ರೋಡ್ ಗೆ ಹಾಕಿರುವ ರೋಡ್ ಬ್ರೇಕರ್ ರಾತ್ರಿ ವೇಳೆ ವಾಹನ ಸವಾರರಿಗೆ ಕಾಣುವಂತೆ ಕ್ರಮವನ್ನು ವಹಿಸಿ…!!!

Listen to this article

ಸಿಂಧನೂರು :ನಗರದ ರಾಯಚೂರು ರಸ್ತೆಯ ಪಿ. ಡಬ್ಲ್ಯೂ.ಡಿ.ಕ್ಯಾಂಪ್ ನ ಕೆ.ಇ. ಬಿ. ಕ್ವಾಟರ್ಸನ ಮುಂಭಾಗದ ಮತ್ತು ಅರುಣೋದಯ ಪಬ್ಲಿಕ್ ಸ್ಕೂಲಗೆ ಹೋಗುವ ರಸ್ತೆಯ ರಾಯಚೂರು ಮೇನ್ ರೋಡ್ ಗೆ ಹಂಸ್ ಇದ್ದು ಇದು ತೀರಾ ಎತ್ತರದಿಂದ ಕೂಡಿದ್ದು ರಾತ್ರಿ ವೇಳೆಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗಿದೆ. ಇದರ ಮೇಲೆ ವೈಟ್ ಟ್ಯಾಪಿಂಗ್ ಅಳವಡಿಸದೇ ಇರುವುದರಿಂದ ಸರಿಯಾಗಿ ಕಾಣುತ್ತಿಲ್ಲವಾದರಿಂದ ಅನೇಕ ಅಪಘಾತಗಳು ಸಂಭವಿಸಿವೆ. ರಸ್ತೆಯ ಬದಿಯಲ್ಲಿ ಹೋಟೆಲಗಳು ಇರುವುದರಿಂದ ಜನಸಂದಣಿ ಜಾಸ್ತಿ ಇರುತ್ತದೆ. ಬೈಕ್ ಸವಾರರು ಸಾರ್ವಜನಿಕರಿಗೆ ಮತ್ತು ಹೋಟೆಲ್ ಗೆ ಡಿಕ್ಕಿ ಹೊಡೆದ ನಿದರ್ಶನಗಳು ಉಂಟು. ಇದರ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು ಅಧಿಕಾರಿಗಳು ಗಮನ ಹರಿಸುತ್ತಿಲ್ಲ.ಆದರಿಂದ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ಹೆಚ್ಚೆತ್ತುಕೊಂಡು ರೋಡ್ ಹಂಸನ್ನು ತೆಗೆಯಬೇಕು ಇಲ್ಲದಿದ್ದರೆ ವೈಟ್ ಟ್ಯಾಪಿಂಗ್ ಮಾಡಿ ರೇಡಿಯಂ ಅಳವಡಿಸಿ ಸಾರ್ವಜನಿಕರ ಪ್ರಾಣ ಉಳಿಸುವಂತೆ ಸಾರ್ವಜನಿಕರ ಪರವಾಗಿ ಸಮಾಜ ಸೇವಕ ಉಸ್ಮಾನಪಾಷ್ ಪತ್ರಿಕೆ ಹೇಳಿಕೆ ನೀಡಿದರು..

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend