ಮೊಳಕಾಲ್ಮುರು: ಕೋವಿಡ್-19 ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚೆ..!!

Listen to this article

ಚಿತ್ರದುರ್ಗ: ಮೊಳಕಾಲ್ಮುರು / ಕೋವಿಡ್-19 ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚೆ..! ಮಾನ್ಯ ಸಚಿವರ ಹಾಗೂ ಮಾನ್ಯ ಸಂಸದರ ತಾಲೂಕು ಸರ್ಕಾರಿ ಅಧಿಕಾರಿಗಳ ,ವಿವಿಧ ವಿಷಯ ಪರಣಿತರ ಜೊತೆ ಸಭೆ ನಂತರ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚೆ. ಕಾಂಟ್ಯಾಕ್ಟ್ ಟ್ರೇಸಿಂಗ್,ಟೆಸ್ಟಿಂಗ್, ಬೆಡ್, ಆಕ್ಸಿಜನ್, ವ್ಯಾಕ್ಸಿನೇಷನ್, ಪರಿಣಾಮಕಾರಿ ಔಷಧಗಳ ವ್ಯತ್ಯಯ , ಸಿಬ್ಬಂದಿ ,ಆಂಬ್ಯುಲೆನ್ಸ ಕೊರತೆ ಆಗದಂತೆ ಕ್ರಮ ವಹಿಸಲು ಸೂಚನೆ.
ತಹಶೀಲ್ದಾರರ ನೇತೃತ್ವದಲ್ಲಿ ವಿವಿಧ ವಿಭಾಗಗಳು ಮಾಡಿ ಮಾನ್ಯ ಸಚಿವರು ಜವಾಬ್ದಾರಿ ನೀಡಿದ್ದಾರೆ. ಮೊಳಕಾಲ್ಮುರು ತಾಲೂಕು ಸರ್ಕಾರಿ ಆಸ್ಪತ್ರೆ ಯಲ್ಲಿ 51 ಆಕ್ಸಿಜನ್ ಬೆಡ್ ಚಿಕಿತ್ಸೆ ನೀಡಲು ಎ ಎಮ್ ಓ ಡಾ ಅಭಿನವ್ ಮತ್ತವರ ತಂಡ ಅವಿರತ ಶ್ರಮ ವಹಿಸಿ ಕರ್ತವ್ಯ ನಿರ್ವಹಿಸುತ್ತಿದೆ. ರಾಂಪುರ ಸರ್ಕಾರಿ ಆಸ್ಪತ್ರೆ ಸುಮಾರು 25 ಆಕ್ಸಿಜನ್ ಯುಕ್ತ ಬೆಡ್ ಗಳು ಇದ್ದು ಸೆಂಟ್ರಲ್ ಆಕ್ಸಿಜನ್ ಪ್ಲಾಂಟ್ ಕಾರ್ಯ ನಿರ್ವಹಿಸಲು ಬೇಕಾದದ್ದು ಸಿಲಿಂಡರ್ ಕೊರತೆಯಿಂದ ವಿಳಂಬವಾಗಿದ್ದು ಇನ್ನೊಂದು ದಿನದಲ್ಲಿ ಸಿಲೆಂಡರ್ ವ್ಯವಸ್ಥೆಯಾಗಿ ಅಲ್ಲಿ ಕಾರ್ಯಾರಂಭವಾಗಿ ರೋಗಿಗಳಿಗೆ ಸಹಕಾರಿ ಆಗಲಿದೆ. ಪ್ರಸ್ತುತ ರಾಂಪುರ ಡಿಸಿಎಚ್ ನಲ್ಲಿ ಡಾ ಮಧುಕುಮಾರ್ ,ಡಾ ರಮೇಶ್ ಮತ್ತವರ ತಂಡ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಟಿ ಎಚ್ ಓ ನೇತೃತ್ವದ ತಂಡ ಕಾಂಟ್ಯಾಕ್ಟ್ ಟ್ರೇಸಿಂಗ್,ಟೆಸ್ಟಿಂಗ್ ,ವ್ಯಾಸ್ಸಿನೇಶನ್ ನಲ್ಲಿ 31 % ನಷ್ಟು ಸಾಧನೆ ಮಾಡಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮೊಳಕಾಲ್ಮುರು ಆದರ್ಶ ಶಾಲೆಯಲ್ಲಿ ಈಗಾಗಲೇ 63 ಬೆಡ್ ಗಳ CCC – ಕೋವಿಡ್ ಕೇರ್ ಸೆಂಟರ್ ಕಾರ್ಯಾರಂಭವಾಗಿದೆ , ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 80 ಬೆಡ್, ರಾಂಪುರದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 50 ಬೆಡ್ ನ ಸುಸಜ್ಜಿತ ಕೋವಿಡ್ ಕೇರ್ ಸೆಂಟರ್ ರೂಪಿಸಲು ಮಾನ್ಯ ತಹಶೀಲ್ದಾರ ನೇತೃತ್ವದಲ್ಲಿ ಕಾರ್ಯ ಜರುಗುತ್ತಿದೆ.ಇಲ್ಲಿ ಯಾವುದೇ ರೋಗ ಲಕ್ಷಣ ಇಲ್ಲದ ರೋಗಿಗಳು ಉಳಿಯಲಿದ್ದಾರೆ. ಇನ್ನುಳಿದಂತೆ ಆಕ್ಸಿಜನ್ ಕೊರತೆ ನೀಗಿಸಲು ಡಿಎಚ್ಓ 25 ಜಂಬೋ ಸಿಲೆಂಡರ್ ಇನ್ನೊಂದು ದಿನದಲ್ಲಿ ಮೊಳಕಾಲ್ಮುರು ಆಸ್ಪತ್ರೆ ಸೇರಲಿದೆ ಎಂದಿದ್ದಾರೆ. ಕೇಂದ್ರದಿಂದ ಬರುವ ಅಥವಾ ತಮ್ಮ ಇಲಾಖಾ ವತಿಯಿಂದ ಆಕ್ಸಿಜನ್ ಉತ್ಪಾದನಾ ಪ್ಲಾಂಟ್ ಹಾಕಲು ಅಣಿಯಾಗಲು‌ ಮಾನ್ಯ ಸಚಿವರಾದ ಬಿ ಶ್ರೀರಾಮುಲು ರವರು ಸೂಚಿಸಿದ್ದಾರೆ. ಜನರು ಮುನ್ನೆಚ್ಚರಿಕೆ ವಹಿಸಿ, ಲಾಕ್ ಡೌನ್ ನಿಯಮ ಪಾಲಿಸಿ ,ಸೋಂಕಿನ ಲಕ್ಷಣ ಇರುವವರು ಯಾವುದೇ ಮರು ಯೋಚಿಸದೆ ಪರೀಕ್ಷೆಗೆ ಒಳಪಟ್ಟು ರೋಗ ಹರಡುವಿಕೆ ತಡೆಗಟ್ಟುವಲ್ಲಿ ಸಹಕರಿಸಲು ಕೋರಿದ್ದಾರೆ, ಅದಷ್ಟೇ ಅಲ್ಲದೆ ಲಸಿಕೆ ಪಡೆದು ಕೋವಿಡ್ ನಿಯಂತ್ರಕ್ಕೆ ಕೈಜೋಡಿಸಲು ಮಾನ್ಯ ಸಚಿವರು ಮನವಿ ಮಾಡಿದ್ದಾರೆ.

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend