ಕೋವಿಡ್ ಕೇರ್ ಸೆಂಟರ್‌ ತೆರೆದು, ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಬೇಕು: ಸಂಸದ ಎ.ನಾರಾಯಣ ಸ್ವಾಮಿ ತಾಕೀತು.!

Listen to this article

ಚಿತ್ರದುರ್ಗ: ಮೊಳಕಾಲ್ಮುರು/ ಸಂಸದ ಎ
ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ರಾಂಪುರದಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ.. ಕೊರೋನಾ ಸೋಂಕು ನಿಯಂತ್ರಿಸಲು ಸೋಂಕಿತರನ್ನು ಹೋಂ ಐಸೊಲೇಶನ್‌ಗೆ ಒಳಪಡಿಸುವುದನ್ನು ಬದಿಗೊತ್ತಿ ಪ್ರತಿ ಗ್ರಾಮ ಪಂಚಾಯಿತಿ ವಾರುಮೈ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆದು, ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಬೇಕೆಂದು ಸಂಸದ ಎ.ನಾರಾಯಣ ಸ್ವಾಮಿ ತಾಕೀತು ಮಾಡಿದ್ದಾರೆ. ತಾಲೂಕಿನ ರಾಂಪುರ ಗ್ರಾಮದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ಜನರು ಕೊರೋನಾ ಬರುವ ಭೀತಿಯಿಂದಾಗಿ ಜ್ವರ ಲಕ್ಷಣಗಳು ಇದ್ದರೂ, ಸ್ಥಳೀಯ ಆಸ್ಪತ್ರೆಗೆ ತೆರಳದೆ ಆರ್‌ಎಂಪಿ ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆನ್ನುವ ಮಾಹಿತಿ ಇದೆ. ಅಧಿಕಾರಿಗಳು ಈ ಕುರಿತು ಗಮನಹರಿಸಬೇಕು. ಹಳ್ಳಿಗಳಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸಲು ಸೋಂಕಿತರನು ಹೊಂ ಐಸೊಲೇಶನ್‌ಗೆ ಒಳಪಡಿಸು ವುದನ್ನು ತಡೆಗಟ್ಟಬೇಕು. ಆಯಾ ಗ್ರಾಪಂವಾರು ಮೈಕ್ರೋ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆದು ಸೂಕ್ತ ಚಿಕಿತ್ಸೆ ಕಲ್ಪಿಸಬೇಕು ಎಂದರು. ಜ್ವರ ಲಕ್ಷಣಗಳು ಇರುವಂತ ಕೆಲವು ಗ್ರಾಮಗಳಲ್ಲಿ ಕೊರೋನಾ ಭೀತಿಗೆ ಒಳಗಾಗಿ ಜನ ದೇವರ ಮೊರೆ ಹೋಗುತ್ತಿರುವ ಮಾಹಿತಿ ಬರುತ್ತಿದೆ.

ಇದನ್ನು ತಡೆಗಟ್ಟಲುಸ್ಥಳೀಯವಾಗಿಜನರಿಗೆಅರಿವನ್ನು ಮೂಡಿಸಿ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಟಿ.ಸುರೇಶ ಕುಮಾರ್ ಹೇಳಿದರು. ರಾಂಪುರ ಸುತ್ತಮುತ್ತಲಿನ ಅನೇಕಜನನಿತ್ಯ ಬಳ್ಳಾರಿಗೆ ಹೋಗಿ ಬರುತ್ತಾರೆ. ಈ ಭಾಗದಲ್ಲಿ ಟೆಸ್ಟಿಂಗ್ ಮತ್ತು ಟ್ರೇಸಿಂಗ್‌ ಕಡ್ಡಾಯವಾಗಬೇಕು. ರಾಂಪುರ ಸಾರ್ವಜನಿಕ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಯನ್ನಾಗಿ ಮಾಡಬೇಕೆಂದು ಜಿ.ಪಂ ಮಾಜಿ ಸದಸ್ಯ ಎಚ್ .ಟಿ. ನಾಗರೆಡ್ಡಿ ಹೇಳಿದಾಗ ಸಂಸದ ನಾರಾಯಣಸ್ವಾಮಿ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡುವಂತೆ ಸೂಚನೆ ನೀಡಿದಾಗ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಸ್ಥಳದಲ್ಲೇ ರಾಂಪುರ ಆಸ್ಪತ್ರೆ ಕೋವಿಡ್ ಆಸ್ಪತ್ರೆಯನ್ನಾಗಿಸಲು ಆದೇಶ ನೀಡಿದರು. ಇದೇವೇಳೆ ನಾಗಸಮುದ್ರ, ತಳವಾರಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಜಿಪಂ ಸಿಇಒ ನಂದಿನಿದೇವಿ, ಎಸ್ಟಿರಾಧಿಕಾ, ಡಿಎಚ್ ಓಪಾಲಕ್ಷ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸೀ ರಂಗನಾಥ, ತಹಸೀಲ್ದಾರ್ ಸುರೇಶಕುಮಾರ್, ಇಒ ಜಾನಕೀರಾಂ, ಟಿಎಚ್‌ಒ ಡಾ.ಸುಧಾ ಮತ್ತಿತರರಿದ್ದರು ಉಪಸ್ಥಿತರಿದ್ದರು..

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend