ನೆರೆ ಸಂತ್ರಸ್ತರ ಆಕ್ರೋಶ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ…!!!

Listen to this article

ನೆರೆ ಸಂತ್ರಸ್ತರ ಆಕ್ರೋಶ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಸಮೀಪದ ಶಿರಗೂರ ಗ್ರಾಮದಲ್ಲಿ ನೆರೆ ಸಂತ್ರಸ್ತರು ತಮಗೆ ಸರಿಯಾದ ಪರಿಹಾರ ಸಿಕ್ಕಿಲ್ಲ ಎಂದು ಪ್ರತಿಭಟನೆ ನಡೆಸಿ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷ ವಿನಯ ಬಿದರಹಳ್ಳಿ ರಾಯಭಾಗ ತಹಸಿಲ್ದಾರ ಕಾರ್ಯನಿರ್ವಾಹಕ ಅಭಿಯಂತರರು ಶಿರಗೂರ ಗ್ರಾಮದ ನೆರೆ ಸಂತ್ರಸ್ತರಿಗೆ ಸಿಗಬೇಕಾದ ಪರಿಹಾರದಲ್ಲಿ ತಾರತಮ್ಯ ಮಾಡುವ ಮೂಲಕ ಸರ್ಕಾರಕ್ಕೆ ಸುಳ್ಳು ಮಾಹಿತಿ ಸಲ್ಲಿಸಿದ್ದು ಇದರಿಂದ ನೂರಾರು ಕುಟುಂಬಗಳು ಬೀದಿಗೆ ಬಂದಿವೆ. ಸ್ಥಳೀಯ ನಿವಾಸಿಗಳ ಮನೆಗಳು ಬಿದ್ದು ಹಾಳಾಗಿದ್ದರೂ ಸಹ, ಅದನ್ನು ಪರಿಶೀಲನೆ ವೇಳೆ ದಾಖಲಿಸದೆ, ಸುಳ್ಳು ಮಾಹಿತಿಯನ್ನು ಸೃಷ್ಟಿಸಿ ಸರಕಾರಕ್ಕೆ ಸಲ್ಲಿಸಿ ಇಲ್ಲಿಯ ಜನರಿಗೆ ವಂಚನೆ ಮಾಡಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಸೂಕ್ತ ಕ್ರಮ ಜರುಗಿಸುವ ರೊಂದಿಗೆ ಜನರಿಗೆ ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಗ್ರಾಮದ ದಲಿತ ಕೇರಿಯಿಂದ ಪ್ರಾರಂಭವಾದ ಪ್ರತಿಭಟನಾ ಪಾದಯಾತ್ರೆಯು ಗ್ರಾಮ ಪಂಚಾಯತಿ ತಲುಪಿದ ಬಳಿಕ ಸ್ಥಳೀಯ ಶಾಸಕರ ವಿರುದ್ಧ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಹಾರ ನೀಡುವವರಿಗೆ ಬೀಗ ತೆಗೆಯುವುದಿಲ್ಲ ಎಂದು ಹಠ ಹಿಡಿದು ಪಂಚಾಯತ ಮುಂದೆ ಧರಣಿ ಹೂಡಿದರು. ಸ್ಥಳಕ್ಕೆ ಆಗಮಿಸಿದ ಕುಡಚಿ ಪಿಎಸ್ಐ ಶಿವರಾಜ್ ಧರಿಗೋಣ ಹಾಗೂ ಕುಡಚಿ ಉಪತಹಸೀಲ್ದಾರ್ ಬಿ ಎಸ್ ದಾನಿಹಾಳ ಅವರು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು ಸಹ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡಲು ವಿಳಂಬ ಖಂಡಿಸಿ ಗ್ರಾಮ ಪಂಚಾಯತಗೆ ಬೀಗ ಹಾಕಿ ಪ್ರತಿಭಟನೆ.

ಹೌದು ರಾಯಬಾಗ ತಾಲೂಕಿನ ಶಿರಗೂರ ಗ್ರಾಮದ ಎಸ್ಸಿ ಕಾಲೊನಿ ಹಾಗೂ ಇತರೆ ಪ್ರದೇಶಗಳಲ್ಲಿ ಕೃಷ್ಣಾ ನದಿ ಪ್ರವಾಹದಿಂದ 2019 ಹಾಗೂ 2021ರಲ್ಲಿ ಸುಮಾರು 150ಕ್ಕಿಂತ ಹೆಚ್ಚು ಮನೆಗಳು ಸಂಪೂರ್ಣ ಶಿಥಿಲಗೊಂಡಿವೆ ಈ ಬಗ್ಗೆ ಉದ್ದೇಶ ಪೂರ್ವಕವಾಗಿ ಪಿಡಿಓ, ತಹಶೀಲ್ದಾರ ಹಾಗೂ ಲೋಕೋಪಯೋಗಿ ಇಲಾಖೆಯ ಇಂಜಿನಿಯರರು ಸರ್ಕಾರಕ್ಕೆ ತಪ್ಪು ಮಾಹಿತಿ ಒದಗಿಸಿ ಸಂತೃಸ್ತರಿಗೆ ಪರಿಹಾರ ನೀಡದೆ ಇರುವುದರಿಂದ ಸಂತೃಸ್ತ ಕುಟುಂಬಗಳು ಬೀದಿಗೆ ಬಂದಿವೆ. ಪ್ರವಾಹದಿಂದ ಮನೆಗಳು ಸಂಪೂರ್ಣ ಶಿಥಿಲಗೊಂಡು ಎರಡು ವರ್ಷಗಳು ಕಳೆದರು ಇಲ್ಲಿಯವರೆಗೆ ಅಧಿಕಾರಿಗಳು ಪರಿಹಾರ ದೊರೆಯುತ್ತದೆ ಎಂದು ಸುಳ್ಳು ಭರವಸೆ ನೀಡುತ್ತಿದ್ದಾರೆ ಇದರಿಂದ ಸಂತೃಸ್ತ ಕುಟುಂಬಗಳು ಇತ್ತ ಮನೆ ಇಲ್ಲದೆ ಕಂಡ ಕಂಡ ಬೀದಿ ಬದಿ, ಸಮುದಾಯ ಭವನಗಳಲ್ಲಿ ವಾಸಮಾಡುವ ಅನಿವಾರ್ಯತೆ ಒದಗಿಬಂದಿದೆ.

ಈ ಬಗ್ಗೆ ಕಳೆದ ತಿಂಗಳ ಸಂತೃಸ್ತರು ತಹಶೀಲ್ದಾರ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಮನೆ ಕಳೆದುಕೊಂಡ ಸಂತೃಸ್ತರ ಬಗ್ಗೆ ಪರೀಶಿಲನೆ ಮಾಡಿ ಸಂತೃಸ್ತರಿಗೆ ಪರಿಹಾರ ನೀಡಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠೀಣ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಶಿರಗೂರ ಗ್ರಾಮ ಪಂಚಾಯತ ಕಚೇರಿಗೆ ಬೀಗ ಹಾಕುವುದಾಗಿ ತಿಳಿಸಿದ್ದರು.

ಅದರಂತೆ ಇತ್ತ ಕಳೆದ ಎಂಟು ದಿನಗಳಿಂದ ಮಳೆ ಸುರಿಯುತ್ತಿದ್ದು ಇದರಿಂದ ಸಂತೃಸ್ತರು ತಮ್ಮ ಚಿಕ್ಕ ಮಕ್ಕಳು, ಹಿರಿಯರು, ಹೆಣ್ಣು ಮಕ್ಕಳು ಹೈರಾಣಾಗಿದ್ದಾರೆ ಇದರಿಂದ ಸಂತೃಸ್ತರು, ರಾಷ್ಟ್ರೀಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ವಿನಯ್ ಬಿದ್ರಮಳ್ಳಿ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಂಡು ಶಿರಗೂರ ಗ್ರಾಮ ಪಂಚಾಯತ ಕಚೇರಿಗೆ ಬೀಗ ಹಾಕಿ ಜಿಲ್ಲಾಧಿಕಾರಿ ಬರುವರೆಗೆ ಅನಿರ್ಧಿಷ್ಟಾವಧಿ ಪ್ರತಿಭಟನೆ ಕೈಗೊಂಡಿದ್ದಾರೆ.

ಸ್ಥಳಕ್ಕೆ ಉಪ ತಹಶೀಲ್ದಾರ್ ದಾನಿಹಾಳ ಭೇಟಿ ನೀಡಿ ತಿಳಿಹೇಳಿದರು ಜಗ್ಗದ ಪ್ರತಿಭಟನಾಕಾರರಿಗೆ ತಹಶೀಲ್ದಾರ ರಿಯಾಜುದ್ದಿನ ಬಾಗವಾನ ಕರೆ ಮಾಡಿ ಮಾತನಾಡಿ ತಿಳಿಹೇಳಿದರು ಆದರೆ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಬರುವರೆಗೆ ನಾವು ಬೀಗ ಹಾಕುವುದಾಗಿ ತಿಳಿಸಿದಾಗ, ನೀವು ಬೀಗ ಹಾಕಿ ನಾನು ಬರಲ್ಲ ಜಿಲ್ಲಾಧಿಕಾರಿಗಳು ಬರಲ್ಲ ಎಂದು ಉತದ್ದಟತನ ತಹಶೀಲ್ದಾರ ಉತ್ತರ ನೀಡಿದರು ಇದರಿಂದ ಪ್ರತಿಭಟನಾಕಾರರು ಪಂಚಾಯತ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮುಂದುವರೆಸಿದ ಘಟನೆ ನಡೆದಿದೆ.ಜಗ್ಗದ ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ರಾಯಬಾಗ್ ಕಾರ್ಯನಿರ್ವಾಹಕ ಅಭಿಯಂತರ ಸುರೇಶ ಕದ್ದು ಹಾಗೂ ರಾಯಬಾಗ ಸಿಪಿಐ ಕೆ ಎಸ್ ಹಟ್ಟಿ ಶಿರಗೂರ ಗ್ರಾಮದ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಹಿಂಪಡೆದು ಗ್ರಾಮ ಪಂಚಾಯಿತಿ ಬೀಗವನ್ನು ತೆಗೆಯುವ ಮೂಲಕ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ…

ವರದಿ. ಮಹಾಲಿಂಗ ಗಗ್ಗರಿ. ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend