ರಾವಣನ ಊರಲ್ಲಿ ರಾಮ-ಲಕ್ಷ್ಮಣ ಜೋಡಿಯಾಟ ವಿಶ್ವದ ಗಮನ ಸೆಳೆಯಿತು,…!!!

Listen to this article

ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತದ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತು. ಭಾರತದ ಬ್ಯಾಟರ್​​ಗಳು ಪಾಕಿಸ್ತಾನ ಬೌಲರ್​ಗಳಿಗೆ ಬೆವರಿಳಿಸಿದರು. ಅದರಲ್ಲೂ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಭರ್ಜರಿ ಶತಕಗಳನ್ನು ಸಿಡಿಸಿದ್ದು ವಿಶೇಷವಾಗಿತ್ತು.

ರಾವಣನ ಊರಲ್ಲಿ ರಾಮ-ಲಕ್ಷ್ಮಣ ಜೋಡಿಯಾಟ ವಿಶ್ವದ ಗಮನ ಸೆಳೆಯಿತು. ಅಲ್ಲದೆ ಈ ಜೋಡಿ ಹಲವು ದಾಖಲೆಗಳನ್ನು ಬರೆದಿದೆ.

ಸೆ. 10ರಂದು ಭಾರತ 24.1 ಓವರ್​​​ನಲ್ಲಿ 147 ರನ್ ​ಗಳಿಸಿತ್ತು. ಈ ಹಂತದಲ್ಲಿ ಮಳೆ ಬಂದ ಕಾರಣ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗಿತ್ತು. ಅದರಂತೆ ಇಂದು ಬ್ಯಾಟಿಂಗ್ ನಡೆಸಿದ ಭಾರತದ ಅದ್ಭುತ ಪ್ರದರ್ಶನ ತೋರಿತು. ಅಜೇಯರಾಗಿ ಕ್ರೀಸ್​​ನಲ್ಲಿದ್ದ ಕೊಹ್ಲಿ ಮತ್ತು ರಾಹುಲ್ ಸೆಪ್ಟೆಂಬರ್​​ 11 ರಂದು ಧಮಾಕ ಸೃಷ್ಟಿಸಿದರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ 94 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್​, 9 ಬೌಂಡರಿಗಳ ಸಹಿತ ಅಜೇಯ 122 ರನ್ ಬಾರಿಸಿದರು.

ಇನ್ನು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಾಹುಲ್, 106 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 12 ಬೌಂಡರಿ ಸಹಿತ ಅಜೇಯ 111 ರನ್​ ಬಾರಿಸಿದರು. ಇವರಿಬ್ಬರು 3ನೇ ವಿಕೆಟ್​ಗೆ ಅಜೇಯ 233 ರನ್​ಗಳ ಜೊತೆಯಾಟ ಆಡಿದರು. ಏಷ್ಯಾಕಪ್ ಇತಿಹಾಸದಲ್ಲಿ ಯಾರೂ ಬರೆಯದ ದಾಖಲೆ ಬರೆದರು. ಈ ಅತ್ಯುತ್ತಮ ಜುಗಲ್​ಬಂದಿಯೊಂದಿಗೆ ರಾಹುಲ್ ಹಾಗೂ ಕೊಹ್ಲಿ ಏಷ್ಯಾಕಪ್​ನಲ್ಲಿ ಅಧಿಕ ರನ್​ಗಳ ಪಾಲುದಾರಿಕೆಯ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಇನ್ನೂ ದಾಖಲೆಗಳಿವೆ ಮುಂದೆ ನೋಡಿ.

ದಾಖಲೆಯ ಜೊತೆಯಾಟವಾಡಿದ ರಾಹುಲ್-ಕೊಹ್ಲಿ

3ನೇ ವಿಕೆಟ್​ಗೆ 194 ಎಸೆತಗಳಲ್ಲಿ ಕೊಹ್ಲಿ ಹಾಗೂ ರಾಹುಲ್ ಅಜೇಯ 233 ರನ್​ಗಳ ಜೊತೆಯಾಟವಾಡಿದರು. ಇದರೊಂದಿಗೆ ಇಂಡೋ-ಪಾಕ್ ಪಂದ್ಯದಲ್ಲಿ ಅಧಿಕ ರನ್​ಗಳ ಜೊತೆಯಾಟವಾಡಿದ ಜೋಡಿ ಎಂಬ ದಾಖಲೆ ಕೊಹ್ಲಿ ಹಾಗೂ ರಾಹುಲ್ ಪಾಲಾಯಿತು.​

  • ಕೊಹ್ಲಿ-ರಾಹುಲ್ 3ನೇ ವಿಕೆಟ್​ಗೆ ಅಜೇಯ 233 ರನ್​ಗಳ ಜೊತೆಯಾಟ, ಸೆಪ್ಟೆಂಬರ್ 11, 2023, ಆರ್​ ಪ್ರೇಮದಾಸ ಮೈದಾನ, ಕೊಲೊಂಬೊ
  • ನವಜೋತ್ ಸಿಧು-ಸಚಿನ್ ತೆಂಡೂಲ್ಕರ್ 1996ರಲ್ಲಿ 2ನೇ ವಿಕೆಟ್​ಗೆ 231 ರನ್​ಗಳ ಜೊತೆಯಾಟ, ಶಾರ್ಜಾ.
  • ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ 2018ರಲ್ಲಿ ಮೊದಲ ವಿಕೆಟ್​ಗೆ 210 ರನ್​ಗಳ ಜೊತೆಯಾಟ, ದುಬೈ.

ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ 2005ರಲ್ಲಿ 3ನೇ ವಿಕೆಟ್​ಗೆ 201 ರನ್​ಗಳ ಜೊತೆಯಾಟ, ಕೊಚ್ಚಿ.

ಏಷ್ಯಾಕಪ್​​ನಲ್ಲಿ ಅತಿದೊಡ್ಡ ಜೊತೆಯಾಟ

233 ರನ್​​ಗಳ ಪಾಲುದಾರಿಕೆ ನೀಡಿದ ರಾಹುಲ್-ಕೊಹ್ಲಿ ಏಷ್ಯಾಕಪ್ ಇತಿಹಾಸದಲ್ಲಿ ಅತ್ಯಧಿಕ ರನ್​ಗಳ ಜೊತೆಯಾಟ ನೀಡಿದ ಜೋಡಿ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.

  • ಪಾಕಿಸ್ತಾನದ ವಿರುದ್ಧ ಕೊಹ್ಲಿ ಮತ್ತು ರಾಹುಲ್​ ಅಜೇಯ 233 ರನ್ (2023,) ಜೊತೆಯಾಟವಾಡಿದೆ.
  • ಇದಕ್ಕೂ ಮುನ್ನ 2012ರಲ್ಲಿ ಭಾರತದ ವಿರುದ್ಧ ಮೊಹಮ್ಮದ್ ಹಫೀಜ್ ಮತ್ತು ನಾಸಿರ್ ಜಮ್ಶೆಡ್ 224 ರನ್​ಗಳ ಜೊತೆಯಾಟವಾಡಿದ್ದರು.
  • 2004ರಲ್ಲಿ ಹಾಂಗ್​ಕಾಂಗ್​ ವಿರುದ್ಧ ಶೊಯೇಬ್ ಮಲಿಕ್ ಮತ್ತು ಯೂನಿಸ್ ಖಾನ್ 223 ರನ್​ಗಳ ಪಾಲುದಾರಿಕೆ ಕಟ್ಟಿದ್ದರು.
  • ಇದೇ ಏಷ್ಯಾಕಪ್ ಟೂರ್ನಿಯಲ್ಲಿ ಬಾಬರ್ ಅಜಮ್ ಮತ್ತು ಇಫ್ತಿಕರ್ ಅಹ್ಮದ್ 214 ರನ್​​ಗಳ ಜೊತೆಯಾಟ ಕಟ್ಟಿದ್ದರು. ಏಷ್ಯಾಕಪ್​​ನಲ್ಲಿ ದಾಖಲಾದ ಅತಿಹೆಚ್ಚು ರನ್​ಗಳ ಜೊತೆಯಾಟಗಳಾಗಿವೆ.

3 ಮತ್ತು 4ನೇ ಕ್ರಮಾಂಕದಲ್ಲಿ ದಾಖಲೆ

ಟೀಮ್ ಇಂಡಿಯಾ ಪರ 3ನೇ ಮತ್ತು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಶತಕ ಬಾರಿಸಿದ 3ನೇ ಜೋಡಿ ಎಂಬ ದಾಖಲೆಗೂ ಕೊಹ್ಲಿ ಹಾಗೂ ರಾಹುಲ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 1999ರಲ್ಲಿ ಕೀನ್ಯಾ ವಿರುದ್ಧ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಈ ದಾಖಲೆ ಬರೆದಿತ್ತು. ಅಲ್ಲದೆ, 2009ರಲ್ಲಿ ಶ್ರೀಲಂಕಾ ವಿರುದ್ಧ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು. ಇದೀಗ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಈ ಸಾಧನೆ ಮಾಡಿದ 3ನೇ ಜೋಡಿ ಎಂಬ ದಾಖಲೆ ಬರೆದಿದೆ…

ವರದಿ. ಎಚ್ಚರಿಕೆ ಕನ್ನಡ ನ್ಯೂಸ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend