ವಿಶ್ವ ಏಡ್ಸ್ ದಿನಾಚರಣೆ; ವಿಜಯನಗರ ಜಿಲ್ಲೆಯಲ್ಲಿ 4.42 ಲಕ್ಷ ಜನರಿಗೆ ಆಪ್ತ ಸಮಾಲೋಚನೆ…!!!

Listen to this article

ವಿಶ್ವ ಏಡ್ಸ್ ದಿನಾಚರಣೆ; ವಿಜಯನಗರ ಜಿಲ್ಲೆಯಲ್ಲಿ 4.42 ಲಕ್ಷ ಜನರಿಗೆ ಆಪ್ತ ಸಮಾಲೋಚನೆ
ವಿಜಯನಗರ(ಹೊಸಪೇಟೆ),ಡಿ.1 ವಿಜಯನಗರ ಜಿಲ್ಲೆಯಲ್ಲಿ 2017 ರಿಂದ ಅಕ್ಟೋಬರ್ 2022 ರವರೆಗೆ 442237 ಜನರಿಗೆ ಐ.ಸಿ.ಟಿ.ಸಿ ಕೇಂದ್ರಗಳಲ್ಲಿ ಆಪ್ತಸಮಾಲೋಚನೆ ನಡೆಸಿ ರಕ್ತ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 1502 ಜನರಿಗೆ ಹೆಚ್.ಐ.ವಿ ಸೋಂಕು ಇರುವುದು ದೃಢಪಟ್ಟಿರುತ್ತದೆ ಎಂದು ವಿಜಯನಗರ ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್ ಅವರು ತಿಳಿಸಿದರು.
ಗುರುವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ನಗರದ ರೋಟರಿ ಕ್ಲಬ್‍ನಲ್ಲಿ ಆಯೋಜಿಸಲಾದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್.ಐ.ವಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು, ಮುಂಜಾಗ್ರತ ಹಾಗೂ ಸುರಕ್ಷತ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು, ಹೆಚ್.ಐ.ವಿ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಒದಗಿಸುವುದು, ದೈನಂದಿನ ಜೀವನ ಕ್ರಮಗಳ ಕುರಿತು ತಿಳಿಸುವುದು ಹಾಗೂ ಸರ್ಕಾರದಿಂದ ಅವರಿಗೆ ದೊರೆಯುವಂತಹ ಸೌಲಭ್ಯಗಳನ್ನು ಒದಗಿಸಿ ಅವರಿಗೆ ಧೈರ್ಯವಾಗಿ ಜೀವಿಸಲು ನಾವೆಲ್ಲರೂ ಸಹಕಾರ ನೀಡಬೇಕು ಎಂದರು.
ಇ.ಐ.ಡಿ ಕೇಂದ್ರಗಳಲ್ಲಿ 2017 ರಿಂದ 2022ನೇ ಅಕ್ಟೋಬರ್‍ವರೆಗೆ 132 ಮಕ್ಕಳಿಗೆ 06 ವಾರದ ಡಿ.ಬಿ.ಎಸ್ ಪರೀಕ್ಷೆಯನ್ನು ಮಾಡಿಸಲಾಗಿದ್ದು, ಇವರಲ್ಲಿ 05 ಮಕ್ಕಳಿಗೆ ಹೆಚ್.ಐ.ವಿ ಸೋಂಕು ಇರುವುದು ಕಂಡು ಬಂದಿರುತ್ತದೆ. ಇಲ್ಲಿಯವರೆಗೆ 81 ಮಕ್ಕಳನ್ನು 18 ತಿಂಗಳ ನಂತರ ಹೆಚ್.ಐ.ವಿ ಪರೀಕ್ಷೆಗೆ ಒಳಪಡಿಸಲಾಗಿದ್ದು ಇವರಲ್ಲಿ 06 ಮಕ್ಕಳಿಗೆ ಹೆಚ್.ಐ.ವಿ ಇರುವುದು ದೃಢಪಟ್ಟಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಪ್ರಸ್ತುತ ನಗರ ಕೇಂದ್ರಗಳಲ್ಲಿ 2830 ಮಹಿಳಾ ಲೈಂಗಿಕ ಕಾರ್ಯಕರ್ತರಲ್ಲಿ 2700 ಜನರಿಗೆ ಹೆಚ್.ಐ.ವಿ ಪರೀಕ್ಷೆ ಮಾಡಿಸಿದ್ದು ಗ್ರಾಮೀಣ ಭಾಗದಲ್ಲಿ 671 ಮಹಿಳಾ ಲೈಂಗಿಕ ಕಾರ್ಯಕರ್ತರಲ್ಲಿ 671 ಜನರಿಗೆ ಹೆಚ್.ಐ.ವಿ ಪರೀಕ್ಷೆ ಮಾಡಿಸಲಾಗಿದೆ. 684 ಎಮ್‍ಎಸ್‍ಎಮ್ ಜನರನ್ನು ಹೊಂದಿರುತ್ತಾರೆ. ಇದರಲ್ಲಿ 580 ಎಮ್‍ಎಸ್‍ಎಮ್ ಜನರಿಗೆ ಹೆಚ್.ಐ.ವಿ ಪರೀಕ್ಷೆ ಮಾಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೆಚ್‍ಐವಿ ಸೋಂಕಿಗೆ ಒಳಗಾಗುವ ಹೆಚ್ಚು ಅಪಾಯದ ಅಂಚಿನಲ್ಲಿರುವ ಮತ್ತು ಸಮಾಜದಿಂದ ಉಪೇಕ್ಷಿತವಾಗಿರುವ ಲೈಂಗಿಕ ವೃತ್ತಿಯಲ್ಲಿರುವ ಮಹಿಳೆಯರು, ಸಲಿಂಗಕಾಮಿ ಪುರುಷರು, ವಲಸೆಹೋಗುವವರು, ಲೈಂಗಿಕ ಸೋಂಕಿಗೆ ಒಳಗಾಗಿರುವವರು, ಇತರರನ್ನು ಗುರುತಿಸಿ ಅವರಿಗೆ ನಿರ್ದಿಷ್ಟವಾಗಿ ಗಮನ ಹರಿಸಲಾಗುತ್ತಿದೆ.


ಈ ವರ್ಷ ಆಪಾಯದ ಆಂಚಿನಲ್ಲಿರುವ ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಕಾರ್ಯಕ್ರಮವನ್ನು ಸ್ವಯಂ ಸೇವಾ ಸಂಸ್ಥೆಗಳ ಸಹಕಾರದಿಂದ ಹಮ್ಮಿಕೊಳ್ಳಲಾಗುವುದು. ಹಾಗಿಯೇ ಜಾತ್ರೆ, ಸಂತೆ, ಸ್ವಸಹಾಯ ಸಂಘಗಳು, ಶಾಲಾ ಕಾಲೇಜುಗಳಲ್ಲಿ ವಿವಿಧ ಐ.ಇ.ಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್.ಎಸ್.ಆನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಲೀಂ, ಜಿಲ್ಲಾ ಕ್ಷಯ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಜಗದೀಶ ಪಾಟ್ನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಗೂ ವಿಮುಕ್ತಿ ಸಂಸ್ಥೆಯವರು ಸೇರಿದಂತೆ ಹಲವಾರು ಸೇವಾ ಸಂಸ್ಥೆಯವರು ಇದ್ದರು.
ವಿಶ ಏಡ್ಸ್ ದಿನಾಚರಣೆ ಅಂಗವಾಗಿ ಜಾಥಾ ಕಾರ್ಯಕ್ರಮ: ವಿಶ್ವ ಏಡ್ಸ್ ಜಾಗೃತಿ ಜಾಥವನ್ನು ನಗರಸಭೆ ಅಧ್ಯಕ್ಷೆ ಸುಂಕಮ್ಮ ಅವರು ಚಾಲನೆ ನೀಡಿದರು. ಜಾಥಾವು ಡಿ.ಎಚ್.ಒ ಕಚೇರಿಯಿಂದ ಆರಂಭಗೊಂಡು ಡಾ.ಪುನೀತ್ ರಾಜಕುಮಾರ ಸರ್ಕಲ್ ಮುಖಾಂತರ ಹಾದುಹೋಗಿ ನಗರದ ರೋಟರ್ ಕ್ಲಬ್ ಬಳಿ ಕೊನೆಗೊಂಡಿತು. ಜಾಥಾದಲ್ಲಿ ಜೆ.ಎಂ.ಎಫ್.ಸಿ ನ್ಯಾಯಧೀಶರಾದ ಕಿಷನ್ ಮಾಡಲಿಗಿ ನಗರಸಭೆ ಉಪಾಧ್ಯಕ್ಷ ಎಸ್.ಎಲ್.ಆನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಲೀಂ, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಟಿ.ಎಂ.ಎ.ಇ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ವಿಮುಕ್ತಿ ಸಂಸ್ಥೆಯವರು ಸೇರಿದಂತೆ ಹಲವಾರು ಸೇವಾ ಸಂಸ್ಥೆಯವರು ಭಾಗವಹಿಸಿದ್ದರು.

ವರದಿ. ಗಣೇಶ್. ಹೊಸಪೇಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend