ವಿದ್ಯುತ್, ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಆನ್ ಲೈನ್ ಪ್ರತಿಭಟನೆ: SUCI(C)…!!!

Listen to this article

ವಿದ್ಯುತ್, ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಆನ್ ಲೈನ್ ಪ್ರತಿಭಟನೆ: SUCI(C)

ಇಂದು SUCI (C) ಪಕ್ಷದ ವತಿಯಿಂದ ಕೋವಿಡ್ ಸಂಕಷ್ಟದಲ್ಲಿ ಜನರ ಸಮಸ್ಯೆಗೆ ಸ್ಪಂದಿಸದೇ, ವಿದ್ಯುತ್, ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಅಮಾನವೀಯ ನಡೆಯನ್ನು ಖಂಡಿಸಿ ಬಳ್ಳಾರಿ ಜಿಲ್ಲೆಯಾದ್ಯಂತ ಆನ್ ಲೈನ್ ಪ್ರತಿಭಟನೆ ಮಾಡಲಾಯಿತು. ಈ ಪ್ರತಿಭಟನೆಯಲ್ಲಿ ಬೇಡಿಕೆಗಳ ಫಲಕ ಇಡಿದು ಫೋಟೋ ತೆಗೆದು ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದರ ಮೂಲಕ ಆನ್ ಲೈನ್ ಹೋರಾಟದಲ್ಲಿ ಪಕ್ಷದ ಹಿತೈಸಿಗಳು, ಬೆಂಬಲಿಗರು ಮತ್ತು ಬಳ್ಳಾರಿ ಜಿಲ್ಲೆಯಾದ್ಯಾಂತ ಜನತೆ ಭಾಗವಹಿಸಿದ್ದರು.

ಈ ಪ್ರತಿಭಟನೆಯ ಉದ್ದೇಶಿಸಿ SUCI (C) ಪಕ್ಷದ ರಾಜ್ಯ ಸೆಕ್ರೆಟರಿಯೆಟ್ ಸದಸ್ಯರಾದ ಕಾಮ್ರೇಡ್ ಕೆ.ಸೋಮಶೇಖರ್ ಅವರು ಮಾತನಾಡುತ್ತಾ ಈ ಕೋರನಾ ಸಂಕಷ್ಟ ಸಮಯದಲ್ಲಿ ಪೆಟ್ರೋಲ್, ಡೀಸೆಲ್ ನೂರರ ಗಡಿ ದಾಟಿದ್ದು ದುಡಿಮೆ ಇಲ್ಲದೆ, ಆದಾಯವಿಲ್ಲದೆ, ನರಳುತ್ತಿರುವ ಸಾಮಾನ್ಯ ಜನಗಳ ಮೇಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೋವಿಡ್ ಪರಿಹಾರದ º ಹೆಸರಿನಲ್ಲಿ ಒಂದು ಕೈಯಲ್ಲಿ ಪುಡಿಗಾಸನ್ನು ನೀಡಿ ಇನ್ನೊಂದು ಕೈಯಿಂದ ಕಿತ್ತುಕೊಳ್ಳುವಂತೆ ಪರಿಸ್ಥಿತಿ ನಿರ್ಮಾಣ ಮಾಡಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್, ಅಡುಗೆ ಎಣ್ಣೆ ಮುಂತಾದ ಜನರಿಗೆ ಕನಿಷ್ಠ ಬೇಕಾಗಿರುವ
ಅಗತ್ಯ ವಸ್ತುಗಳ ಬೆಲೆಗಳು ನಿರಂತರವಾಗಿ ಗಗನಕ್ಕೆರುತ್ತಿವೆ. ಕೇಂದ್ರ ಮೋದಿ ಸರ್ಕಾರ ತನ್ನ ಯಾವುದೇ ಜವಾಬ್ದಾರಿ ಇಲ್ಲ ಅಂತ, ಲಜ್ಜೆಗೆಟ್ಟು
ಹೇಳುತ್ತಿರುವದು ವಿಪರ್ಯಾಸ. ಬೆಲೆ ಏರಿಕೆ ಕಡಿಮೆ ಮಾಡುತ್ತೇವೆ, ಎಂದು ಅಧಿಕಾರಕ್ಕೆ ಬಂದ ಬಿ ಜೆ ಪಿ, ಇಂದು ಜನಗಳಿಗೆ ದ್ರೋಹ ಬಗೆದಿದೆ.
ಅಧಿಕಾರಕ್ಕೆ ಬಂದಮೇಲೆ ಈ ದೇಶದ ಬಂಡವಾಳಿಗರ ಪರ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಆದ್ದರಿಂದ ಇಡೀ ಜನತೆ ಇದನ್ನು ಅರಿತು,ಹೋರಾಟದ ಹಾದಿಯನ್ನು ಹಿಡಿಯಬೇಕು ಎಂದು ಕರೆ ನೀಡಿದರು.

SUCI (C) ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಕಾಮ್ರೇಡ್ ರಾಧಾಕೃಷ್ಣ ಉಪಾದ್ಯ ಅವರು ಮಾತನಾಡುತ್ತಾ ರಾಜ್ಯದಲ್ಲಿ ಏಪ್ರಿಲ್ 1ರಿಂದಲೇ ಜಾರಿಗೆ ಬರುವಂತೆ ವಿದ್ಯುತ್ ದರ ಏರಿಕೆ ಮಾಡಿರುವ ತೀರ್ಮಾನವನ್ನು ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷವು ತೀವ್ರವಾಗಿ ಖಂಡಿಸುತ್ತದೆ. ಪ್ರತಿ ಯೂನಿಟ್ ಗೆ ಸರಾಸರಿ 30 ಪೈಸೆಯಂತೆ ಏರಿಕೆ ಮಾಡಲಾಗಿದೆ.

ವಿದ್ಯುತ್ ರಂಗವು ಸರ್ಕಾರದ ವ್ಯಾಪ್ತಿಯಲ್ಲಿರುವಾಗಲೇ ಇಂತಹ ಪರಿಸ್ಥಿತಿ ಇರುವಾಗ, ಖಾಸಗೀಕರಣಗೊಂಡಲ್ಲಿ ಎಷ್ಟು
ನಿರ್ದಯಿಯಾಗಬಹುದು ಎಂಬುದನ್ನು ಜನರನ್ನು ಅರ್ಥ ಮಾಡಿಕೊಳ್ಳಬೇಕು. ದೇಹಲಿಯಲ್ಲಿ ಕಳೆದ 6 ತಿಂಗಳುಗಳಿಂದ ರೈತರು ನಡೆಸುತ್ತಿರುವ ಹೋರಾಟದ
ಬೇಡಿಕೆಗಳಲ್ಲಿ ವಿದ್ಯುತ್ ಖಾಸಗೀಕರಣವನ್ನು ಕೈಬಿಡಬೇಕು ಎಂಬುದೂ ಒಂದಾಗಿದ್ದು, ರಾಜ್ಯದ ಜನತೆ ಈ ಹೋರಾಟವನ್ನು ಬಲಪಡಿಸಬೇಕು. ಸರಕಾರದ ದೋರಣೆಯನ್ನು ಅರ್ಥಮಾಡಿಕೂಳ್ಳಬೇಕು, ಇಂತಹ ಜನ ವಿರೋಧಿ ಸರ್ಕಾರಗಳ ಬಲಿಷ್ಠ ಹೋರಾಟ ಕಟ್ಟಲು ಮುಂದಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ SUCI (C) ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಆರ್.ಸೋಮಶೇಖರ್ ಗೌಡ, ಎಮ್.ಎನ್ ಮಂಜುಳಾ, ಎ.ದೇವದಾಸ್,ಡಿ.ನಾಗಲಕ್ಷ್ಮಿ, ಡಾ.ಎನ್ ಪ್ರಮೋದ್, ಎ.ಶಾಂತಾ ಮತ್ತಿತರರು ಭಾಗವಹಿಸಿದ್ದರು..

ವರದಿಗಾರರು, ಎಂ. ಎಲ್.ವೆಂಕಟೇಶ್. ಬಳ್ಳಾರಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend