ವಿವೇಕನಂದ ಸಮಾಜ ಸೇವಾ ಸಂಸ್ಥೆ ವತಿಯಿಂದ ಚಳ್ಳಕೆರೆ ಆರಕ್ಷಕ ಠಾಣಾ ಸಿಬ್ಬಂದಿಗೆ ಸ್ಟೀಮರ್ಸ್ ಗಳ ವಿತರಣೆ…!!!

Listen to this article

ಇಂದು ಮತ್ಸಮುದ್ರ ಗ್ರಾಮದ ಸ್ವಾಮಿ ವಿವೇಕನಂದ ಸಮಾಜ ಸೇವಾ ಸಂಸ್ಥೆ ವತಿಯಿಂದ ಚಳ್ಳಕೆರೆ ಆರಕ್ಷಕ ಠಾಣಾ ಸಿಬ್ಬಂದಿಗೆ ಸ್ಟೀಮರ್ಸ್ ಗಳ ವಿತರಣೆ

ಕೊರೋನಾ ಮಹಾಮಾರಿಗೆ,ನಾವೆಲ್ಲರೂ ತತ್ತರಿಸಿ ಹೋಗಿದ್ದೀವಿ. ಇಂತಹ ಸಂದರ್ಭದಲ್ಲಿ
ವೈದ್ಯರು ,ನರ್ಸಗಳು,ಪೌರಕಾರ್ಮಿಕರು, ಪೊಲೀಸರು ಇಲಾಖೆ ,ಕೆಲವು ಸಂಘ ಸಂಸ್ಥೆಯವರು, ತಮ್ಮ ಪ್ರಾಣವನ್ನೂ ಲೆಕ್ಕಿಸದೇ, ಕೋರೋನಾ ರೋಗದ ವಿರುದ್ಧ ಹೋರಾಡುತ್ತಿರುವುದು ಶ್ಲೋಘನಿಯ ಕೆಲಸವಾಗಿದೆ.
ಇಂತಹ ಸಂದರ್ಭದಲ್ಲಿ ವಾರಿಯರ್ಸ್ ಗಳಲ್ಲಿ,ಆರಕ್ಷಕ ಸಿಬ್ಬಂದಿ ಒಂದು ಹೆಜ್ಜೆ ಮುಂದೆಯೇ ಎಂದು ಹೇಳಬಹುದು. ಅವರ ಸುರಕ್ಷತೆ ಬಗ್ಗೆ ಎಚ್ಚೆತ್ತ ಹೈಕೋರ್ಟ ವಕೀಲರಾದ ಸುಸೀಪಮ್ಮ.ಎಂ. ಮೂಲತಹ ಬೆಂಗಳೂರಿನ ಕೆಂಗೇರಿಯವರು ಅದ ಇವರು ಸಮಾಜಸೇವಕರು ವೃತ್ತಿಯ ಜೊತೆಯಲ್ಲಿ ಎಷ್ಷೋ ಬಡಮಕ್ಕಳಿಗೆ ಅನಾಥಶ್ರಮಗಳಿಗೆ ಇವರ ಸೇವೆ ಅಪಾರ ಎಂದು ಹೇಳಬಹುದು.

ಇಂತಹ ಸಮಾಜಮುಖಿ ಚಿಂತನೆಯುಳ್ಳರು ನಮ್ಮ ಸಮಾಜಕ್ಕೆ ತುಂಬಾ ಅವಶ್ಯಕ ಹಾಗಾಗಿ ಇವರ ನೆರವಿನೊಂದಿಗೆ ಈ ದಿನ ಚಳ್ಳಕೆರೆ ನಗರ ಆರಕ್ಷಕ ಠಾಣಾ ಸಿಬ್ಬಂದಿಗೆ ಇಂದು ಸ್ವಾಮಿ ವಿವೇಕನಂದ ಸಮಾಜ ಸೇವಾ ಸಂಸ್ಥೆ ಯ ಮೂಲಕ ಆರಕ್ಷಕ ಸಿಬ್ಬಂದಿಗೆ ಸ್ಟೀಮರ್ಸ್ ಗಳು ನೀಡಿ, ಕೊರೋನಾ ವಿರುದ್ಧ ಯುದ್ಧ ಮಾಡಲು,ನಾವು ಹೇಗೆ ಸಜ್ಜರಾಗಬೇಕೆಂದು,ಪ್ರತಿ ನಿತ್ಯ ಕನಿಷ್ಠ ಮೂರು ಬಾರಿ,ಸ್ಟೀಮ್ ತಗೆದುಕೊಳ್ಳಬೇಕು,ಮಾಸ್ಕ್ ಕಡ್ಡಾಯವಾಗಿ,ಧರಿಸಬೇಕು ಹಾಗೂ ಒಂದು ವೇಳೆ ಕೊರೋನಾ ಪಾಸಿಟಿವ್ ಬಂದರೂ,ಧೃತಿ ಕೆಡದೆ, ಧೈರ್ಯದಿಂದ,ಔಷಧಿಗಳನ್ನು ತಗೆದುಕೊಂಡು, ಹುಷಾರಾಗಬಹುದು ಎಂದು,ಆತ್ಮಸ್ಥೈರ್ಯ ಎದುರಿಸಬೇಕಿದೆ ಎಂದು ತಿಳಿಸಿದರು …..ಈ ಸಂದರ್ಭದಲ್ಲಿ ಸಿ.ಪಿ.ಐ.ಸರ್ ಎ.ಜೆ.ತಿಪ್ಪೇಸ್ವಾಮಿ ,ಪಿ.ಎಸ್.ಐ.ಮಂಜುನಾಥ ಅರ್ಜುನ್ ಲಿಂಗಾರೆಡ್ಡಿ , ಸಂಸ್ಥೆಯ ಅಧ್ಯಕ್ಷರಾದ ಚಲ್ಮೇಶ್ ರಾಘವೇಂದ್ರ ,ಹನುಮಂತರಾಯ, ಮಂಜುನಾಥ ಜೋಷಿ ಮಂಜುನಾಥ ,ಸಿ ಪರಮೇಶ್ .ರವಿ(ಎ ಬಿ ವಿ ಪಿ) ವಿರೇಶ್ ಕಾಟಪ್ಪನಹಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು..

ವರದಿ. ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend