಲಾ ನ್ಯಾಯಾಧೀಶರು ಅವರ ಪೋಟೊವನ್ನು ತೆಗೆದರೆ ಮಾತ್ರ ಧ್ವಜಾರೋಹಣ ಮಾಡುತ್ತೇನೆ ಎಂದು ಹೇಳಿರುವುದು ಸರಿಯಲ್ಲ. ಶಾಸಕಾಂಗ, ಕಾರ್ಯಾಂಗ, ನಂಬಿಕೆ ಕಳೆದ ಮೇಲೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಎಂದು ಬದುಕುತ್ತಿದ್ದೇವೆ. ನ್ಯಾಯಾದೀಶರು ಈ ಮಟ್ಟಕ್ಕೆ ಹೋದಾಗ ಜನರಲ್ಲಿ ವಿಶ್ವಾಸ ಕಡಿಮೆಯಾಗುತ್ತಿದೆ. ಘಟನೆ ನಡೆದು ಒಂದು ವಾರವಾದರು ಹೈಕೋರ್ಟ್ ಅಥವಾ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿತ್ತು. ನ್ಯಾಯ ಸಿಗುವವರೆಗೆ ನಿಮ್ಮ ಹೋರಾಟದ ಜೊತೆ ನಾವಿರುತ್ತೇವೆ ಎಂದು ಮಾತನಾಡಿದರು.

ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಮಾತನಾಡಿ ಜಗತ್ತೆ ಮೆಚ್ಚುವಂತಹ ಸಂವಿಧಾನವನ್ನು ಕೊಟ್ಟಂತವರು ಬಾಬಾ ಸಾಹೇಬ್ ಅಂಬೇಡ್ಕರರು ಮಲ್ಲಿಕಾರ್ಜುನಗೌಡರಿಗೆ ಶಿಕ್ಷೆಯಾಗುವರೆಗೂ ಹೋರಾಟ ಮುಂದುವರೆಯಲಿ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.

ದಲಿತ ಹಿರಿಯ ಮುಖಂಡರಾದ ಮಾನಸಯ್ಯ ಮಾತನಾಡಿ ಜಿಲ್ಲಾ ನ್ಯಾಯಾಲಯದಲ್ಲಿ ಅಂಬೇಡ್ಕರ್ ಫೋಟೋ ತೆಗೆದು ಅವಮಾನ ಮಾಡಿದ ವ್ಯಕ್ತಿ ಒಂದು ಸಂಘಟನೆಯ ಸದಸ್ಯ ಆತನಿಗೆ ಟ್ರೈನಿಂಗ್ ಕೊಟ್ಟಿದ್ದಾರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದುಕೊಂಡು ಚುನಾವಣೆ ನಿಲ್ಲಲು ಸಿದ್ಧರಾಗಿದ್ದಾರೆ ಎಂದು ಆಪಾದನೆ ಮಾಡಿದರು.

ಬಾಲಸ್ವಾಮಿ ಕೊಡ್ಲಿ ಮಾತನಾಡಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಕೊಟ್ಟಂತ ಮೀಸಲಾತಿಯಿಂದ ಶಾಸಕರಾಗಿ ನೀವ್ಯಾಕೆ ನ್ಯಾಯಾದೀಶರ ವಿರುದ್ಧ ದ್ವನಿ ಎತ್ತುತಿಲ್ಲ ನಿಮಗೆ ನಾಚಿಕೆ ಮಾನ ಮರ್ಯಾದೆ ಇಲ್ಲಾ ಎಂದರು.

ದಲಿತಪರ ಹೋರಾಟಗಾರರಾದ ಎಂ. ಗಂಗಾಧರ ಅವರ ತಂಡ ಅಂಬೇಡ್ಕರ್ ರವರ ಕ್ರಾಂತಿಗೀತೆಗಳನ್ನು ಹಾಡುವುದರ ಮೂಲಕ ಹೋರಾಟಕ್ಕೆ ಹೆಚ್ಚಿನ ಶಕ್ತಿಯನ್ನು ತಂದು ಕೊಟ್ಟರು.

ಮುಸ್ಲಿಂ ಸಮುದಾಯದ ಮುಖಂಡರೊಬ್ಬರು ಮಾತನಾಡಿ ಮುಸ್ಲಿಂರಿಗೆ ಕುರಾನ್, ಕ್ರಿಶ್ಚಿಯನ್ನರಿಗೆ ಬೈಬಲ್, ಹಿಂದುಗಳಿಗೆ ಭಗವದ್ಗೀತೆ ಇದೆ ಆದರೆ ಇಡೀ ಭಾರತಕ್ಕೆ ಸಂವಿಧಾನ ಇದೆ. ಬಾಬಾ ಸಾಹೇಬರ ಸಂವಿಧಾನದ ಅಷ್ಟೇ ಅಲ್ಲ ಅವರ ಚಪ್ಪಲಿಗೆ ಅವಮಾನ ಮಾಡಿದ್ರು ನಾವು ಬಿಡಲ್ಲ ಎಂದು ಹೇಳಿದರು.

ನಂತರ ಬಸನಗೌಡ ಬಾದರ್ಲಿ ಮಾತನಾಡಿ ಅಂಬೇಡ್ಕರರನ್ನು ಒಂದು ಜಾತಿಗೆ ಸೀಮಿತಗೊಳಿಸಬೇಡಿ.ಇವತ್ತು ನಾವಿಲ್ಲಿ ನಿಂತು ಮಾತನಾಡುತ್ತಿದ್ದೇವೆ ಎಂದರೆ ಅಂಬೇಡ್ಕರ್ ಅವರು ಕೊಟ್ಟ ಹಕ್ಕಿನಿಂದ ಮಾತ್ರ ಸಾಧ್ಯ ಎಂದರು. ಪಕ್ಷದ ವರಿಷ್ಠರಾದ ಡಿ. ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯನವರು ಪತ್ರಿಕೆ ಗೋಷ್ಠಿ ಮೂಲಕ ಸಿಂಧನೂರು ಬಂದ್ ಗೆ ಬೆಂಬಲಿಸಿ ಹೋರಾಟಕ್ಕೆ ನಿಮ್ಮ ಜೊತೆ ನಾವಿದ್ದೇವೆ ಎಂದು ತಿಳಿಸಿದರು.

ನಗರದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್ ಗೆ ಅವಮಾನ ಮಾಡಿದ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಿರುದ್ಧ ಸಿಂಧನೂರಿನ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಹಾಗೂ ಸಿಂಧನೂರು ಬಂದ್ ಯಶಸ್ವಿಯಾಗಿ ನೆರವೆರಿತು.

ಮುಂಜಾನೆಯಿಂದಲೇ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿದ್ದರು. ಸಾರಿಗೆ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿತ್ತು. ಶಾಲಾ–ಕಾಲೇಜುಗಳು ಬಾಗಿಲು ಮುಚ್ಚಿದ್ದವು. ಪ್ರತಿಭಟನೆ ಮೆರವಣಿಗೆ ನಡೆದವು.
ನಾಲ್ಕು ತಾಸಿಗೂ ಹೆಚ್ಚಿನ ಅವಧಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಈ ಬಂದ್ ನಲ್ಲಿ ಭಗತ್ ಸಿಂಗ್ ಆಟೋ ಚಾಲಕರ ಸಂಘ, ಮುಸ್ಲಿಂ ಸಮುದಾಯದ ಮುಖಂಡರು,ಯುವಕರು, ಟ್ಯಾಕ್ಸಿ ಚಾಲಕರ ಸಂಘ, ಕನ್ನಡ ಪರ ಸಂಘಟನೆಗಳು,ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಸಂಘಟನೆಗಳು ,ವಿವಿಧ ಪಕ್ಷದ ಮುಖಂಡರು,ವಿವಿಧ ಸಮೂದಾಯದ ಮಖಂಡರು ಸೇರಿದಂತೆ ಅಹಿಂದ ಸಂಘಟನೆಗಳು ಕರೆ ನೀಡಿದ್ದ ಬಂದ್‌ ಸಂಪೂರ್ಣ ಬೆಂಬಲ ನೀಡಿದರು.

ಮಿನಿ ವಿಧಾನಸೌಧದ ಮುಂಭಾಗ ಜಮಾಯಿಸಿದ ವಿವಿಧ ಸಂಘಟನೆಗಳ ಸಾವಿರಾರು ಸಂಖ್ಯೆಯ ಕಾರ್ಯಕರ್ತರು, ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ಗಾಂಧಿ ವೃತ್ತದ ಮಾರ್ಗವಾಗಿ,ಬಸವೇಶ್ವರ ವೃತ್ತ, ಹಳೇ ಬಜಾರ,ಚೆನ್ನಮ ಸರ್ಕಲ್, ಕನಕದಾಸ ವೃತ್ತ ವಾಲ್ಮೀಕಿ ವೃತ್ತ ಮೂಲಕ ಪುನಃ ಮಿನಿವಿಧಾನಸೌಧದ ಗಾಂಧಿ ಸರ್ಕಲ್ ನ ಮುಂದೆ ಕೆಲಕಾಲ ರಸ್ತೆ ತಡೆ ನಡೆಸಿ,ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಪೊಲೀಸರ ಮತ್ತು ಸಂಘಟನೆಗಳ ಮದ್ಯ ವಾದ–ಪ್ರತಿವಾದ ನಡೆಯಿತು. ಪರಿಸ್ಥಿತಿ ಕೈ ಮೀರುವುದನ್ನು ಅರಿತ ಪೊಲೀಸರು ಜನರ ಗುಂಪನ್ನು ಚದುರಿಸಿದರು.

ಮುಂಜಾಗ್ರತೆಯಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಿರಿಯ ಪೋಲಿಸ್ ಅಧಿಕಾರಿಗಳು ತಮ್ಮ ಸಿಬ್ಬಂದಿಗಳಿಗೆ ತರಬೇತಿ ನೀಡಿದ್ದರು.

ಈ ಹೋರಾಟದಲ್ಲಿ ಕೆ ಕರಿಯಪ್ಪ, ಮಾಜಿ ಕೆಪಿಸಿಸಿ ಕಾರ್ಯದರ್ಶಿಗಳು, ಬಸವರಾಜ್ ನಾಡಗೌಡ ಜೆಡಿಎಸ್ ತಾಲೂಕ ಅಧ್ಯಕ್ಷರು, ಪಂಪನಗೌಡ ಬಾದರ್ಲಿ, ದೊಡ್ಡ ಬಸವರಾಜ, ಎಚ್. ಎನ್. ಬಡಿಗೇರ, ಡಿ. ಎಚ್. ಪೂಜಾರಿ, ಚಂದ್ರಶೇಖರ್ ಗೋರೆಬಾಳ ಡಿಎಚ್ ಕಂಬಳಿ ಶೇಖರಪ್ಪ ಗಿಣಿವಾರ ರಾಮಣ್ಣ ಗೋನ್ವಾರ, ನರಸಪ್ಪ ಕಟ್ಟಿಮನಿ, ಆರ್ ಅಂಬ್ರೂಸ್,ಬಸವರಾಜ ಸಾಸಲಮರಿ, ಅಯ್ಯಪ್ಪ ಮಲ್ಲಾಪುರ, ಜಿಲಾನಿಪಾಷ, ಅಶೋಕ ನಂಜಲದಿನ್ನಿ, ಹನುಮಂತಪ್ಪ ಬೂದಿವಾಳ,ಸುಭಾಷ್ ಫ್ರಾಂಕ್ಲಿನ, ನಿರುಪಾದಿ ಸಾಸಲಮರಿ,ವೆಂಕೋಬ ನಾಯಕ, ಅರುಣಕುಮಾರ್ ಯಾಪಲಪರ್ವಿ, ಶರಣಬಸವ ಇನ್ನು ವಿವಿಧ ಸಮಾಜದ ಮುಖಂಡರು ಭಾಗಿಯಾಗಿದ್ದರು..

 

ವರದಿ. ದುಗ್ಗಪ್ಪಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend