ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದಲ್ಲಿಂದು ನಡೆದ ಬಗರ್ ಹುಕ್ಕುಂ ಸಕ್ರಮಿಕರಣ ಸಮಿತಿ ಸಭೆ…!!

Listen to this article

ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದಲ್ಲಿಂದು ನಡೆದ ಬಗರ್ ಹುಕ್ಕುಂ ಸಕ್ರಮಿಕರಣ ಸಮಿತಿ ಸಭೆ.

ರೈತರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು:
ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಕೇವಲ ಮೂರು ಗ್ರಾಮ ಪಂಚಾಯಿತಿ ರೈತರಿಗೆ ವಿಮೆ ಕಂಪನಿಯವರು ವಿಮೆ ಹಣ ಮಂಜೂರು ಮಾಡಿದ್ದು, ತಾಲ್ಲೂಕಿನ ಉಳಿದ 13 ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಯಾವ ಬೆಳೆ ವಿಮೆ ಮಂಜೂರು ಮಾಡದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ರೈತ ಮುಖಂಡ ಬೆಳಗಲ್ ಈಶ್ವರಯ್ಯ ಆರೋಪಿಸಿದರು. ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಕಳೆದ ವರ್ಷ ರೈತ ಬಿತ್ತಿದ ಬೀಜ ಸಿಗದೇ ಶೇಂಗಾ ಬೆಳೆ ಸಂಪೂರ್ಣ ನಷ್ಟವಾಗಿದೆ ಎಂದರು. ತಾಲ್ಲೂಕಿನಾದ್ಯಂತ ಉತ್ತಮ ಬೆಳೆಯಾಗದಿದ್ದರೂ, ಉತ್ತಮ ಬೆಳೆಯಾಗಿದೆ ಎಂದು ವರದಿ ನೀಡಿ ಕೃಷಿ ಅಧಿಕಾರಿಗಳು ರೈತರಿಗೆ ಅನ್ಯಾಯವೆಸಗುತ್ತಿದ್ದಾರೆ. ಈ ಸಂಬಂಧ ಕೃಷಿ ಅಧಿಕಾರಿಗಳು ವಿಮಾ ಕಂಪನಿಯ ಮೇಲೆ, ವಿಮಾ ಕಂಪನಿಯವರು ಕೃಷಿ ಅಧಿಕಾರಿಗಳ ಮೇಲೆ ನೆಪ ಹೇಳತ್ತಾ ಕಾಲಹರಣ ಮಾಡುತ್ತಿದ್ದಾರೆ. ಆದ್ದರಿಂದ ಇನ್ನು ಮುಂದಾದರೂ 13 ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಬೆಳೆ ವಿಮೆಯನ್ನು ಮಂಜೂರು ಮಾಡಬೇಕೆಂದು ಒತ್ತಾ ಯಿಸಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಿದರು.

ಸಿ.ಪಿ.ಐ.ಕಾರ್ಯದರ್ಶಿ ಜಾಫರ್ ಷರೀಫ್ . ಮಾತನಾಡಿದರು:
ತಾಲ್ಲೂಕಿನ ಮುತ್ತಿಗಾರಹಳ್ಳಿ ಮತ್ತು ಮಾರಮ್ಮನಹಳ್ಳಿ ಗೋಶಾಲೆಯಲ್ಲಿ ದುಡಿದ ಕೂಲಿ ಕಾರ್ಮಿಕರಿಗೆ ಇದುವರೆಗೆ ಜಿಲ್ಲಾ ಡಳಿತ ಕೂಲಿ ಹಣ ಕೊಟ್ಟಿರುವುದಿಲ್ಲ. ಮೂರು ವರ್ಷಗಳಿಂದ ಪ್ರತಿಭಟನೆಯ ಮೂಲಕ ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಅಲೆದಾಡಿ ಸಾಕಾಗಿದೆ ಎಂದು ಹೇಳಿದರು.

ಸಚಿವರಾದ ಸನ್ಮಾನ್ಯ ಶ್ರೀ ಬಿ ಶ್ರೀ ರಾಮುಲು ರವರು ಮಾತನಾಡಿದರು:
ಸಭೆಯ ನಂತರ ಮಾತನಾಡಿದ ಸಚಿವರಾದ ಬಿ.ಶ್ರೀರಾಮುಲು ಅವರು ಸರ್ಕಾರವೂ ಕೋವಿಡ್ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಿದ್ದು, ಮೂರನೇ ಅಲೆಯನ್ನು ಕಂಟ್ರೋಲ್ ಮಾಡಲು ಸರ್ಕಾರದ ಮಟ್ಟದಲ್ಲಿ ಈಗಾಗಲೇ ಎಲ್ಲಾ ಸಿದ್ದತೆ ನಡೆದಿದೆ. ಜನರು ಅವಶ್ಯಕತೆ ಇದ್ದಲ್ಲಿ ಮನೆಯಲ್ಲಿ ಮಾತ್ರ ಮನೆಯಿಂದ ಹೊರ ಬರಬೇಕು ಮುಂದಿನ ಎಲ್ಲಾ ಪರಿಸ್ಥಿತಿಗಳನ್ನು ಎದುರಿಸಲು ಸರ್ಕಾರವೂ ಸಿದ್ದವಿದೆ.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬಗರ್ ಹುಕ್ಕುಂ ಸಾಗುವಳಿದಾರಿಗೆ ಸರ್ಕಾರದ ಮಾನದಂಡಗಳಂತೆ ಅರ್ಹ ಫಲಾನುಭವಿಗಳಿಗೆ ಭೂಮಿ ಹಕ್ಕು ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ತಾಲೂಕಿನಲ್ಲಿ ವಿಮೆ ಹಣದ ಕುರಿತು ನಡಿದಿರುವ ತಾರತಮ್ಯ ಕುರಿತು ರೈತ ಸಂಘದವರ ಜೊತೆಗೆ ಮಾತನಾಡಿ ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಬೆಳೆ ವಿಮೆ ಕುರಿತಾದ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ. ಈಗ ಮತ್ತೊಮ್ಮೆ ಆದಷ್ಟು ಶೀಘ್ರದಲ್ಲಿ ವಿಮೆ ಕಂಪನಿ ಅಧಿಕಾರಿಗಳ ಜೊತೆಗೆ ಮಾತನಾಡಿ ಸಮಸ್ಯಯನ್ನು ಇತ್ಯಾರ್ಥ ಪಡಿಸುವೆ ಯಾವುದೇ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು. ತುಂಗಭದ್ರಾ ಹಿಂನ್ನೀರು ಕಾಮಗಾರಿ ಬಹುತೇಕ ಮುಗಿದಿದ್ದು ಆದಷ್ಟು ಶೀಘ್ರದಲ್ಲೇ ತಾಲೂಕಿಗೆ ಈ ಯೋಜನೆಯಿಂದ ಕುಡಿಯುವ ನೀರು ಸಿಗಲಿದೆ ಎಂದರು.

ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಚಂದ್ರಯ್ಯ, ಬಗರ್ ಹುಕುಂ ಸಮಿತಿ ಸದಸ್ಯರಾದ ಶಾರದಮ್ಮ, ಶಂಕ್ರಣ್ಯ, ಪರಮೇಶ್ವರಪ್ಪ, ಚಳ್ಳಕೆರೆ ತಹಸೀಲ್ದಾರ್ ಮಲ್ಲಿಕಾರ್ಜುನ, ಮೊಳಕಾಲ್ಮುರು ತಹಸೀಲ್ದಾರ್‌ ಸುರೇಶ ಕುಮಾರ್, ತಾಪಂ ಈ.ಒ. ಜಾನಕೀರಾಂ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ರೈತರಾದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮರಹಳ್ಳಿ ರವಿ, ಕೋನಸಾಗರ ಮಂಜು ನಾಥ್, ಕನಕ ಶಿವಮೂರ್ತಿ, ಡಿ.ಬಿ.ಕೃಷ್ಣ ಮೂರ್ತಿ, ಡಿ.ಪೆನ್ನಯ್ಯ, ಪ್ರಭಾಕರ, ಮಂಜುನಾಥ, ಕುರಿ ಮುತ್ತಯ್ಯ, ಇನ್ನು ಮುಂತಾದ ರೈತರು ಉಪಸ್ಥಿತರಿದ್ದರು..

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend