ಗ್ರಾಮೀಣ ಪ್ರತಿಭೆ ಒಲಂಪಿಕ್ ನಲ್ಲಿ ಭಾಗವಹಿಸುವುದಕ್ಕೆ ಸಹಕರಿಸಿದ: ಸಚಿವ ಶ್ರೀರಾಮುಲು.!

Listen to this article

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ತಳವಾರಹಳ್ಳಿ ಗ್ರಾಮದ ವಿರೂಪಾಕ್ಷ ಬಿನ್ ಪಾಲಯ್ಯ ಮೊಳಕಾಲ್ಮೂರು ತಾಲೂಕು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪಂಜಾಬಿನ ಪಾಟಿಯಾಲ ಮತ್ತು ಸಂಗೋರ ನಲ್ಲಿ ಅಥ್ಲೇಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ್ದ ಇಂಡಿಯನ್ ಗ್ರಾಂಡ್ ಫಿಕ್ಸ್ (ಐಜಿಪಿ 1 ಐಜಿಪಿ 2) ಸ್ಪರ್ಧೆಯ 1500 ಮೀಟರ್ 5000 ಮೀಟರ್ ಓಟ ಕ್ರೀಡಾಕೂಟದಲ್ಲಿ ಭಾಗವಹಿಸಲು ಆರ್ಥಿಕ ಸಮಸ್ಯೆಯಾಗಿದ್ದು ಇದನ್ನು ಸಚಿವರ ಗಮನಕ್ಕೆ ತಂದ ಕೂಡಲೇ 25 ಸಾವಿರ ರೂಗಳನ್ನು ನೀಡಿದ್ದಾರೆ. ಒಲಂಪಿಕ್ ನಲ್ಲಿ ಭಾಗವಹಿಸುವುದಕ್ಕೆ ಸಹಕರಿಸಲು ಕ್ರೀಡಾಪಟು ವಿರುಪಾಕ್ಷ ಮಾಡಿದ ಮನವಿಗೆ ಸ್ಪಂದಿಸಿ ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ ಶ್ರೀರಾಮುಲು ವೈಯಕ್ತಿಕವಾಗಿ 25,000 ರೂಗಳ ಧನಸಹಾಯ ನೀಡಿದ್ದಾರೆ. ಪಂಜಾಬಿನ ಪಟಾಯನಲ್ಲಿ ಕ್ರೀಡಾಕೂಟದಲ್ಲಿ ಆಯ್ಕೆಯಾದರೆ ಮುಂದಿನ ಅಂತರಾಷ್ಟ್ರೀಯ ಮಟ್ಟದ ತೆರಳಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಬಿ ಶ್ರೀರಾಮುಲು ಅವರು ದೂರವಾಣಿ ಮುಖಾಂತರ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಮೊಳಕಾಲ್ಮೂರು ಮಂಡಲ ಅಧ್ಯಕ್ಷ ಡಾ.ಪಿ ಎಮ್ ಮಂಜುನಾಥ್, ಸಚಿವರ ಆಪ್ತ ಸಹಾಯಕರಾದ ಪಾಪೇಶ್ ನಾಯಕ, ಬಿಜೆಪಿ ಮುಖಂಡರಾದ ಶಾಂತರಾಮ್, ತುಮಕೂರ್ಲಹಳ್ಳಿ, ಮಂಜುನಾಥ್, ಭರತ್, ಇನ್ನು ಮುಂತಾದವರು ಇದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend