ಸಿಂಧನೂರು : ಪೊಲೀಸ್ ಅಧಿಕಾರಿಗಳ ವಿರುದ್ಧ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲು ಒತ್ತಾಯ…!!!

Listen to this article

ಸಿಂಧನೂರು : ಪೊಲೀಸ್ ಅಧಿಕಾರಿಗಳ ವಿರುದ್ಧ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲು ಒತ್ತಾಯ .

ನಗರದ ಕೋರ್ಟ್ಆವರಣದಲ್ಲಿ ದಿ.27/12/ 2021 ರಂದು ನಡೆದ ಕೋರ್ಟಿನ ಗೇಟಿನ ಮುಂಭಾಗದಲ್ಲಿ ವಕೀಲರು ದ್ವಿಚಕ್ರ ವಾಹನಗಳನ್ನು ಗೇಟಿನ ಮುಂದಿನ ಬಾಗಿಲಲ್ಲಿ ನಿಲ್ಲಿಸಿದ್ದರು ಎಂಬ ಕಾರಣಕ್ಕೆ ಕರ್ತವ್ಯನಿರತ ಟ್ರಾಫಿಕ್ ಪೊಲೀಸರಾದ ಮಲ್ಲಿಕಾರ್ಜುನ ಎ.ಎಸ್.ಐ, ಪ್ರಭು ಹಾಗೂ ಕೋರ್ಟ ಪಿ.ಸಿ.ಹೊನ್ನೂರು, ಇವರುಗಳು ವಕೀಲರ ಸೈಕಲ್ ಮೋಟರ್ ಕೀಲಿಗಳನ್ನು ಕಸಿದುಕೊಂಡು ರಸ್ತೆ ಸುರಕ್ಷಾ ಕಾಯ್ದೆಯಲ್ಲಿ ಇಲ್ಲಿ ವಾಹನ ಸಂಚಾರಕ್ಕೆ ತಡೆಯಾಗಿದೆ ಎಂದು ನಾಲ್ಕು ಜನರಿಗೆ ಐದುನೂರು ರೂಪಾಯಿಗಳ ದಂಡ ವಿಧಿಸಿ ರಸೀದಿಗಳನ್ನು ನೀಡಿ ಹಣವನ್ನು ತೆಗೆದುಕೊಂಡಿರುತ್ತಾರೆ. ನೋಟಿಸ್ ನೀಡಿ ನಾವು ನ್ಯಾಯಾಲಯಕ್ಕೆ ಉತ್ತರಿಸುತ್ತೇವೆ ಎಂದು ಮನವಿ ಮಾಡಿಕೊಂಡರು ಟ್ರಾಫಿಕ್ ಪೊಲೀಸರು ದಂಡ ಕಟ್ಟಿದರೆ ಗಾಡಿಗಳನ್ನು ಬಿಡುತ್ತೇವೆ ಇಲ್ಲದಿದ್ದರೆ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ. ಮತ್ತು ದಂಡ ಹಾಕಿದ ರಸೀದಿಯಲ್ಲಿ ಕೋರ್ಟ್ನ ಮುಂಭಾಗ ಎಂದು ತೋರಿಸದೆ ಎಂಜಿ ರಸ್ತೆ ಹಾಗೂ ರಾಯಚೂರ್ ರಸ್ತೆಯಲ್ಲಿ ನಿಲ್ಲಿಸಿದ್ದಾರೆ ಎಂದು ಬರೆದು ರಸೀದಿಗಳನ್ನು ನೀಡಿರುತ್ತಾರೆ. ಮೋಟರ್ ಸೈಕಲ್ ಗಳಿಗೆ ದಂಡವಿಧಿಸಿದ ಸಂಬಂಧವಾಗಿ ಕಾನೂನುಬಾಹಿರವಾಗಿ ತಮ್ಮ ವ್ಯಾಪ್ತಿಗೆ ಬರದಿದ್ದರೂ ಸಹಿತ ವಕೀಲರ ಮೇಲೆ ಪೋಲೀಸ್ ದರ್ಪ ತೋರಿಸಿ ಕಾನೂನು ಉಲ್ಲಂಘನೆ ಮಾಡಿ ಕರ್ತವ್ಯಲೋಪವೆಸಗಿದ್ದಾರೆ .ದೌರ್ಜನ್ಯದಿಂದ ಒತ್ತಾಯಪೂರ್ವಕವಾಗಿ ಕೀಲಿ ಗಳನ್ನ ಕಸಿದುಕೊಂಡು ದಂಡವನ್ನು ವಿಧಿಸಿರುತ್ತಾರೆ. ದ್ವಿಚಕ್ರ ವಾಹನ ಕೊರ್ಟ ಒಳಗಡೆ ಇದ್ದರೂ ಸಹಿತ ಎಂಜಿ ರಸ್ತೆ ಮತ್ತು ರಾಯಚೂರು ರಸ್ತೆ ಎಂದು ರಸೀದಿ ನೀಡಿದ್ದಾರೆ. ಕರ್ತವ್ಯಲೋಪವೆಸಗಿದ ಪೋಲಿಸ್ ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್ ಕಾಯ್ದೆ ಅಡಿಯಲ್ಲಿಸೂಕ್ತ ಕ್ರಮ ಜರುಗಿಸಬೇಕು ಮತ್ತು ದೂರನ್ನು ದಾಖಲಿಸಬೇಕು ಎಂದು ತಾಲೂಕು ನ್ಯಾಯವಾದಿಗಳ ಸಂಘದಿಂದ ನಗರ ಪೋಲಿಸ್ ಠಾಣೆ ಅಧಿಕಾರಿಗಳಿಗೆ ಮನವಿ ಮುಖಾಂತರ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬೀಮನಗೌಡ ವಕೀಲರ ಸಂಘದ ಅಧ್ಯಕ್ಷರು, ವಕೀಲರುಗಳಾದ ಡಿ.ರಾಮಣ್ಣ ನಾಯಕ, ಶೇಖರಪ್ಪ ದುಮತಿ, ಶರಣಬಸವ ಸಾಲಗುಂದಾ, ಎಂನಾಗರಾಜ ,ವಿಜಯಬಾಸ್ಕರ ರಡ್ಡಿ ,ವಿರೂಪಾಕ್ಷಪ್ಪ ಮಾ.ಪಾ, ಆರ್.ಕೆ.ನಾಗರಾಜ,ಭೀಮರಾಯ,ಸಿದ್ದಲಿಂಗಯ್ಯ,ಶ್ರೀನಿವಾಸ ನಾಯಕ, ಶರಣಬಸವ ಉಮಲೂಟಿ, ಬಸವರಾಜ ಹೊಸಳ್ಳಿ, ರವಿ, ಲಕ್ಷ್ಮಣ ಕುರುಕುಂದಾ ಅಬ್ದುಲ್ ರೆಹಮಾನ್, ವಿಜಯಬಾಷ್ಕರ ಸೇರಿದಂತೆ ಇನ್ನಿತರ ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು….

 

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend