ಮೊಳಕಾಲ್ಮೂರು: ರಾಂಪುರ ವರ್ತಕರಿಗೆ ಕೋವಿಡ್ ಮಾರ್ಗಸೂಚಿ ಬಗ್ಗೆ ಜಾಗೃತಿ ಮೂಡಿಸಿದ: ಪಿ.ಎಸ್.ಐ ಗುಡ್ಡಪ್ಪ.!!

Listen to this article

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಬಸ್ ನಿಲ್ದಾಣದ ಆವರಣದಲ್ಲಿ ಇಂದು ಹೂ, ಹಣ್ಣು, ತರಕಾರಿ ಮಾರಾಟಗಾರರಿಗೆ ಕೋವಿಡ್ 19 ಮುಂಜಾಗ್ರತೆ ಕಾರ್ಯಕ್ರಮದ ಜಾಗೃತಿ ಜಾಥಾದಲ್ಲಿ ಮಾತನಾಡಿದರು.. ಕೊರೋನಾ ಎರಡನೇ ಅಲೆ ದಿನೇ ದಿನೇ ಹೆಚ್ಚುತ್ತಿರುವುದ ರಿಂದ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಉತ್ತಮ ಆರೋಗ್ಯವನ್ನು ಕಂಡುಕೊಳ್ಳುವಂತೆ ರಾಂಪುರ ಪಿಎಸ್‌ಐ ಗುಡ್ಡಪ್ಪ ಹೇಳಿದರು. ತಾಲೂಕಿನ ರಾಂಪುರ ಬಸ್ ನಿಲ್ದಾಣದ ಆವರಣದಲ್ಲಿ ಇಂದು ಹೂ, ಹಣ್ಣು, ತರಕಾರಿ ಮಾರಾಟಗಾರರಿಗೆ ಕೋವಿಡ್ 19 ಮುಂಜಾಗ್ರತೆ ಕಾರ್ಯಕ್ರಮದ ಜಾಗೃತಿ ಜಾಥಾದಲ್ಲಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಕೊರೋನಾ ಮಹಾ ಮಾರಿ ಹರಡಿದೆ. ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಜನತೆ ಸೋಂಕಿಗೆ ಒಳಗಾಗಿ ನೂರಾರು ಜನರು ಸಾವನ್ನಪ್ಪುತ್ತಿದ್ದಾರೆ. ಹೀಗಿದರೂ ಸಾರ್ವಜನಿಕವಾಗಿ ಕೆಲವರು ಅನಗತ್ಯವಾಗಿ ಓಡಾಡುತ್ತಾ ಕೊರೋನಾ ನಿಯಮಗಳನ್ನು ಮೀರುತ್ತಿರುವುದು ಕಂಡುಬರುತ್ತಿದೆ. ನಿಮ್ಮಗಳ ನಿರ್ಲಕ್ಷದಿಂದ ಮತ್ತೊಬ್ಬರ ಬದುಕಿಗೆ ಮಾರಕವಾಗದಂತೆ ಜಾಗೃತರಾಗಿದ್ದಲ್ಲಿ ಕೊರೋನಾ ನಿಯಂತ್ರಿಸಬಹುದು ಎಂದರು. ತಾಲೂಕಿನಲ್ಲಿಯೂ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಗತೊಡಗಿದೆ. ಇನ್ನಷ್ಟು ಹೆಚ್ಚಳವಾಗದಂತೆ ಪ್ರತಿಯೊಬ್ಬರು ಮುಂಜಾಗ್ರತೆ ವಹಿಸಬೇಕು. ಅನಗತ್ಯವಾಗಿ ಓಡಾಡದೆ ಸಾಮಾಜಿಕ ಅಂತರ ಕಾಯ್ದುಕೊಳ್ಳ ವ್ಯಾಪಕವಾಗಿ ಬೇಕು. ಮನೆಗಳಲ್ಲಿಯೇ ಇದ್ದು ಕೊರೋನಾ ಜೈನ್ ಲಿಂಕ್ ತಪ್ಪಿಸಬೇಕು. ಹಣ್ಣು ತರಕಾರಿ, ಸೇರಿದಂತೆ ಅಗತ್ಯ ವಸ್ತುಗಳ ಮಾರಾಟಗಾರರು ಸರ್ಕಾರದ ಮಾರ್ಗಸೂಚಿಯ ಪ್ರಕಾರ ನಿಗದಿತ ಸಮಯದೊಳಗೆ ವ್ಯಾಪಾರ ಮಾಡಬೇಕು. ಜತೆಗೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡುವುದು ಮುಖ್ಯವಾಗಿದೆ. ನಿಯಮಗಳನ್ನು ಮೀರಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರ ಜಾರಿ ಮಾಡಿರುವ ಜನತಾ ಕರ್ಮ್ಯೂ ನಿಯಮಗಳನ್ನು ಪಾಲನೆ ಮಾಡಬೇಕು. ಅಗತ್ಯ ಸಾಮಾನುಗಳನ್ನು ಕೊಳ್ಳುವ ಸಂದರ್ಭ ಅಗತ್ಯ ಅಗತ್ಯ ಮುನ್ನೆಚ್ಚರಿಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಯಾವುದೇ ಜ್ವರ ಲಕ್ಷಣಗಳು ಕಂಡುಬಂದರೆ ಸ್ಥಳೀಯ ಆಸ್ಪತ್ರೆಗೆ ಹೋಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕೆಂದರು. ಎಎಸ್‌ಐ ರಾಮಲಿಂಗಪ್ಪ, ಚಂದ್ರಪ್ಪ, ಹೆಡ್ ಕಾನ್ಸ್‌ಟೇಬಲ್ ಲೋಕೇಶ, ಆನಂದ, ಕಾನ್ಸ್ಟೇಬಲ್ ಶಿವಣ್ಣ ಮೇಘರಾಜ, ಅವಿನಾಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು….

ವರದಿ.ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend