ಸಿಂಧನೂರು : ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಬೇಕಾದರೆ ಎಚ್ಚರಿಕೆಯಿರಲಿ-ಬಸನಗೌಡ ಬಾದರ್ಲಿ…!!!

Listen to this article

ಸಿಂಧನೂರು : ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಬೇಕಾದರೆ ಎಚ್ಚರಿಕೆಯಿರಲಿ-ಬಸನಗೌಡ ಬಾದರ್ಲಿ.

ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ 2021 22ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಋತುವಿನಲ್ಲಿ ರೈತರಿಂದ ಜೋಳ ಮತ್ತು ಭತ್ತ ಖರೀದಿಯ ಗರಿಷ್ಠ ಮಿತಿಯನ್ನು ತೆಗೆದುಹಾಕಬೇಕು ಇಲ್ಲದಿದ್ದರೆ ರೈತರೊಂದಿಗೆ ಪ್ರತಿಭಟನೆಯ ಮೂಲಕ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು .ತಮ್ಮ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮುಖ್ಯಮಂತ್ರಿಗಳಿಗೆ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಪತ್ರವನ್ನು ಬರೆಯಲಾಗಿದೆ. ಸರಕಾರವು ನಿಗದಿ ಮಾಡಿರುವ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಜೋಳವನ್ನು ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 10 ಕ್ವಿಂಟಾಲನಂತೆ ಗರಿಷ್ಠ 20 ಕ್ವಿಂಟಾಲ್ ಜೋಳವನ್ನುಖರೀದಿ ಮಾಡಲು ಆದೇಶಿಸಲಾಗಿದೆ. ಭತ್ತವನ್ನು ಗರಿಷ್ಠ 75 ಕ್ವಿಂಟಾಲ್ ಆದೇಶಿಸಿದೆ. ಆದರೆ ಈ ಆದೇಶಗಳು ರೈತರಿಗೆ ಮಾರಕವಾಗಿದೆ. ಅತಿವೃಷ್ಟಿ ಹಾಗೂ ಅಧಿಕವಾಗಿರುವ ಬೆಳೆಯ ಉತ್ಪಾದನೆ ಅಧಿಕ ವೆಚ್ಚದಿಂದಾಗಿ ರೈತ ತೀರಾ ಸಂಕಷ್ಟದಲ್ಲಿ ಜೀವಿಸುತ್ತಿದ್ದಾನೆ. ಸಾಲದ ಭಾದೆ ಮತ್ತು ದಾಸ್ತಾನು ಕೇಂದ್ರಗಳು ಅಭಾವದ ಕಾರಣ ಬೆಳೆದ ಬೆಳೆಯನ್ನು ತಕ್ಷಣವೇ ಖಾಸಗಿ ಖರೀದಿದಾರರಿಗೆ ಮಾರಾಟ ಮಾಡುವ ಅನಿವಾರ್ಯ ಸ್ಥಿತಿಗೆ ತಲುಪಿದ್ದಾನೆ,ರೈತ ಬೆವರುಸುರಿಸಿ ಬೆಳದ ಫಲ ಮಧ್ಯ ವರ್ತಿಗಳು,ಖಾಸಗಿ ಖರೀದಿದ್ದಾರರ ಪಾಲಾಗುತ್ತಿದೆ, ರೈತರ ಹಿತ ಕಾಪಾಡುವದು ಸರ್ಕಾರದಜವಾಬ್ದಾರಿಯಾಗಿದೆ.
ಸರ್ಕಾರವು ಖರೀದಿಗೆ ನಿಗದಿಪಡಿಸಿದ ಮಾರ್ಗಸೂಚಿಗಳು ಅವೈಜ್ಞಾನಿಕದಿಂದ ಕೂಡಿವೆ. ಮತ್ತು ರೈತರ ಹಿತದೃಷ್ಟಿಗೆ ಅನಾನೂಕೂಲವಾಗಿವೆ. ಆದ್ದರಿಂದ 2020 2021 ಸಾಲಿನ ಆದೇಶದಂತೆ ಈ ವರ್ಷವು ಕೂಡ ಜೋಳವನ್ನು ಖರೀದಿ ಮಾಡಬೇಕು ಮತ್ತು ಭತ್ತದ ಖರೀದಿ ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ತಕ್ಷಣವೇ ಕ್ರಮಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಸ್ಥಳೀಯ ಶಾಸಕರಾದ ವೆಂಕಟರಾವ್ ನಾಡಗೌಡ ರೈತರ ದಾರಿ ತಪ್ಪಿಸುವ ಮೂಲಕ ಅಧಿಕಾರ ಪಡೆದು ಅವರ ಪರವಾಗಿ ಧ್ವನಿ ಎತ್ತದೇ ಬಿಜೆಪಿಯ ಜೊತೆ ಹೊಂದಾಣಿಕೆ ಮಾಡಿಕೊಂಡು ನಿಮ್ಮಬೆಳೆ ಬೆಯಿಸಿಕೊಳ್ಳುತ್ತಿದ್ದಿರಿ. ಭತ್ತ ಖರೀದಿ ಕೇಂದ್ರಗಳನ್ನು ತೆಗೆದಿದ್ದೇವೆ ಎಂದು ಸುಳ್ಳು ಹೇಳುವ ಮೂಲಕ ರೈತರ ದಾರಿ ತಪ್ಪಿಸುತ್ತಿದ್ದಾರೆ. ಯಾವುದೇ ರೈತಪರವಾಗಿ ಹೋರಾಟ ಮಾಡದೇ ಕಾಂಗ್ರೆಸ್‌ ಪಕ್ಷದ ಬಗ್ಗೆ ಮಾತನಾಡಬೇಕಾದರೆ ಎಚ್ಚರಿಕೆಯಿರಲಿ ಎಂದರು.ಆರ್ ಡಿಸಿಸಿ ಬ್ಯಾಂಕಿನನಿರ್ದೇಶಕರಾಗಿ ಸೋಮನಗೌಡ ಬಾದರ್ಲಿ ಅವರ ಗೆಲುವಿಗೆ ಕಾರಣರಾದ ಎಲ್ಲಾ ಜಿಲ್ಲೆಯ ಹಿರಿಯ ಪಕ್ಷಾತೀತವಾಗಿ ಬೆಂಬಲಿಸಿದ ಎಲ್ಲಾ ಮುಖಂಡರಿಗೆ ಮತದಾರರಿಗೆ ಧನ್ಯವಾದಗಳನ್ನು ತಿಳಿಸಿದರು. ರೈತಸಮುದಾಯ ಸಹಕಾರ ಸಂಘಗಳ ಅಭಿವೃದ್ಧಿಯ ಪರವಾಗಿ ಕೆಲಸ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಎಚ್ಎಮ್ ಬಡಿಗೇರ, ವೆಂಕಟೇಶ್ ರಾಗಲಪರ್ವಿ,ಯೂಸುಫ್ ಪಾಷಾ ದಡೇಸುಗೂರು, ಶಿವಕುಮಾರ್ ಜವಳಿ, ಶರಣಯ್ಯ ಸ್ವಾಮಿ ಹಿರೇಮಠ್, ಖಾಜಾಹುಸೇನ್ ರೌಡಕುಂದ, ಹಬೀಬ್ ಕಾಜಿ,ಶಂಕರಗೌಡ ಇತರರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend