ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಖುದಿರಾಮ್ ಬೋಸ್ ರವರ 133ನೇ ಜನ್ಮ ದಿನಾಚರಣೆ…!!!

Listen to this article

ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಖುದಿರಾಮ್ ಬೋಸ್ ರವರ 133ನೇ ಜನ್ಮ ದಿನಾಚರಣೆ

ಇಂದು AIDSO ವತಿಯಿಂದ ಸ್ವಾತಂತ್ರ‍್ಯ ಸಂಗ್ರಾಮ ಮಹಾನ್ ಕ್ರಾಂತಿಕಾರಿ ಖುದಿರಾಮ್ ಬೋಸ್ ರವರ 133ನೇ ಜನ್ಮ ದಿನಚರಣೆಯನ್ನು ಕಂಪಿಲರಾಯ ಪ್ರೌಢಶಾಲೆ, ಆರ್. ವೈ.ಎಂ.ಇ.ಸಿ ಕಾಲೇಜಿನಲ್ಲಿ ಆಚರಿಸಲಾಯಿತು. ಶಿಕ್ಷಕರ ವೃಂದದಿಂದ ಖುದಿರಾಮ್ ಬೋಸ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಮಹಾನ್ ಸ್ವಾತಂತ್ರ್ಯ ಸಂಗ್ರಮದಲ್ಲಿ ಅತ್ಯಂತ ಚಿಕ್ಕ ವಹಸ್ಸಿನಲ್ಲಿ ಹುತಾತ್ಮರಾದ ಮಹಾನ್ ಕ್ರಾಂತಿಕಾರಿ ಅಂದರೆ ಖುದಿರಾಮ್ ಬೋಸ್. ಅತ್ಯಂತ ಜನಗಳ ಮೇಲೆ ಪ್ರೀತಿ – ಪ್ರೇಮ, ವಾತ್ಸಲ್ಯ, ಸ್ವಾತಂತ್ರ್ಯಕ್ಕಾಗಿ ತುಡಿತ ಅವರಲ್ಲಿ ಅಭಿವ್ಯಕ್ತವಾಗುತಿತ್ತು.

ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರು. ಅತೀ ಚಿಕ್ಕವಯಸ್ಸಿಗೇ ಕೇವಲ 19 ರ ಹರೆಯದಲ್ಲಿ ನೇಣುಗಂಬ ವೇರಿದ ಪ್ರಥಮ ಬಲಿದಾನಿ ಖುದಿರಾಮ್ ಬೋಸ್.

ಕಿಂಗ್ಸ್ ಫೊರ್ಡ್ ಎಂಬ ಬ್ರಿಟೀಷ್ ನ್ಯಾಯಾಧೀಶ ಕಲ್ಕತ್ತಾದಲ್ಲಿ ಸ್ವಾತಂತ್ರ್ಯಹೋರಾಟಗಾರರಿಗೆ ಘೋರಾತಿಘೋರ ಶಿಕ್ಷೆಗಳನ್ನು ಕೊಡುತ್ತಾ ವಿಕೃತ ಆನಂದವನ್ನು ಅನುಭವಿಸುತ್ತಿದ್ದ. ಭಾರತೀಯರ ಮೇಲೆ ಆತನ ದೌರ್ಜನ್ಯ ಮಿತಿಮೀರಿತ್ತು. ಈತನ ಕ್ರೌರ್ಯಕ್ಕೆ ಕೊನೆಹಾಡಬೇಕೆಂದು ನಿರ್ಧರಿಸಿದ ಖುದಿರಾಮ್ ಕಿಂಗ್ಸ್ ಫೊರ್ಡ್ ನನ್ನ ಕೊಲ್ಲುವ ಯತ್ನ ಮಾಡಿದ. ಆದರೆ ಕಿಂಗ್ಸ್ ಫೊರ್ಡ್ ಬಚಾವಾದ. ಆದರೂ ಆಪ್ರಯತ್ನದಲ್ಲಿ ಈ ಪ್ರಖರ ದೇಶಭಕ್ತನಿಗೆ ಗಲ್ಲುಶಿಕ್ಷೆಯಾಯ್ತು.

ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಈಘಟನೆಯ ಪರಿಣಾಮ ಮಹತ್ತರವಾದದ್ದು. ಬ್ರಿಟಿಷ್ ಸಾಮ್ರಾಜ್ಯದ ದರ್ಪವನ್ನು ನುಚ್ಚುನೂರು ಮಾಡಿದ ಈ ಕೆಲಸದ ರೂವಾರಿ ಹತ್ತೊಂಭತ್ತರ ಹುಡುಗ ಖುದಿರಾಮ್ ಭೋಸ್. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮೊದಲ ಬಾರಿಗೆ ಬಾಂಬ್ ಬಳಸಿದ್ದು ಕೂಡ ಇದೇ ಖುದಿರಾಮ್ ಬೋಸ್!.

*”ಸ್ವಾತಂತ್ರ್ಯವನ್ನು ಸೈನಿಕನಂತೆ ಹೋರಾಡಿ ಪಡೆಯಬೇಕು ಹೊರತು ಬ್ರಿಟಿಷರನ್ನು ಓಲೈಸುತ್ತಾ ಭಿಕ್ಷೆಯ.ರೂಪದಲ್ಲಲ್ಲ.” – ಖುದಿರಾಮ್ ಬೋಸ್*

ಈ ಕಾರ್ಯಕ್ರಮದಲ್ಲಿ AIDSO ರಾಜ್ಯ ಸೆಕ್ರೇಟರಿಯೇಟ್ ಸದಸ್ಯರು ಸುರೇಶ್.ಜಿ ಜಿಲ್ಲಾ ಅಧ್ಯಕ್ಷರು ಗುರಳ್ಳಿ ರಾಜ, ಜಿಲ್ಲಾ ಕಾರ್ಯದರ್ಶಿ ರವಿಕಿರಣ್.ಜೆ.ಪಿ ಮತ್ತು ಜಿಲ್ಲಾ ಸೆಕ್ರೇಟರಿಯಟ್ ಸದಸ್ಯರಾದ ಕೆ.ಈರಣ್ಣ, ನಿಂಗರಾಜ್, ವಿದ್ಯಾರ್ಥಿಗಳಾದ ಶರೀಫ್, ಶಂಕರ್, ಉದಯ್, ರಾಜೇಶ್ ಮತ್ತಿತರರು ಭಾಗವಹಿಸಿದ್ದರು.

ವರದಿ. ಎಂ. ಎಲ್. ವೆಂಕಟೇಶ್ ಬಳ್ಳಾರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend