ಮಾಜಿಸಚಿವರ ನಿವಾಸದಲ್ಲಿ ರಾಜ್ಯಸರ್ಕಾರಕ್ಕೆ ಮೆಕ್ಕೆಜೋಳ ಖರೀದಿ ಹಾಗೂ ರೈತರ ಇನ್ನಿತರ ಸಮಸ್ಯೆಗಳನ್ನು ನಿವಾರಣೆಗೆ ಒತ್ತಡ ಹೆರಲು ಮನವಿ…!!!

Listen to this article

ಸಿಂಧನೂರು: ಮಾಜಿಸಚಿವರು, ಶಾಸಕರಾದ ವೆಂಕಟರಾವ್ ನಾಡಗೌಡ ಅವರ ನಿವಾಸದಲ್ಲಿ ರೈತ ಮುಖಂಡರು ಜೋಳ ಖರೀದಿ ಕೇಂದ್ರ ಮತ್ತು ರೈತರ ಇನ್ನಿತರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಒತ್ತಡ ತರಬೇಕು ಎಂದು ಶಾಸಕರ ಬಳಿ ಚರ್ಚಿಸಿದರು.

ಜೋಳ ಬೆಳೆದ ರೈತರು ಅತ್ಯಂತ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಹೊರಡಿಸಿರುವ ಆದೇಶ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಮಾತ್ರ ಖರೀದಿಗೆ ಅವಕಾಶವಿದೆ.ಒಬ್ಬ ರೈತನಿಂದ 20 ಕ್ವಿಂಟಲ್ ಜೋಳ ಖರೀದಿ ಮಾಡಲಿಕ್ಕೆ ಆದೇಶ ಮಾಡಿದ್ದು ರೈತರಿಗೆ ಮಾಡಿದ ಅನ್ಯಾಯ. ಕಳೆದ ಅಧಿವೇಶನದಲ್ಲಿ ಸರಕಾರದ ಗಮನಕ್ಕೆ ತಂದು ಸದನದಲ್ಲಿ ಚರ್ಚೆ ಕೂಡಾ ಮಾಡಿದ್ದೇನೆ. ಕಳೆದ ಬಾರಿ ಯಾವ ರೀತಿ ಮಾನದಂಡಗಳನ್ನು ಅನುಸರಿಸಿದ್ದೀರಿ ಅದೇ ರೀತಿಯಲ್ಲಿ ಮುಂದುವರಿಸಬೇಕೆಂದು ರೈತರ ಪರವಾಗಿ ಸರ್ಕಾರಕ್ಕೆ ಸದನದಲ್ಲಿ ಶಾಸಕನಾಗಿ ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿರ್ವಸಿದ್ದೇನೆ. ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಹನುಮನಗೌಡ ಬೆಳಗುರ್ಕಿ, ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಅಚಾರ್ಯ ಮತ್ತು ಸಂಸದರಾದ ಕರಡಿ ಸಂಗಣ್ಣ ಸೇರಿದಂತೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚೆ ಮಾಡಿ ಮನವಿಯನ್ನು ಕೊಟ್ಟಿದ್ದೇವೆ. ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಿಗೆ ಸಂಪೂರ್ಣ ವಿವರಣೆ ನೀಡಿ ರೈತರಿಗೆ ಆಗುವ ಅನಾನುಕೂಲಗಳ ಬಗ್ಗೆ ಮನವರಿಕೆ ಮಾಡಿದ್ದೇವೆ. ಕಾನೂನು ಸಚಿವರಾದ ಮಾದುಸ್ವಾಮಿಯವರಿಗೂ ಕೂಡ ತಿಳಿಸಿದ್ದೇನೆ. ಕಳೆದೆರಡು ದಿನಗಳಲ್ಲಿ ಮುಖ್ಯಮಂತ್ರಿಗಳಿಗೆ ಕೋವಿಡ್ ಪಾಸಿಟಿವ್ ಬಂದಿರುವುದರಿಂದ ಅವರನ್ನು ಭೇಟಿಯಾಗಲು ಸಮಯ ಅವಕಾಶ ಸಿಗಲಿಲ್ಲ.ಜನೆವರಿ 19ರಂದು ಕ್ಯಾಬಿನೆಟ್ ಸಭೆ ನಡೆಯಲಿದ್ದು ಸಭೆಯಲ್ಲಿ ನಮ್ಮ ಭಾಗದ ಸಂಸದರು ಮತ್ತು ಶಾಸಕರ ನಿಯೋಗ ತೆಗೆದುಕೊಂಡು ಹೋಗಿ ಮಾತನಾಡುತ್ತೇವೆ. ಸದನ ಸಮಿತಿಯಲ್ಲಿ ಒಪ್ಪಿಗೆಯಾದರೆ ಮಾತ್ರ ಆದೇಶವಾಗುತ್ತದೆ. ನಂತರ ಖರೀದಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ರೈತ ಮುಖಂಡರಿಗೆ ತಿಳಿಸಿದರು.

ರೈತ ಮುಖಂಡರ ಜೊತೆ ಚರ್ಚೆ ಬಳಿಕ ಶಾಸಕರಾದ ವೆಂಕಟರಾವ್ ನಾಡಗೌಡ ಮಾತನಾಡಿದರು.

ರೈತಾಪಿ ವರ್ಗದ ಮುಖಂಡರು ನಮ್ಮ ಬಳಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.ರೈತರ ಕಷ್ಟಗಳಿಗೆ ಸ್ಪಂದಿಸಬೇಕಾದದ್ದು ನಮ್ಮ ಕರ್ತವ್ಯ. ಸರ್ಕಾರ ಶೀಘ್ರ ಆದೇಶ ನೀಡದೆ ಹೋದರೆ ದೊಡ್ಡ ಮಟ್ಟದ ಹೋರಾಟ ಅನಿವಾರ್ಯವಾಗಿ ಮಾಡಬೇಕಾಗುತ್ತದೆ. ಇದಕ್ಕೆ ಅವಕಾಶ ಕೊಡದೆ ಸರ್ಕಾರ ಮೊದಲಿನಂತೆ ಯಾವುದೇ ನಿರ್ಬಂಧವಿಲ್ಲದೆ ಜೋಳ ಖರೀದಿಗೆ ಅವಕಾಶ ಮಾಡಿಕೊಡಬೇಕೆಂದು ಮಾಧ್ಯಮದ ಮುಖಾಂತರ ಸರಕಾರಕ್ಕೆ ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಬಸವರಾಜ ನಾಡಗೌಡ, ಚಂದ್ರ ಭೂಪಾಲ ನಾಡಗೌಡ,ರೈತ ಮುಖಂಡರಾದಹನುಮನಗೌಡ ಬೆಳಗುರ್ಕಿ,ಮಲ್ಲಯ್ಯ ಮಾಡಶಿರವಾರ, ಶ್ರೀನಿವಾಸ್ ಗೋಮರ್ಸಿ, ವೀರೇಶ್ ಮಡಿವಾಳ ಗೋಮರ್ಸಿ, ವೀರನಗೌಡ, ಶಾಂತನಗೌಡ ಅಲಬನೂರು,ಶರಣಪ್ಪ ಕನ್ನಾರಿ, ಮಾಂತನಗೌಡ ಇನ್ನಿತರ ರೈತ ಮುಖಂಡರು ಭಾಗವಹಿಸಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend