ಸಂಭ್ರಮದ ಆರ್.ಡಿ.ಪಿ.ಆರ್. ನೌಕರರ ಕ್ರೀಡೋತ್ಸವ ಉತ್ಸಾಹದಿಂದ ಪಾಲ್ಗೊಂಡ ಅಧಿಕಾರಿಗಳು, ಸಿಬ್ಬಂದಿ…!!!

Listen to this article

ಸಂಭ್ರಮದ ಆರ್.ಡಿ.ಪಿ.ಆರ್. ನೌಕರರ ಕ್ರೀಡೋತ್ಸವ
ಉತ್ಸಾಹದಿಂದ ಪಾಲ್ಗೊಂಡ ಅಧಿಕಾರಿಗಳು, ಸಿಬ್ಬಂದಿ

ನೌಕರರ ಒತ್ತಡ ನಿವಾರಣೆಗೆ ಕ್ರೀಡೆಗಳು ಸಹಕಾರಿ:ಎಂ.ಸುಂದರೇಶಬಾಬು

ಕೊಪ್ಪಳ ಡಿಸೆಂಬರ್  ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಡಿಸೆಂಬರ್ 01 ರಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಎರಡನೇ ಕ್ರೀಡೋತ್ಸವಕ್ಕೆ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಫೌಜೀಯಾ ತರನ್ನುಮ್ ಅವರು ಕ್ರಿಕೇಟ್ ಆಡುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಆರ್.ಡಿ.ಪಿ.ಆರ್ ಇಲಾಖೆಯ ನೌಕರರಿಗೆ ಮೂರು ದಿನಗಳ ಕ್ರೀಡೋತ್ಸವ ಆಯೋಜಿಸಿರುವುದು ನೌಕರರಲ್ಲಿ ಉತ್ಸಾಹ ಮೂಡಿಸಿದೆ. ಆರ್.ಡಿ.ಪಿ.ಆರ್ ಇಲಾಖೆ ಕಾರ್ಯಭಾರ ಹೆಚ್ಚಿರುತ್ತದೆ. ಆರ್.ಡಿ.ಪಿ.ಆರ್ ನೌಕರರು ನಿತ್ಯವೂ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ನೌಕರರ ಒತ್ತಡ ನಿವಾರಣೆಗಾಗಿ ಆರೋಗ್ಯದ ಹಿತಕ್ಕಾಗಿ ಇಂತಹ ಕ್ರೀಡಾಕೂಟಗಳು ಪ್ರತಿವರ್ಷ ಹಮ್ಮಿಕೊಳ್ಳುವುದು ಒಳ್ಳೆಯ ಕಾರ್ಯವಾಗಿದೆ. ಪ್ರತಿಯೊಬ್ಬರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡಾಕೂಟ, ಯೋಗಭ್ಯಾಸ ಅವಶ್ಯವಾಗಿದೆ. ಎಲ್ಲರೂ ಪ್ರತಿನಿತ್ಯ ವ್ಯಾಯಾಮ ಮಾಡಬೇಕು ಎಂದರು. ಉದ್ಯೋಗ ಖಾತರಿ ಯೋಜನೆ ಜಾರಿಯಾದ ನಂತರ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕಾಣುತ್ತಿದೆ. ಹಳ್ಳಿಗಳ ಜನರಿಗೂ ದುಡಿಯಲು ಕೆಲಸ ಸಿಗುತ್ತಿದೆ ಎಂದರು.


ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ ಅವರು ಮಾತನಾಡಿ, ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯಿಂದ ಕಚೇರಿ ಕೆಲಸದ ಹುಮ್ಮಸ್ಸು, ಆಸಕ್ತಿ ಹೆಚ್ಚುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಫೌಜಿಯಾ ತರನ್ನುಮ್ ಅವರು ಕ್ರೀಡಾಜ್ಯೋತಿ ಸ್ವೀಕರಿಸಿದರು.
ಜಿ.ಪಂ ಉಪ ಕಾರ್ಯದರ್ಶಿಗಳಾದ ಸಮೀರ್ ಮುಲ್ಲಾ, ಯೋಜನಾ ನಿರ್ದೇಶಕರಾದ ಟಿ.ಕೃಷ್ಣಮೂರ್ತಿ, ಮುಖ್ಯ ಯೋಜನಾಧಿಕಾರಿಗಳಾದ ಡಿ.ಮಂಜುನಾಥ, ಮುಖ್ಯ ಲೆಕ್ಕಾಧಿಕಾರಿಗಳಾದ ಅಮೀನ್ ಅತ್ತಾರ್, ಸಹಾಯಕ ಕಾರ್ಯದರ್ಶಿಗಳಾದ ಕೆ.ಕುಮಲಯ್ಯ, ಕೊಪ್ಪಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನೌಕರರ ಸಂಘದ ಗೌರವಾಧ್ಯಕ್ಷರಾದ ಶರಣಯ್ಯ ಸಸಿಮಠ, ಜಿಲ್ಲೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಫಕಿರಪ್ಪ ಕಟ್ಟಿಮನಿ, ಜಿಲ್ಲೆಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿವಪ್ಪ ಸುಬೇದಾರ್, ದುಂಡಪ್ಪ ತುರಾದಿ, ಸಂತೋಷ ಪಾಟೀಲ್, ಮಹಾಂತಗೌಡ ಪಾಟೀಲ್, ನರಸಪ್ಪ ಎನ್, ಚಂದ್ರಶೇಖರ ಕಂದಕೂರ, ರಾಮಣ್ಣ ದೊಡ್ಡಮನಿ, ನರೇಗಾ ಸಹಾಯಕ ನಿರ್ದೇಶಕರುಗಳು ಹಾಗೂ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರು, ವಿವಿಧ ಯೋಜನೆಗಳ ಸಂಯೋಜಕರುಗಳು, ಪಿಡಿಒ, ಕಾರ್ಯದರ್ಶಿ, ದ್ವೀತಿಯ ದರ್ಜೆ ಲೆಕ್ಕ ಸಹಾಯಕರುಗಳು, ತಾಂತ್ರಿಕ ಸಹಾಯಕರು, ಕರವಸೂಲಿಗಾರರು, ಡಿಇಒ, ಬೇರ್ ಪೂಟ್ ಟೆಕ್ನಿಷಿಯನ್ ಸೇರಿದಂತೆ ಮತ್ತಿತರರು ಹಾಜರಿದ್ದರು….

ವರದಿ. ಸಂಗೀತ ಪಾಟೀಲ್. ಕೊಪ್ಪಳ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend