ಪತ್ರಕರ್ತರಗಿಲ್ಲ ಸರ್ಕಾರದ ಪ್ಯಾಕೇಜ್*                

Listen to this article

ಪತ್ರಕರ್ತರಗಿಲ್ಲ ಸರ್ಕಾರದ ಪ್ಯಾಕೇಜ್*                            ಕೊರೊನಾ ಮೊದಲ ಅಲೆ ಮತ್ತು ಎರಡನೆಯ ಅಲೆಯ ಸಂದರ್ಭದಲ್ಲಿ ಪತ್ರಕರ್ತರು ತಮ್ಮ ಜೀವದ ಹಂಗನ್ನು ತೊರೆದು ನಗರ,ಪಟ್ಟಣ.ಹಳ್ಳಿ ಹಳ್ಳಿ,ಗಲ್ಲಿ ಗಲ್ಲಿ ತಿರುಗಿ ಕೊರೊನಾ ವಾಸ್ತವ ಸ್ಥಿತಿಯ ಸುದ್ದಿಯನ್ನು ಪ್ರಕಟಿಸಿ ಸರ್ಕಾರದ ಕಣ್ಣು ತೆರಸುವ ಪ್ರಾಮಾಣಿಕ ಕೆಲಸ ಮಾಡುವುದಲ್ಲದೇ ಸೋಂಕಿತರಿವ ಸ್ಥಳಗಳಿಗೆ ತೆರಳಿ ಅವರಿಗೆ ಆಗುವ ಅನೂಕೂಲ ಮತ್ತು ಅನಾನೂಕೂಲ ಬಗ್ಗೆ ತಿಳಿಸುವ ಪತ್ರಕರ್ತರ ಯಾವಾಗ ಸೋಂಕು ಹರಡುತ್ತೇ ಎನ್ನುವ ಆತಂಕದಲ್ಲಿ ನಿತ್ಯ ಸಾರ್ವಜನಿಕರ ಬಗ್ಗೆ ಕಳಿಕಳಿಯುಳ್ಳ ಒಬ್ಬ ಪತ್ರಕರ್ತರು ಯಾವದೇ ಫಲಾಪೇಕ್ಷವಿಲ್ಲದೇ ಸಾರ್ವಜನಿಕರ ರಂಗದಲ್ಲಿ ಪತ್ರಕರ್ತರು ಮತ್ತು ಅವರ ಕುಟುಂಬಗಳು ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದು ಸರ್ಕಾರದ ಗಮನಕ್ಕೆ ಯಾಕೆ ಬರುತ್ತಿಲ್ಲ ? ನಿತ್ಯ ಸುದ್ದಿ ಮಾಡಲು ತೆರಳಿ ಮಹಾಮಾರಿಯನ್ನು ತಗೆದುಕೊಂಡು ಬಂದು ಅದೆಷ್ಟೋ ಪತ್ರಕರ್ತರು ಅಸುನೀಗುತ್ತಿದ್ದರೂ ಅವರ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲ.

ಪತ್ರಕರ್ತರು ಮತ್ತು ಅವರ ಕುಟುಂಬಗಳು ಅಭದ್ರತೆಯಲ್ಲಿದ್ದರೂ ಅವರ ಕಡೆಗೆ ಯಾಕೆ ಸರ್ಕಾರ ಗಮನ ಹರಿಸುತ್ತಿಲ್ಲ ಅವರು ಯಾವ ಪಾಪ ಮಾಡಿದ್ದಾರೆ.ವಿವಿಧ ವಲಯದ ಕೆಲಸ ಮಾಡುತ್ತಿರುವ ಬಗ್ಗೆ ತಿಳಿಸುವ ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಕೊಡಬೇಕು ಅಂತಾ ಯಾಕೆ ಮನಸ್ಸು ಮಾಡಿಲ್ಲ ಇದು ಯಕ್ಷ ಪ್ರಶ್ನೆಯಾಗಿದೆ.

ಅಭದ್ರತೆಯಲ್ಲಿ ಕೆಲಸ ಮಾಡುತ್ತಿರುವ ಮಾಧ್ಯಮದ ಸ್ನೇಹಿತರು ಕೊರೊನಾ ಸೋಂಕಿಗೆ ಬಲಿಯಾಗಿ ಅದೆಷ್ಟೋ ಜನ ಪತ್ರಕರ್ತರು ಮರಣ ಹೊಂದಿ ಅವರನ್ನೇ ನಂಬಿಕೊಂಡ ಸಾವಿರಾರು ಕುಟುಂಬಗಳು ಕುಟುಂಬದ ಆಧಾರವಾಗಿದ್ದ ವ್ಯಕ್ತಿಯನ್ನು ಕೆಳದುಕೊಂಡು ಅನಾಥವಾಗಿ ಬೀದಿ ಪಾಲಾದ ಕುಟುಂಬಗಳ ನೋವಿನ ಧ್ವನಿ ಸರ್ಕಾರಕ್ಕೆ ಕೇಳಿಲ್ವಾ ? ವಿವಿಧ ರಂಗದಲ್ಲಿ ಅಸಂಘಟಿತವಾಗಿ ಕಾರ್ಯ ನಿರ್ವಹಿಸುವರ ಜೊತೆ ಪತ್ರಕರ್ತರಿಗೂ ಪ್ಯಾಕೇಜ್ನೀಡದಿರುವುದು ಪತ್ರಿಕಾ ರಂಗದಲ್ಲಿರುವ ಸ್ನೇಹಿತರಿಗೆ ನಿರಾಶೆಯಾಗಿದೆ ಸರ್ಕಾರ ತಕ್ಷಣವೇ ಪತ್ರಕರ್ತರ ನೋವನ್ನು ತಿಳಿದುಕೊಂಡು ಅವರಿಗೂ ಪ್ಯಾಕೇಜ ಬಿಡುಗಡೆ ಮಾಡಲಿ.

ಮತ್ತು ಸಾರ್ವಜನಿಕ ರಂಗದಲ್ಲಿ ಎಲ್ಲವನ್ನು ಎದುರು ಹಾಕಿಕೊಂಡು ಜೀವದ ಹಂಗನ್ನು ಬಿಟ್ಟು ನಾನು, ನನ್ನವರು, ಮತ್ತು ಯಾರೇ ತಪ್ಪುದಾರಿಯಲ್ಲಿ ಸಾಗುತ್ತಿದ್ದರೆ ಅದನ್ನು ಖಂಡಿಸಿ ನಿಲ್ಲುವಂತ ಸಮಾಜವನ್ನು ಬಡಿದೇಬ್ಬಿಸುವ ಒಬ್ಬ ಸೈನಿಕರ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿರುವ ಎಲ್ಲಾ ಪತ್ರಕರ್ತರ ಆರೋಗ್ಯ ಮತ್ತು ದುಷ್ಟರ ಒಂದು ದಬ್ಬಾಳಿಕೆ, ಹಾಗೂ ದೌರ್ಜನ್ಯದಿಂದ ಸೂಕ್ತವಾದ ಭದ್ರತೆಯನ್ನು ಅವರಿಗೂ ಮತ್ತು ಅವರನ್ನು ನಂಬಿಕೊಂಡು ಇರುವ ಕುಟುಂಬಗಳಿಗೂ ಸಹ ರಕ್ಷಣೆಯನ್ನು ನೀಡಿಲಿ ಹಾಗೂ ಬರೀ ಹೆಸರಿಗಷ್ಟೇ “ರಿಪೋರ್ಟರ್ ಗಳನ್ನು ಫ್ರೆಂಟ್ ಲೈನ್ ವರ್ಕರ್ “ಎನ್ನುವುದನ್ನು ಬಿಟ್ಟು ಅವರಿಗೂ ಸಹ ಸರ್ಕಾರ ಪ್ಯಾಕೇಜ್ ಅನ್ನು ಘೋಷಣೆ ಮಾಡಲಿ ಎನ್ನುವುದೇ ಎಲ್ಲಾ ಮಾಧ್ಯಮ ಮಿತ್ರರ ಒಂದು ಕೋರಿಕೆ….

 

ಎಚ್ಚರಿಕೆ ಪತ್ರಿಕೆ ಸಂಪಾದಕರು:-ಮಂಜುನಾಥ್, ಎನ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend