ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇ.74.67 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ…!!!

Listen to this article

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇ.74.67 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ಪಿಯು ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಒಟ್ಟು 317 ಕಾಲೇಜುಗಳಲ್ಲಿ ಶೇ 100 ರಷ್ಟು ಫಲಿತಾಂಶ ಬಂದಿದೆ.

ಈ ಬಾರಿ ಶೇ 74.64 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ 61.22 ಶೇ ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ ಶೇ.85.71 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ ಶೇ.75.89 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಉಡುಪಿ ದ್ವಿತೀಯ, ಕೊಡಗು ತೃತೀಯ ಮತ್ತು ಉತ್ತರ ಕನ್ನಡ ನಾಲ್ಕನೇ ಸ್ಥಾನ ಪಡೆದಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ಒಟ್ಟು 317 ಕಾಲೇಜುಗಳಲ್ಲಿ ಶೇ 100 ರಷ್ಟು ಫಲಿತಾಂಶ ಬಂದಿದೆ. 42 ಸರ್ಕಾರಿ ಕಾಲೇಜುಗಳು, 10 ಅನುದಾನಿತ ಪದವಿ ಪೂರ್ವ ಕಾಲೇಜುಗಳು, 264 ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 100 ಫಲಿತಾಂಶ ಸಿಕ್ಕಿದೆ.

ಇದೇ ವೇಳೆ ಒಟ್ಟು 78 ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದ್ದು, ಒಬ್ಬನೇ ಒಬ್ಬ ವಿದ್ಯಾರ್ಥಿ ಉತ್ತೀರ್ಣರಾಗಿಲ್ಲ.

ರಾಜ್ಯದಲ್ಲಿ ವಿವಿಧ ಶ್ರೇಣಿಗಳಲ್ಲಿ ಉತ್ತೀರ್ಣವಾಗಿರುವ ಒಟ್ಟಾರೆ ವಿದ್ಯಾರ್ಥಿಗಳ ವಿವರ:

ಉನ್ನತ ಶ್ರೇಣಿ (Distinction) (ಶೇಕಡ 85 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಪಡೆದವರು) – 1,09,509

ಪ್ರಥಮ ದರ್ಜೆ (First Class) (ಶೇಕಡ 85 ಕ್ಕಿಂತ ಕಡಿಮೆ ಹಾಗೂ ಶೇಕಡ 60 ಕ್ಕಿಂತ ಹೆಚ್ಚು ಅಂಕ ಪಡೆದವರು) – 2,47,315

ದ್ವಿತೀಯ ದರ್ಜೆ (Second Class) (ಶೇಕಡ 60 ಕ್ಕಿಂತ ಕಡಿಮೆ ಹಾಗೂ 50 ಕ್ಕಿಂತ ಹೆಚ್ಚು ಅಂಕ ಪಡೆದವರು) – 77,371

ತೃತೀಯ ದರ್ಜೆ (Third Class) (ಶೇಕಡ 50 ಕ್ಕಿಂತ ಕಡಿಮೆ ಅಂಕ ಪಡೆದು ಉತ್ತೀರ್ಣರಾದವರು)- 90,014

ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ‌ ರ್ಯಾಂಕ್ ಪಡೆದ ವಿದ್ಯಾರ್ಥಿ

ತಬುಸ್ಸಮ್ ಶಾಹಿಕ್ – 593 ಪ್ರಥಮ ರ‍್ಯಾಂಕ್‌- ಎನ್ ಎಂಕೆವಿ ಜಯನಗರ

ಕೌಶಿಕ್ – ಬಳ್ಳಾರಿ -592- ಎರಡನೇ ರ‍್ಯಾಂಕ್‌, ಹಿಂದು ಇನೋವೇಟಿವ್ ಪಿಯು ಕಾಲೇಜು.

ದಡ್ಡಿ ಕರೀಬಸಮ್ಮ- 592 ಎರಡನೇ ರ‍್ಯಾಂಕ್‌, ಬಳ್ಳಾರಿ

ಸಹನಾ- 591- ಮೂರನೇ ರ‍್ಯಾಂಕ್‌, ಸರ್ಕಾರಿ ಪಿಯು ಕಾಲೇಜು ಬೆಳಗಾವಿ

ವಾಣಿಜ್ಯ ವಿಭಾಗ

ಅನನ್ಯ – 600 / ಅಳ್ವಾಸ್ ಪಿಯು ಕಾಲೇಜು ಮೂಡುಬಿದರೆ ಪ್ರಥಮ ರ‍್ಯಾಂಕ್‌

ಅನ್ವಿತ ಡಿಎನ್ 596 – ವಿಕಾಸ್ ಕಾಂಪೋಸಿಟ್ ಪಿಯು ಕಾಲೇಜು- ಎರಡನೇ ರ‍್ಯಾಂಕ್‌

ಶುಭಶ್ರೀ ಎಂ- 595 / ರಾಜಾಜಿನಗರ ಎಎಸ್ ಸ್ಸಿ ಪಿಯು ಕಾಲೇಜು / ಮೂರನೇ ರ‍್ಯಾಂಕ್‌

ವಿಜ್ಞಾನ ವಿಭಾಗ

ಎಸ್.ಎಂ.ಕೌಶಿಕ್ 596/ ಕೋಲಾರ, ಗಂಗೋತ್ರಿ ಪಿಯು ಕಾಲೇಜು ಪ್ರಥಮ ರ‍್ಯಾಂಕ್‌

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend