ಕೂಡ್ಲಿಗಿ ಕಿರಾಣಿ ಅಂಗಡಿ ಮಾಲೀಕರಿಗೆ ಡಿವೈಎಸ್ಪಿ ಹರೀಶರೆಡ್ಡಿ ಯವರಿಂದ ಆರೋಗ್ಯದ ಅರಿವಿನ ಬಗ್ಗೆ ಮಾಹಿತಿ…!!!

Listen to this article

*ದಿನಾಂಕ 4-5-2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು* ಕೂಡ್ಲಿಗಿ: ಮನುಷ್ಯ ತನ್ನ ಆಸೆಗಾಗಿ ಕೋಟಿಗಟ್ಟಲೆ ಹಣಗಳಿಸಿದರೂ ಆರೋಗ್ಯಕ್ಕೆ ಆಧ್ಯತೆ ನೀಡದಿದ್ದರೆ ಆ ವ್ಯಕ್ತಿ ಸಮಾಜದಲ್ಲಿ ಬದುಕಿದ್ದು ವ್ಯರ್ಥ ಎಂದು ಡಿವೈಎಸ್ಪಿ ಹರೀಶರೆಡ್ಡಿ ಹೇಳಿದರು.ಅವರು ಸ್ಥಳೀಯ ಪೋಲಿಸ ಠಾಣೆಯಲ್ಲಿ ನಡೆದ ಕಿರಾಣಿ ಮಾಲೀಕರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಪಟ್ಟಣದಲ್ಲಿ ಸರಿಯಾಗಿ ೧೦ ಗಂಟೆಗೆ ವರ್ತಕರು ಎಲ್ಲರೂ ಬಂದ್ ಮಾಡಬೇಕು. ದಿನಾಲೂ ನಮ್ಮ ಪೋಲಿಸ್ ಇಲಾಖೆಯ ಕಾರ್ಯಚರಣೆ ಮಾಡಿರುವಂತ ಸಮಯದಲ್ಲಿ ಸುಮಾರು ೧೦೦೦ ಸಾವಿರಕ್ಕಿಂತ ಹೆಚ್ಚು ಜನ ಸಂದಣಿಗಳು ಕಂಡುಬರುತ್ತಿವೆ ಒಂದು ಕಡೆ ಪ್ರಕರಣಗಳು ಹೆಚ್ಚಾಗುತ್ತಿವೆ ಆದ ಕಾರಣ ಕಡಿವಾಣ ಹಾಕಲಿಕ್ಕೆ ಅಂಗಡಿ ಮಾಲೀಕರು ತಾವುಗಳು ನಿಮ್ಮ ಪರಿಚಯಸ್ಥರ ಗಮನಕ್ಕೆ ಒಂದೇ ಬಾರಿ ರೇಷನ್‌ಕೊಂಡುಕೊಳ್ಳಿ ಎಂದು ತಿಳಿಸಿ,ಅಂಗಡಿ ಮುಂದೆ ಸಾಮಾಜಿಕ ಅಂತರವನ್ನು ಕಾಪಾಡಬೇಕು ಜೊತೆಯಲ್ಲಿ ವ್ಯಾಪಾರಕ್ಕಾಗಿ ಬರುವ ವ್ಯಕ್ತಿ ಮಾಸ್ಕ ಧರಿಸಿರಬೇಕು ಎಂದು ಎಚ್ಚರಿಸಿ ಎಂದರು.
ಪಟ್ಟಣದಲ್ಲಿ ನಿಮಗೆ ತಿಳಿದಿರುವ ಕೊರೊನಾ ಸೊಂಕು ಪ್ರಕರಣದ ವ್ಯಕ್ತಿ ಸಂಚಾರ ಮಾಡುತ್ತಿದ್ದರೆ ಅಂತವರನ್ನು ಗಮನಹರಿಸಿ ನಮಗೆ ಮಾಹಿತಿ ಕೊಡಿ ನಾವು ಆ ವ್ಯಕ್ತಿಗೆ ತಿಳಿ ಹೇಳುತ್ತೇವೆ.
ಕೊರೊನಾ ಮಹಾಮಾರಿ ರೋಗವು ವ್ಯಕ್ತಿಯ ಮನೋಭಾವನೆಯನ್ನು ನೋಡಿ ವೈರಸ್ ಹರಡುವುದಿಲ್ಲ ಆ ವೈರಸ್ ಗೆ ಬೇಧ ಬಾವ ಇಲ್ಲ ಆದ ಕಾರಣ ವರ್ತಕರು ಜಾಗೃತರಾಗಬೇಕಾಗಿದೆ ಆಗೇಯೆ ಗ್ರಾಹಕರಿಗೆ ಅರಿವು ಮೂಡಿಸಿ ಅಂಗಡಿಯಲ್ಲಿ ಕೂಲಿ ಮಾಡುವವರು ಬಬ್ಬರು ಅಥವಾ ಇಬ್ಬರು ಇದ್ದರೆ ಸಾಕಾಗುತ್ತದೆ. ಪ್ರತಿ ಕಿರಾಣಿ ಮಾಲೀಕರು ಕೈಜೋಡಿಸಿದಾಗ ಮಾತ್ರ ಜನರ ಜೀವನ ದುಸ್ಥಿರವಾಗುವುದನ್ನು ತಡೆಗಟ್ಟಲು ಸಾಧ್ಯ ಎಂದು ನುಡಿದರು.
ಆಂಡ್ರೋಡ್ ಮೋಬೆಲ್ ಬಳಕೆ ಮಾಡಿ ವ್ಯಾಟ್ಸಪ್‌ನಲ್ಲಿ ರೇಷನ್ ಸಂಬಂಧಿಸಿದ ಮಾಹಿತಿಯನ್ನು ತೆಗೆದುಕೊಂಡು ಗ್ರಾಹಕರು ಬರುವ ಅಷ್ಟರಲ್ಲಿ ರೇಷನ್ ಪ್ಯಾಕ್ ಮಾಡಿಕೊಡುವುದು ನಮ್ಮ ಸಲಹೆ ಎಂದರು.ಎಲ್ಲರೂ ಕಾಲಕ್ಕೆ ಹೊಂದಾಣಿಕೆಯಾಗಬೇಕು ಕಾಲ ಯಾರನ್ನು ಕಾಯುವುದಿಲ್ಲ,ಅದಕ್ಕಾಗಿ ಪ್ರತಿ ಮಾಲೀಕರು ದಿನಾಲೂ ಅಂಗಡಿಯಲ್ಲೂ ಪರೀಕ್ಷೆ ಮಾಡಲು ಪಲ್ಸ್ ಮತ್ತು ಆಕ್ಸಿಮೀಟರ್ ಬಳಕೆ ಮಾಡಬೇಕು ಎಂದು ಸೂಚಿಸಿದರು.
ಈ ಸಮಯದಲ್ಲಿ ಸಿಪಿಐ ವಸಂತ್.ವಿ.ಅಸುದೇ,ಪಿಎಸೈ ಸುರೇಶ.ಡಿ,ಪ್ರೋಬೇಷನರಿ ಪಿಎಸೈ ಮಣಿಕಂಠ.ಕೆ.ಹೆಚ್,ಹಾಗೂ ಪಟ್ಟಣದ ಕಿರಾಣಿ ಮಾಲೀಕರು ಉಪಸ್ಥಿತರಿದ್ದರು.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend