ನಿಡಗುಂದಿ ಗ್ರಾಮಪಂಚಾಯ ವ್ಯಾಪ್ತಿಯಲ್ಲಿ ಸ್ಮಶಾನದ ಅಭಿವೃದ್ಧಿ ಕೆಲಸಕ್ಕೆ ಕನ್ನ…!!!

Listen to this article

ಜಿಲ್ಲೆ :ಬೆಳಗಾವಿ ತಾಲ್ಲೂಕು :ರಾಯಬಾಗ
ಗ್ರಾಮಪಂಚಾಯತಿ :ನಿಡಗುಂದಿ

ಕಾಮಗಾರಿ ಸಂಕೇತ ಸಂಖ್ಯೆ : 1504008031/LD/93393042892204272

ಕಾಮಗಾರಿ ಹೆಸರು : _ನಿಡಗುಂದಿ ಗ್ರಾಮದ ಹಾರೂಗೇರಿ ರಸ್ತೆಯ ಸ್ಮಶಾನ ಭೂಮಿ ಅಭಿವೃಧ್ಧಿ ಪಡಿಸುವುದು.ಹೆಸರಿಗಷ್ಟೇ ಮಾತ್ರ

Measurement Book Detail MB NO. 503 Page NO.20

ಗ್ರಾಮಸ್ಥರೇ, ಸರ್ಕಾರ ಹಲವು ಯೋಜನೆಗಳನ್ನು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ರೂಪಿಸುತ್ತದೆ. ಅದರಲ್ಲಿ ನಿಡಗುಂದಿ ಗ್ರಾಮ ಪಂಚಾಯ್ತಿನಲ್ಲಿ ಗ್ರಾಮ ಸಭೆಯನ್ನು ಮಾಡದೆ ಅಧಿಕಾರಿಗಳು, ಅಧ್ಯಕ್ಷ, ಸದಸ್ಯರು ಗ್ರಾಮಸ್ಥರ ಕಣ್ಣಿಗೆ ಮಣ್ಣು ಎರಚಿ ಮನ ಬಂದಂತೆ ಕ್ರೀಯಾ ಯೋಜನೆ ಸಿದ್ದ ಪಡಿಸುತ್ತಾರೆ ಅದರಲ್ಲಿ ಈ ಸ್ಮಶಾನ ಭೂಮಿ ಅಭಿವೃದ್ಧಿ ಪಡಿಸುವುದು,ಎಂಬ ಹೆಸರಲ್ಲಿ 15 ಲಕ್ಷ ರೂಪಾಯಿ ಕಾಮಗಾರಿ ಅದರಲ್ಲಿ,

ರೂ 7 ಲಕ್ಷ 16 ಸಾವಿರ 680 ರೂಪಾಯಿಗಳು ಬಿಲ್ಲು ಇದುವರೆಗೆ ಸಂದಾಯವಾಗಿದೆ. ಈ ಕಾಮಗಾರಿ ಮೇಲ್ನೋಟಕ್ಕೆ ಕಳಪೆ, ನಕಲಿ ಕಾಮಗಾರಿಯಾಗಿದ್ದು ನರೇಗಾ ಯೋಜನೆಯಲ್ಲಿ ಕೆಲಸಗಾರರನ್ನು ತೋರಿಸಿ ಬಿಲ್ಲೆತ್ತಿದ್ದು ಹಾಗೂ ಮೆಟ್ರೆಲ್ ಬಿಲ್ಲು ಕೂಡ ಒಂದೇ ದಿನದಲ್ಲಿ 5 ಬಿಲ್ಲೆತ್ತಿದ್ದು ಕಂಡು ಬಂದಿದೆ. ಈ ಕಾಮಗಾರಿ ಎಲ್ಲವೂ ಬೊಗಸ ಆಗಿದ್ದು ಭ್ರಷ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಭ್ರಷ್ಟ ಟೆಕ್ನಿಕಲ್ ಸಹಾಯಕ ಇಂಜಿನಿಯರ, ಭ್ರಷ್ಟ ಡಾಟಾ ಆಪರೇಟರ್, ಅಧ್ಯಕ್ಷ, ಗುತ್ತಿಗೆದಾರರು ಹಾಗೂ AEO, AD ಕೂಡ ಇದರಲ್ಲಿ ಸಂಪೂರ್ಣ ಶಾಮಿಲು ಇದ್ದು ಸರ್ಕಾರದ ಬೊಕ್ಕಸಕ್ಕೆ ವಂಚನೆ ಎಸಗಿದ್ದಾರೆ. ಹಿಂತಹ ಭ್ರಷ್ಟ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿ, ಶಿಕ್ಷೆಗೆ ಗುರಿಯಾಗಿಸಬೇಕು ಹಾಗೂ ಅಧ್ಯಕ್ಷೆಯ ಸದಸ್ಯತ್ವ ರದ್ದು ಪಡಿಸಿ, ಶಿಕ್ಷೆ ಗೆ ಗುರಿಯಾಗಿಸಬೇಕು. ಹಾಗೇ ಗುತ್ತಿಗೆದಾರರ ಲೈಸನ್ಸ್ ಕಪ್ಪು ಪಟ್ಟಿಗೆ ಸೇರಿಸಿ, ಶಿಕ್ಷೆ ಗೆ ಗುರಿಯಾಗಿಸಬೇಕೆಂದು ಈ ಮೂಲಕ ತಮ್ಮ ಗಮನ ಸೆಳೆಯಲು ಬಯಸುತ್ತೇನೆ.

ಮತ್ತು ರಾಜ್ಯದಲ್ಲಿ ಹಲವು ಗ್ರಾಮಪಂಚಾಯಿತಿಗಳಲ್ಲಿ ಇದೆ ತರನಾದ, ಕಾಮಗಾರಿಗಳು ಎಗ್ಗಿಲ್ಲದೇ ಸಾಗುತ್ತಿರುವುದನ್ನು ನೋಡಿದರೆ ನಮ್ಮ ಒಂದು ರಾಜ್ಯದಲ್ಲಿ ಸರ್ಕಾರದ ಯೋಜನೆಗಳು ಅದೋಗತಿಯಲ್ಲಿ ಸಾಗುತ್ತಿರುವುದನ್ನು ನೋಡಿದರೆ ಇಂತಹ ಭ್ರಷ್ಟಾಚಾರಗಳಿಗೆ ಕೊನೆ ಯಾವಾಗ ಎನ್ನುವುದನ್ನು ಕಾಯ್ದು ನೋಡೋಣ..

ವರದಿ.ಮುಕ್ಕಣ್ಣ ಹುಲಿಗುಡ್ಡ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend