ನಾಡಗೌಡ್ರು ಬಿಜೆಪಿ ಪಕ್ಷದ ವಕ್ತಾರರು -ಬಸವರಾಜ ಹಿರೇಗೌಡ…!!!

Listen to this article

ನಾಡಗೌಡ್ರು ಬಿಜೆಪಿ ಪಕ್ಷದ ವಕ್ತಾರರು -ಬಸವರಾಜ ಹಿರೇಗೌಡ.

ಸಿಂಧನೂರು: ಸ್ಥಳೀಯ ಶಾಸಕರಾದ ವೆಂಕಟರಾವ್ ನಾಡಗೌಡ್ರು ಚುನಾವಣೆ ಸಂದರ್ಭದಲ್ಲಿ ಪಾದಯಾತ್ರೆ ಮಾಡಿ ಜನರನ್ನು ಮರುಳುಗೊಳಿಸಿ ಶಾಸಕರಾಗಿ ರೈತರ ಪರವಾಗಿ ಧ್ವನಿ ಎತ್ತದೇ ಬಿಜೆಪಿಯ ವಕ್ತಾರರಾಗಿ ವೆಃಕಟರಾವ್ ನಾಡಗೌಡರು ಮಾತನಾಡುತ್ತಿದ್ದಾರೆ.
ರೈತರ ಪರವಾಗಿ ಯಾರೇ ಹೋರಾಟಕ್ಕೆ ಮುಂದಾದರೆ ಅದನ್ನು ಅಡ್ಡಿಪಡಿಸಲು ಪತ್ರಿಕಾಗೋಷ್ಠಿ ಕರೆದು ರೈತರನ್ನು ದಿಕ್ಕು ತಪ್ಪಿಸುವ ಕೆಲಸ ತಾಲೂಕಿನಲ್ಲಿ ಕೆಲವರು ಮಾಡುತ್ತಿದ್ದಾರೆ ಎಂದರು.
ರೈತರ ಪರವಾಗಿ ಕೆಲಸ ಮಾಡಲ್ಲ ರೈತರ ಪರವಾಗಿ ಇರುವಂತ ಅವರಿಗೆ ಬೆಂಬಲ ನೀಡಲ್ಲ. ಶ್ರೀಮಂತರು, ಕಾಂಗ್ರೆಸ್ ಪಕ್ಷದವರು ಜೋಳ ಮಾತ್ರ ಬೆಳೆದಿಲ್ಲ. ಬಿಜೆಪಿಯವರು ಜೆಡಿಎಸ್ ನವರ ರೈತರು ಜೋಳವನ್ನು ಬೆಳೆದಿದ್ದಾರೆ. ರೈತರಿಗೋಸ್ಕರ ಹೋರಾಟ ಮಾಡಿದ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ ಎನ್ನುವ ಮೂಲಕ ನಾಡ ಗೌಡರಿಗೆ ಬಸವರಾಜ ಹಿರೇಗೌಡ್ರು ತಿರುಗೇಟು ನೀಡಿದರು.

ನಗರದ ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿ ನಿವಾಸದಿಂದ ತಹಸೀಲ್ದಾರ ಕಾರ್ಯಲಯದವರೆಗೆ ನೂರಾರು ರೈತರೊಂದಿಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ಮೂಲಕ ತಹಸೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿದರು.

ಸರ್ಕಾರ ರೈತರ ಜೋಳ ಖರೀದಿಸುವಲ್ಲಿ ವಿಧಿಸಿರುವ ಷರತ್ತುಗಳನ್ನು ಬದಲಾಯಿಸಿ. ರಾಯಚೂರು ಜಿಲ್ಲೆಗೆ ನಿಯಮದ ಪ್ರಕಾರ ಸರಬರಾಜು ಆಗಬೇಕಾದ ಡಿ.ಎ.ಪಿ ಮತ್ತು 10,26.26 ರಸಗೊಬ್ಬರ ಸರಬರಾಜು ಮಾಡುವ ಕುರಿತು.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಸರಿ ಸುಮಾರು ನಾಲ್ಕು ಹೋಬಳಿ ಭಾಗಗಳಲ್ಲಿ 25ಸಾವಿರ ರೈತ ಕುಟುಂಬಗಳು ಸುಮಾರು 30ಸಾವಿರ ಎಕರೆ ಪ್ರದೇಶದಲ್ಲಿ ಜೋಳ ಬೆಳೆದಿದ್ದು, ಕಳೆದ ವರ್ಷ ಬೆಳೆದ ಎಲ್ಲಾ ಜೋಳವನ್ನು ಸರ್ಕಾರವೇ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿತ್ತು. ಕೆಲವೊಂದು ಸುತ್ತೊಲೆಗಳನ್ನು ಹೊರಡಿಸಿ ಹಲವಾರು ನಿರ್ಬಂಧಗಳನ್ನು ವಿಧಿಸಿರುವುದರಿಂದ ಬೆಳೆದ ಜೋಳವನ್ನು ಎಲ್ಲಿ ಮಾರಾಟ ಮಾಡಬೇಕೆಂದು ರೈತರಿಗೆ ತಿಳಿಯದಂತಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದ ಕಾರಣ ಮಾರಾಟ ಮಾಡಲು ಹಲವಾರು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಕಳೆದ ಬಾರಿ ಪ್ರತಿ ಎಕರೆಗೆ 15 ಕ್ವಿಂಟಾಲ್‌ರಂತೆ ಅನಿಯಮಿತವಾಗಿ ಯಾವುದೇ ನಿರ್ಬಂಧವಿಲ್ಲದೆ ಸಂಪೂರ್ಣವಾಗಿ ಎಲ್ಲ ಜೋಳವನ್ನು ಸರ್ಕಾರವ ಖರೀದಿ ಮಾಡಿತ್ತು. ಕಳೆದ ವರ್ಷ ಕನಿಷ್ಟ ಬೆಂಬಲ ಬೆಲೆಯಲ್ಲಿ ರೈತರಿಂದ 21 ಲಕ್ಷ ಮೆಟ್ರಿಕ್‌ ಟನ್ ರಾಗಿ, 1.10 ಲಕ್ಷ ಮೆಟ್ರಿಕ್ ಟನ್ ಜೋಳವನ್ನು ಖರೀದಿಸಲು ಅನುಮತಿ ನೀಡಿದೆ. ಇದರ ಫಲವಾಗಿ 80 ಸಾವಿರ ಟನ್ ಜೋಳ 2 ಲಕ್ಷ ಟನ್ ಭತ್ತ 4,74 ಲಕ್ಷ ಟನ್ ರಾಗಿ ಖರೀದಿ ಕೇಂದ್ರ ಮಾರಾಟವಾಗಿತ್ತು. ಈ ವರ್ಷ ಒಬ್ಬ ರೈತ ಎಕರೆಗೆ 10 ಕ್ವಿಂಟಾಲರಿಂದ 20 ಕ್ವಿಂಟಾಲ ಜೋಳವನ್ನು ಮಾತ್ರ ಖರೀದಿ ಕೇಂದ್ರಕ್ಕೆ ಕೊಡಬೇಕು ಭತ್ತ ಬೆಳೆದ ರೈತ 40 ಕ್ವಿಂಟಾಲ ಮಾರಾಟ ಮಾಡಬೇಕು ಎಂಬ ನಿರ್ಬಂಧ ಹಾಕಿರುವುದರಿಂದ ರೈತರು ಕಂಗೆಟ್ಟಿದ್ದಾರೆ ಈ ವರೆಗೂ ಜೋಳ ಬೆಳೆದ ರೈತರ ಪೈಕಿ 7 ಜನ ಮಾತ್ರ ಹೆಸರು ನೋಂದಾಯಿಸಿದ್ದಾರೆ. ಅವೈಜ್ಞಾನಿಕ ನಿಯಮ ತೆಗೆದುಹಾಕಬೇಕೆಂಬ ಬೇಡಿಕೆಯನ್ನು ಇಟ್ಟುಕೊಂಡು ನಾವುಗಳು ಹೋರಾಟಕ್ಕೆ ನಿರ್ದರಿಸಿ ಹೋರಾಟವನ್ನು ಮಾಡುತ್ತಿದ್ದೇವೆ ಸಿಂಧನೂರು ತಾಲೂಕಿನಲ್ಲಿ 30 ರಿಂದ 40 ಸಾವಿರ ಎಕೆರೆಯಲ್ಲಿ ಜೋಳ ಬೆಳೆಯಲಾಗಿದೆ ಕಳೆದ 15 ದಿನಗಳಿಂದ ಜೋಳ ಭತ್ತ ಕೊಯಿಲು ಮಾಡಿದ ರೈತರು ಮಾರಾಟ ಮಾಡಲು ಹಿಂದೇಟು ಹಾಕಿ ಸಂಕಷ್ಟದಲ್ಲಿದ್ದಾರೆ. ಜೋಳದ ಬೆಲೆ ಕ್ವಿಂಟಾಲಿಗೆ ಮುಕ್ತ ಮಾರುಕಟ್ಟೆಯಲ್ಲಿ ಸಾವಿರ ರೂಪಾಯಿ ಕಡಿಮೆ ಇದೆ, ಬೆಂಬಲ ಬೆಲೆ ಪ್ರತಿ ಕ್ವಿಂಟಾಲಿಗೆ 2,738-00 ದರವಿದೆ. ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿ ಕಾರಣ ಸರ್ಕಾರ ವಿಧಿಸಿದ ಶರತ್ತುಗಳು ಬದಲಾಯಿಸಬೇಕು ಎಂದು ತಸಿಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪಂಪನಗೌಡ ಬಾದರ್ಲಿ,ಬಾಬುಗೌಡಬಾದರ್ಲಿ,ನಿರುಪಾದೆಪ್ಪ ಗುಡಿಹಾಳ , ಶೇಖರಪ್ಪ ಗಿಣಿವಾರ, ಹನುಮಂತಪ್ಪ ಗೋಮರ್ಸಿ, ದೊಡ್ಡನಗೌಡ ಕಲ್ಲೂರು, ಜಾಫರ್ ಜಾಹಗಿರ್ದಾರ, ಎನ್. ಅಮರೇಶ, ಬೀಮನಗೌಡ, ಸಾಯಿರಾಮಕ್ರಿಷ್ಣ, N ಅಮರೇಶ್, ಖಾಜಿ ಮಲ್ಲಿಕ್, ರೈತ ಮುಖಂಡರು ಅನೇಕ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು….

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend