ಚುನಾವಣೆಯಲ್ಲಿ ಪ್ರತಿ ಮತ ಅಮೂಲ್ಯ, ಮತದಾನ ಪವಿತ್ರ. ಮಲ್ಲನಾಯ್ಕ್…!!!

Listen to this article

ಚುನಾವಣೆಯಲ್ಲಿ ಪ್ರತಿ ಮತ ಅಮೂಲ್ಯ, ಮತದಾನ ಪವಿತ್ರ. ಮಲ್ಲನಾಯ್ಕ್
ದಾವಣಗೆರೆ: ಚುನಾವಣೆಯಲ್ಲಿ ಪ್ರತಿಯೊಬ್ಬರ ಮತ ಅಮೂಲ್ಯವಾಗಿದ್ದರೆ, ಮತದಾನ ಪವಿತ್ರ ಕೆಲಸವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ್ ತಿಳಿಸಿದರು. ಅವರು ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ವೀಪ್ ಸಮಿತಿ, ಪೊಲೀಸ್ ಹಾಗೂ ಗೃಹರಕ್ಷಕದಳ ವತಿಯಿಂದ ನಗರದ ಸ್ಕವಾಯತು ಮೈದಾನದಿಂದ ಮತದಾನ ಜಾಗೃತಿ ಅಂಗವಾಗಿ ಏರ್ಪಡಿಸಿದ ಕಾಲ್ನಡಿಗೆ ಜಾಥಾ ಉದ್ದೇಶಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಶೇ.85 ರಷ್ಟು ಮತದಾನವಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಂದು ಮತ ಅತ್ಯಮೂಲ್ಯವಾದದು. ಪ್ರತಿಯೊಬ್ಬರು ಮೇ 7 ರಂದು ತಮ್ಮ ನಡಿಗೆ ಮತಗಟ್ಟೆ ಕಡೆಗಿರಲಿ ಎಂದರು.
ಜಾಥಾ ಕಾರ್ಯಕ್ರಮಕ್ಕೆ ಹೆಚ್ಚುವರಿ ಪೋಲೀಸ್ ಅಧೀಕ್ಷಕ ವಿಜಯಕುಮಾರ್ ಎಂ. ಸಂತೋಷ ಚಾಲನೆ ನೀಡಿದರು.
ಗೃಹರಕ್ಷಕ ದಳ ಜಿಲ್ಲಾ ಕಮಾಂಡೆಂಟ್ ಸುಜಿತ್ ಕುಮಾರ್ ಮಾತಾನಾಡಿ, ನಮ್ಮ ಜಿಲ್ಲೆಯಲ್ಲಿ ಚುನಾವಣೆ ಕರ್ತವ್ಯ ನಿರ್ವಹಿಸಲು ಸುಮಾರು 550 ಗೃಹರಕ್ಷಕದಳ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ಇತರೆ ತಾಲ್ಲೂಕಿಗೆ 450 ಜನರನ್ನು ನೇಮಕ ಮಾಡಲಾಗಿದೆ ಎಂದರು.
ಗೃಹರಕ್ಷಕ ದಳದ ಘಟಕಾಧಿಕಾರಿಗಳಾದ ರಾಘವೇಂದ್ರ, ಅಭಿಷೆಕ್, ಶರಣಬಸವ, ಸಿಬ್ಬಂದಿಗಳಾದ ಸರಸ್ವತಿ ಹಾಗೂ ಗೃಹ ರಕ್ಷಕದಳದ ಸಿಬ್ಬಂದಿಗಳು ಉಪಸ್ಥಿತಿರಿದ್ದರು….

ವರದಿ. ಪ್ರಕಾಶ್, ಆರ್, ದಾವಣಗೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend