ಗ್ರಾಮ ಪಂಚಾಯಿತಿಗಳಿಗೆ ಶಕ್ತಿ ತುಂಬುವ  ನಿಟ್ಟಿನಲ್ಲಿಪ್ರಧಾನ ಮಂತ್ರಿ ನರೇಂದ್ರ ಮೋದಿ ಅನೇಕ ಕಾರ್ಯಕ್ರಗಳನ್ನು ಕೊಟ್ಟಿದ್ದಾರೆ.ಜಿಲ್ಲಾ  ಉಸ್ತುವಾರಿ ಸಚಿವ  ಬೈರತಿ ಬಸವರಾಜ್ ಹೇಳಿದರು…!!!

Listen to this article

ಗ್ರಾಮ ಪಂಚಾಯಿತಿಗಳಿಗೆ ಶಕ್ತಿ ತುಂಬುವ  ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅನೇಕ ಕಾರ್ಯಕ್ರಗಳನ್ನು ಕೊಟ್ಟಿದ್ದಾರೆ ಎಂದು ಜಿಲ್ಲಾ  ಉಸ್ತುವಾರಿ ಸಚಿವ  ಬೈರತಿ ಬಸವರಾಜ್ ಹೇಳಿದರು.

ತಾಲೂಕಿನ ಪಲ್ಲಾಗಟ್ಟೆ ಗ್ರಾಮದಲ್ಲಿ ಶುಕ್ರವಾರ  ಬಿಜೆಪಿ ವತಿಯಿಂದ ಆಯೋಜಿಸಿದ್ದ  ಚಿತ್ರದುರ್ಗ-ದಾವಣಗೆರೆ  ವಿಧಾನ ಪರಿಷತ್  ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಸಿ.ಎಂ ಬಸವರಾಜ್ ಬೊಮ್ಮಾಯಿ ಉತ್ತಮ ಆಡಳಿತ ನೀಡಿದ್ದಾರೆ. ರಾಜ್ಯದ ಪ್ರತಿ ಗ್ರಾ.ಪಂ ಗಳಿಗೂ 50ಮನೆಗಳು ನೀಡಿದ್ದು, ಮೂರು ಕಂತುಗಳಲ್ಲಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದರು.
ಗ್ರಾ.ಪಂ ಚುನಾಯಿತರು  ಉತ್ತಮ ನಾಯಕರನ್ನು ಗುರುತಿಸಿ ಆಯ್ಕೆ ಮಾಡಬೇಕು, ನವೀನ್ ಬಿಜೆಪಿ
ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಾಗಿದ್ದಾರೆ. ಕಳೆದ ಬಾರಿ ಕೆಲವೇ ಮತಗಳಿಂದ ಸೋತಿದ್ದಾರೆ. ಕಾಂಗ್ರೆಸ್ನಿಂದ ಗೆದ್ದವರು ಒಮ್ಮೆಯೂ ಜಗಳೂರಿಗೂ ಭೇಟಿ ನೀಡಿಲ್ಲ, ಅವಳಿ ಜಿಲ್ಲೆಯ ಅಭ್ಯರ್ಥಿ   ಎಂಬುವುದನ್ನು ಒಮ್ಮೆ ಚಿಂತನೆ ಮಾಡಬೇಕು ಎ‌ಂದರು.  ಸಂಸದ ಜಿ.ಎಂ ಸಿದ್ದೇಶ್ವರ್ ಮಾತನಾಡಿ, ಮಹಿಳೆಯರಿಗೆ ಶೇ.50 ಮೀಸಲಾತಿ, ಮಾಶಾಸನ   ನೀಡಿದ್ದು ಬಿ.ಎಸ್ ಯಡಿಯೂರಪ್ಪ ಸರ್ಕಾರ ಎಂದರು.
ಗ್ರಾ.ಪಂ ರಾಮರಾಜ್ಯ ಆಗಲು ಗಾಂಧಿಜಿ ಕನಸ್ಸು ಕಂಡರು. 60 ವರ್ಷ ಆಳಿದ ಕಾಂಗ್ರೆಸ್ ನಿಂದ ಅದು ಸಾದ್ಯವಾಗಲಿಲ್ಲ. ಗ್ರಾ.ಪಂ ಗೆ ಮೊದಲು ಅನುದಾನ ಕೊಟ್ಟವರು ಅಟಲ್ ಬಿಹಾರ್ ವಾಜಪೇ, ನರೇಂದ್ರ ಮೋದಿ ಪ್ರತಿ ಗ್ರಾ.ಪಂ 1ಕೋ ಅನುದಾನ ನೀಡಿದ್ದಾರೆ.
40 ಕೋಟಿ ಜನರಿಗೆ ಜನಧನ್ ಯೋಜನೆಯಿಂದ ಪ್ರತಿ ಖಾತೆಗೂ 500 ಜಮ ಮಾಡಲಾಗಿದೆ.  ಕಾಂಗ್ರೆಸ್ ನವರು ಎಲ್ಲಿಂದಲೋ ಕರೆದುಕೊಂಡು ಬಂದು ಚುನಾವಣೆಯಲ್ಲಿ ನಿಲ್ಲಿಸುತ್ತಾರೆ. ಅವರಿಗೆ ಮರುಳಾಗಬೇಡಿ, ಹಣಕೊಟ್ಟು ಕೊಂಡು ಕೊಳ್ಳುವವರಿಗೆ ಮಣೆ ಹಾಕಬೇಡಿ ಎಂದರು.   ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿ, ನವೀನ್ ಅವರಿಗೆ ಕಳೆದ ಬಾರಿ ನಮ್ಮ ಕ್ಷೇತ್ರ ಹೆಚ್ಚು ಮತಗಳನ್ನು ನೀಡಿತ್ತು. ಈ ಬಾರಿಯೂ ಹೆಚ್ಚು ಮತಗಳನ್ನು ನೀಡಿ ಗೆಲುವಿಗೆ ಸಹಕರಿಸಬೇಕು ಎಂದರು. ಎರಡು ಬಾರಿ ಕಾಂಗ್ರೆಸ್ ನಿಂದ ಗೆದ್ದು ಹೋದ ವ್ಯಕ್ತಿ ಮತ್ತೊಮ್ಮೆ ಬಂದಿಲ್ಲ, ಚುನಾವಣೆಗೆ ಬಂದು ಹೋಗುವವರಿಗೆಲ್ಲಾ ಮತ ಹಾಕಬೇಡಿ, ಬಿಜೆಪಿಗೆ ಶಕ್ತಿ ನೀಡಿ ಎಂದರು.

ಬಿಜೆಪಿ ಅಭ್ಯರ್ಥಿ  ಕೆ.ಎಸ್ ನವೀನ್ ಮಾತನಾಡಿ,          ದಾವಣಗೆರೆಯಲ್ಲಿ ನಡೆದ ಜನಸ್ವರಾಜ್ ಕಾರ್ಯಕ್ರಮದಲ್ಲಿ  ಎಸ್.ವಿ ರಾಮಚಂದ್ರ ಅವರು ನವೀನ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಕಳೆದ ಸಾರಿ ಪ್ರತಿ ಗ್ರಾಮ ಪಂಚಾಯಿತಿ ಭೇಟಿ ನೀಡಿ  ಸದಸ್ಯರ ಸಮಸ್ಯೆಗಳನ್ನು ಪರಿಶೀಲಿಸಲಾಗಿತ್ತು.ಹಾಗಾಗಿ ಹೆಚ್ಚು ಮತಗಳನ್ನು ನೀಡಲು ಸಹಕಾರಿಯಾಯಿತು ಈ ಬಾರಿಯೂ ಮತ ನೀಡಿ ಗೆಲ್ಲಿಸಿ ಎಂದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಎಂ.ಎಲ್ ಸಿ ರವಿಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ದೇಶದ 10ಕೋಟಿ ಜನರಿಗೆ ಶೌಚಗೃಹ ಕಟ್ಟಿಸಿದೆ. 80 ಕೋಟಿ ಜನರಿಗೆ ಅಕ್ಕಿ ನೀಡಲಾಗುತ್ತಿದೆ, ಶಾಸಕ ಎಸ್.ವಿ ರಾಮಚಂದ್ರ ಕ್ಷೇತ್ರಕ್ಕೆ ಕುಡಿಯುವ ನೀರು, ಕೆರೆ ತುಂಬಿಸುವ ಯೋಜನೆ ಸೇರಿದಂತೆ ಸುಮಾತು 2600ಕೋಟಿ ಅನುದಾನ ತಂದು ಅಭಿವೃದ್ದಿ ಪಡಿಸಿದ್ದಾರೆ , ಗ್ರಾ.ಪಂ ಸದಸ್ಯರ ಗೌರವ ದನ ಕೇವಲ 80 ರೂಪಾಯಿ ಇತ್ತು. ಬಿಜೆಪಿ ಸರ್ಕಾರ ಒಂದು ಸಾವಿರ ನೀಡುತ್ತಿದೆ ಎಂದರು..

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮಂಡಲ ಅಧ್ಯಕ್ಷ ಎಚ್. ಸಿ‌ ಮಹೇಶ್, ಪ್ರ.ಕಾರ್ಯದರ್ಶಿ ಜಗದೀಶ್, ಎಚ್. ನಾಗರಾಜ್, ದೇವಿಕೆರೆ ಗ್ರಾ.ಪಂ ಅಧ್ಯಕ್ಷ ಸದಾಶಿವಪ್ಪ ಸೇರಿದಂತೆ ಮತ್ತಿತರಿದ್ದರು…

ವರದಿ. ಸಂದೀಪ್, ಜಗಳೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend