ತನ್ನ ಸ್ವಾರ್ಥಕ್ಕಾಗಿ ಅಧಿಕಾರಿಗಳಿಂದ ನಮ್ಮ ಸಂಘಕ್ಕೆ ಕಪ್ಪು ಚುಕ್ಕೆ ಮಾಡಿದ್ದೆ ಕಣಿವಳ್ಳಿ ಮಂಜಪ್ಪ -ತಲವಾಗಲು ಚಂದ್ರಪ್ಪ…!!!

Listen to this article

 

ತನ್ನ ಸ್ವಾರ್ಥಕ್ಕಾಗಿ ಅಧಿಕಾರಿಗಳಿಂದ ನಮ್ಮ ಸಂಘಕ್ಕೆ ಕಪ್ಪು ಚುಕ್ಕೆ ಮಾಡಿದ್ದೆ ಕಣಿವಳ್ಳಿ ಮಂಜಪ್ಪ -ತಲವಾಗಲು ಚಂದ್ರಪ್ಪ

ಹರಪನಹಳ್ಳಿ : ಕಣಿವಿಹಳ್ಳಿ ಮಂಜುನಾಥ್ ಅವರೇ ನೀವು ನೂರಾರು ಸಂಘಗಳನ್ನ ಸೃಷ್ಟಿ ಮಾಡಬಹುದು ಆದರೆ ಒಬ್ಬ ನಿಂಗರಾಜ್ ಅಂತವರನ್ನ ಸೃಷ್ಟಿ ಮಾಡೋಕಗಲ್ಲ ಎಂದು ದಲಿತ ವಿದ್ಯಾರ್ಥಿಗಳ ಬೀಚಿ ಅಭಿಮಾನಿ ಬಳಗದ ತಾಲೂಕುಅಧ್ಯಕ್ಷರಾದ ಶೃಂಗಾರತೋಟ ನಿಂಗರಾಜ್ ಸುದ್ದಿನಿಂಗರಾಜ್ ಕಣಿವಿಹಳ್ಳಿ ಮಂಜುನಾಥ್ ಅವರಿಗೆ ಸವಾಲು ಹಾಕಿದರು

ಪಟ್ಟಣದ ಪ್ರವಾಸಿ ಮಂದಿರದರಲ್ಲಿ ಅವರು ಸುದ್ದಿ ಗೋಷ್ಠಿ ನೆಡಿಸಿ ಮಾತನಾಡಿದ ಅವರು ಕಣಿವಿಹಳ್ಳಿ ಮಂಜುನಾಥ್‍ರವರ ಪತ್ರಿಕೆ ಹೇಳಿಕೆಯಂತೆ ದಲಿತ ವಿದ್ಯಾರ್ಥಿಗಳ ಬೀಚಿ ಅಭಿಮಾನಿ ಬಳಗ(ರಿ) ನಾಲ್ಕು ವರ್ಷಗಳಿಂದ ಸಂಘದ ಹೆಸರಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡಿ ರಾಜಕೀಯ ವ್ಯಕ್ತಿಗಳಿಂದ ಮತ್ತು ಅಧಿಕಾರಿಗಳಿಂದ ಕಾರ್ಯಕ್ರಮಗಳಿಗೆ ಸಂಘದ ಹೆಸರು ಹೇಳಿ ಹಣ ವಸೂಲಾತಿ ಮಾಡಿ ಈಗ ನಾವು ಉಚ್ಚಾಟನೆ ಮಾಡಿರೋದನ್ನ ತಿಳಿದು ಬೀಚಿ ಸಂಘ ನಿಷ್ಕ್ರಿಯಗೊಂಡಿದೆ ಎಂದು ಹೇಳುವುದು ಸಮಾಜಘಾತಕರ ಹೇಳಿಕೆಯಾಗಿದೆ ಇದಕ್ಕೆಲ್ಲಾ ನಮ್ಮ ಸಂಘದವರು ಹೆದರುವ ಸ್ಥಿತಿಯೇ ಇಲ್ಲ ನಮಗೂ ಕಾನೂನಿನ ಅರಿವಿದೆ.. ನಮ್ಮ ಸಂಘದ ಹೆಸರಿನ ಲೆಟರ್ ಪ್ಯಾಡನಲ್ಲಿ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡಿ ಬ್ಲಾಕ್ ಮೇಲ್ ಮಾಡಿರುವುದು ಮತ್ತು ಸಂಘವನ್ನು ದುರುಪಯೋಗಪಡಿಸಿಕೊಂಡ ಕಾರಣ ಸಂಘದ ಸರ್ವ ಪದಾಧಿಕಾರಿಗಳು ಒಪ್ಪಿಗೆಯ ಮೇರೆಗೆ ಇವರನ್ನ ಸಂಘದಿಂದ ಉಚ್ಚಾಟನೆ ಮಾಡಲಾಗಿದೆ. ತೆಗೆದು ಹಾಕಿದ ಕಾರಣ ಮತಿಭ್ರಮಣೆ ಹೊಂದಿದ ವ್ಯಕ್ತಿಯ ರೀತಿಯಲ್ಲಿ ಹೇಳಿಕೆ ನೀಡುತಿದ್ದಾರೆ.

ಸಂಘ ನೋಂದಣಿ ಹೊಂದಿದ್ದು,
ಯಾವುದೇ ದಾಖಲೆಗಳಿಲ್ಲ ಎಂಬ ಹೇಳಿಕೆಯೇ ಉರುಳಿಲ್ಲ ಆಗಾಗಿ ಇವರ ಬುದ್ಧಿ ಮೊಟ್ಟವನ್ನ ತಿಳಿಸುತ್ತದೆ.
ನಿಮ್ಮ ಹೊಡೆದು ಹಾಳುವ ನೀತಿಯಿಂದ ಸಂಘದ ಸದಸ್ಯರ ಮದ್ಯೆ ಭಿನ್ನಾಭಿಪ್ರಾಯವನ್ನು ಸೃಷ್ಟಿಸಿ ಅವರ ಜೀವನವನ್ನು ನಿಮ್ಮ ಹಿತದೃಷ್ಟಿಯಿಗೆ ಹಾಳು ಮಾಡಿದ್ದೀರಿ. ಮುಂದಿನ ದಿನಮಾನದಲ್ಲಿ ಈ ಸಂಘವನ್ನ ನವೀಕರಣ ಮಾಡಿಕೊಂಡು ಸಾಮಾಜಿಕ ಸಾಂಸ್ಕೃತಿಕ ಸೇವೆಗಳನ್ನ ಮಾಡುತ್ತೇವೆ ಮತ್ತು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆಯ ಅನ್ವಯ ಸಂಘವನ್ನ ಮುನ್ನಡೆಸಿಕೊಂಡು ಹೋಗುತ್ತೇವೆ ಎಂದು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು

ನಿನ್ನೆ ತಾನೆ ಹುಟ್ಟು ಹಾಕಿರುವ ದಲಿತ ಯುವಕರ ಹರಿಪುರ ಬೀಚಿ ಅಭಿಮಾನಿ ಬಳಗ ಮುಂದಿನ ದಿನಮಾನದಲ್ಲಿ ಎಂತಹ ಮಹಾತ್ಕಾರ್ಯದ ಕಾರ್ಯಕ್ರಮಗಳನ್ನು ಮಾಡುವ ಸಮಯದಲ್ಲಿ ಅಧಿಕಾರಿಗಳಿಂದ ಯಾವ ಕಾರ್ಯಗಳಿಗೆ ಮಹತ್ವವನ್ನು ಕೊಡುತ್ತೀರೆಂದು ನಮ್ಮ ಸಂಘದ ಎಲ್ಲಾ ಪದಾಧಿಕಾರಿಗಳು ತಿಳಿದಿದ್ದೇವೆ. ನಿಮ್ಮ ಹೇಳಿಕೆ ನಮಗೆ ಹಾಸ್ಯಾಸ್ಪದ ವಾಗಿದೆ… ಕಣಿವಿಹಳ್ಳಿ ಮಂಜುನಾಥರವರೆ ಸಾಧ್ಯವಾದರೆ ಸಮಾಜದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಅವರನ್ನ ಅಡ್ಡ ದಾರಿಗೆ ತಳ್ಳುವಂತ ಮೂರ್ಖ ಪ್ರಯತ್ನವನ್ನು ಮಾಡಬೇಡಿ.ಎಂದು ಎಚ್ಚರಿಸಿದರು

ಪ್ರಧಾನ ಕಾರ್ಯದರ್ಶಿ ತಲವಾಗಲು ಬಿ ಚಂದ್ರಪ್ಪ ಮಾತನಾಡಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಾಡಿದಾಗ ಸಂಘ ನಿಸ್ಕ್ರೀಯವಾಗಿರಲಿಲ್ಲವೇ? 2018 ನವೆಂಬರ್ ತಿಂಗಳಲ್ಲಿ ಬೀಚಿ ಕಾರ್ಯಕ್ರಮ ಮಾಡಿದಾಗ ಸಂಘ ನಿಸ್ಕ್ರೀಯಗೊಂಡಿಲ್ಲವೇ?ಇಎಂದು ಪ್ರಶ್ನಿಸಿದರು
ಸಂಘದ ವಿರೋಧ ಕಾರ್ಯ ಚಟುವಟಿಕೆ ಮಾಡುತ್ತಿದ್ದೆ ಕಣಿವಿಹಳ್ಳಿ ಮಂಜಪ್ಪ ಎಂದು ಕರವಾಗಿ ಹೇಳಿದರು

ನಮ್ಮ ಸಂಘವನ್ನ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡು ಅಧಿಕಾರಿಗಳಿಂದ ನಮ್ಮ ಸಂಘಕ್ಕೆ ಕಪ್ಪು ಚುಕ್ಕೆ ತಂದಿದ್ದೆ ಕಣಿವಳ್ಳಿ ಮಂಜಪ್ಪ ಎಂದು ಬೇಸರ ವ್ಯಕ್ತ ಪಡಿಸಿದರು

ಉಪಾಧ್ಯಕ್ಷ ಪ್ರಶಾಂತ್ ಮಾತನಾಡಿ ಕಾಲೇಜ್ ಗಳಿಗೆ ಹಾಗೂ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ಸೀಟು ಕೊಡಿಸುತ್ತೇನೆ ಎಂದು ಬಡ ಹಾಗೂ ಅಮಾಯಕ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿದ್ದು ಇದೇ ಕಣಿವಿಹಳ್ಳಿ ಮಂಜಪ್ಪ ವಿವಿಧ ಇಲಾಖೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಸಣ್ಣ ಪುಟ್ಟ ಉದ್ಯೋಗ ಕೊಡಿಸುತ್ತೇನೆ ಎಂದು ಮುಗ್ಧ ನಿರೋದ್ಯೋಗಳಿಂದ ಹಣ ವಸೂಲಿ ಮಾಡುತ್ತಿದ್ದು ಆತನ ವ್ಯಕ್ತಿತ್ವ ತೋರಿಸುತ್ತದೆ ಎಂದು ಹೇಳಿದರು

ಈ ಸಂದರ್ಭದಲ್ಲಿ ನಿರ್ದೇಶಕರಾದ ಮಾರುತಿ. ಕೆ ಹಲವಾಗಲು,ನಿಚ್ಚವ್ವನಹಳ್ಳಿ ರವಿ,ಮಲ್ಲಿಕಾರ್ಜುನ ಮೈದೂರು. ಬಿ ಅಂಜಿನಪ್ಪ,ದುರುಗೇಶ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು..

ವರದಿ. ಪ್ರತಾಪ್. ಸಿ. ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend