ತಿಪ್ಪೇಹಳ್ಳಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಶಾಖೆ ಉದ್ಘಾಟನೆ ಮಾಡಲಾಯಿತು….!!!

Listen to this article

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ 31 .1. 2021 ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲೂಕು ತಿಪ್ಪೆ ಹಳ್ಳಿ ಗ್ರಾಮ*

*ತಾಲೂಕಿನ ತಿಪ್ಪೆ ಹಳ್ಳಿ ಗ್ರಾಮದಲ್ಲಿ ದಿನಾಂಕ 29 .1 2021 ಶುಕ್ರವಾರ ದಂದು( ಪ್ರೊಫೆಸರ್ ಕೃಷ್ಣಪ್ಪ ಸ್ಥಾಪಿತ) ಕರ್ನಾಟಕ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟನೆ ಹಾಗೂ ಜೀ ವಾಹಿನಿಯಲ್ಲಿ ಪ್ರಸಾರವಾಗುವ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಜೀವನಾಧಾರಿತ ಮಹಾನಾಯಕ ಧಾರಾವಾಹಿಯ ಬ್ಯಾನರನ್ನು ಊರಿನ ಬಾಲಕಿಯರಿಂದ ಕಳಸಗಳನ್ನು ಬೆಳಗಿ ಹೂವಿನ ಹಾರ ಹಾಕುವುದರಮೂಲಕ ಉದ್ಘಾಟನೆ ಮಾಡಲಾಯಿತು.*

ಈ ಸಮಾರಂಭದ ಉದ್ಘಾಟನಾ ಕಾರ್ಯಕ್ರಮವನ್ನು ಪೂಜಾರಹಳ್ಳಿ ಗ್ರಾಮ ಪಂಚಾಯಿತಿ ಗೆ ನೂತನವಾಗಿ ತಿಪ್ಪೆ ಹಳ್ಳಿ ಗ್ರಾಮದಿಂದ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಶ್ರೀಮತಿ ಗೌರಮ್ಮ ಮಂಜುನಾಥ್ ತಾಲೂಕು ಪಂಚಾಯಿತಿ ಸದಸ್ಯರಾದ ಹೊಡೆ0 ಪಾಪ ನಾಯಕ್. ತಾಲೂಕ್ ದಲಿತ ಸಂಘರ್ಷ ಸಮಿತಿ ಸಂಚಾಲಕರಾ ದ ಕಂದಗಲ್ ಪರಶುರಾಮ್ . ಇವರುಗಳ ಮುಖಂಡತ್ವದಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ಮಾಡಲಾಯಿತು . ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಸಂಚಾಲಕರಾದ ಕಂದಗಲ್ ಪರಶುರಾಮ್ ವಹಿಸಿದ್ದರು ಬಿ. ಮಹೇಶ್ ತಾಲೂಕು ಸಂಘಟನಾ ಸಂಚಾಲಕರು ಕೂಡ್ಲಿಗಿ ಇವರು ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದರು . ಧನ್ಯಕುಮಾರ್ ಜಗಳೂರು ವಿಜಯವಾಣಿ ಪತ್ರಕರ್ತ ಈ ಸಮಾರಂಭ ಕುರಿತು ದೀನದಲಿತರ ಬಗ್ಗೆ . ಶಿಕ್ಷಣದ ಬಗ್ಗೆ ಹಾಗೂ ಹಿಂದಿನ ಜೀವನದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಜೀವನ ಕುರಿತು ಅವರು ಮಾಡಿದ ಸಾಮಾಜಿಕ ಹೋರಾಟಗಳ ಬಗ್ಗೆ ಶಿಕ್ಷಣದ ಬಗ್ಗೆ ಇನ್ನೂ ಅನೇಕ ದಲಿತ ಪರ ಹೋರಾಟ ವಿಚಾರಗಳನ್ನು ಮಾತನಾಡಿದರು . ತಾಲೂಕ್ ಪಂಚಾಯತಿ ಸದಸ್ಯರಾದ ಹುಡೇO ಪಾಪ ನಾಯಕ್ ಅಂಬೇಡ್ಕರ್ ಅವರ ಬಾಲ್ಯದ ಬಗ್ಗೆ ಹಾಗೂ ಸರ್ಕಾರದಿಂದ ದಲಿತರಿಗೆ ಸಿಗುವ ಸೌಲಭ್ಯಗಳನ್ನು ಕುರಿತು ತಮ್ಮ ಕೈಲಾದಷ್ಟು ಮಟ್ಟಿಗೆ ಸರ್ಕಾರದ ಸೌಲಭ್ಯಗಳನ್ನು ದೊರಕಿಸಿಕೊಡುವಂತೆ ಆಶ್ವಾಸನೆ ನೀಡಿದರು. ಈ ಸಮಾರಂಭದಲ್ಲಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ತುಂಬರಗುದ್ದಿ ದುರ್ಗೇಶ್ ಜಯವಾಣಿ ಸಂಪಾದಕ ಕೃಷ್ಣಮೂರ್ತಿಯವರು ಎಂ ಎಸ್ ನಜೀರ್ ಅಹ್ಮದ್ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಮಾರೇನಹಳ್ಳಿ ಇವರುಗಳು ಸಂವಿಧಾನ ಶಿಲ್ಪಿ ಡಾಕ್ಟರ್. ಬಿ ಆರ್ ಅಂಬೇಡ್ಕರ್ ಅವರ ಬಾಲ್ಯದಲ್ಲಿ ಅನುಭವಿಸಿದ ಜೀವನದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಕೊನೆಯದಾಗಿ ತಿಪ್ಪೆ ಹಳ್ಳಿ ಗ್ರಾಮದ ಮುಖಂಡರು ಊರಿನ ಸಮಸ್ಯೆಗಳ ಬಗ್ಗೆ ಸಂಘಟನೆಯ ಬಗ್ಗೆ ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದರು . ಕೊನೆಯದಾಗಿ ತಾಲೂಕು ಸಂಚಾಲಕರಾದ ಕಂದಗಲ್ ಪರಿಶ್ರಮ ರವರು ಮಾತನಾಡಿ ನೂತನವಾಗಿ ತಿಪ್ಪೆ ಹಳ್ಳಿ ದಲಿತ ಸಂಘರ್ಷ ಸಮಿತಿ ಗ್ರಾಮ ಘಟಕಕ್ಕೆ ಆಯ್ಕೆಯಾದ ಸಂಚಾಲಕರಿಗೆ ಸಂಘಟನಾ ಸಂಚಾಲಕರಿಗೆ ಸಂಘಟನೆಯ ಎಲ್ಲಾ ಪದಾಧಿಕಾರಿಗಳಿಗೆ ಗ್ರಾಮದಲ್ಲಿ ಎಲ್ಲ ಜನಾಂಗದವರನ ಅಣ್ಣತಮ್ಮಂದಿರಂತೆ ಕಾಣಬೇಕು ಗ್ರಾಮದಲ್ಲಿ ಶಾಂತತೆಯಿಂದ ವರ್ತನೆ ಮಾಡಬೇಕು ಯಾವುದೇ ತೊಂದರೆ ಬಂದರೂ ಗ್ರಾಮದ ಮುಖಂಡರ ಜೊತೆಗೂಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಬಿ ಹನುಮೇಶ್ ಟಿ ಗಂಗಾಧರ .
ತುಂಬರಗುದ್ದಿ ದುರುಗೇಶ್. ತಾಲೂಕು ಸಂಘಟನಾ ಸಂಚಾಲಕರಾದ ಮಹೇಶ್ ವರದಿಗಾರ ಹಾಗೂ ತಾಲೂಕು ಸಂಘಟನಾ ಸಂಚಾಲಕ ಡಿ ಎಂ ಈಶ್ವರಪ್ಪ ಸಿದ್ದಾಪುರ. ಬಡೇಲಡಕು ದುರುಗೇಶ್ . ಮಾಕನಡಕು ಕುಮಾರ ಹೊಸಹಳ್ಳಿ ಹೇಮಂತಕುಮಾರ್. ಕೆಂಚಮಲ್ಲನಹಳ್ಳಿ ಗ್ರಾಮ ಘಟಕ ಸಂಚಾಲಕ ಮಹಾಂತೇಶ್. ದಲಿತ ಮುಖಂಡ ಸುರೇಶ್ ಪೂಜಾರಹಳ್ಳಿ ತಿಪ್ಪೇಸ್ವಾಮಿ ಹಾರಕಭಾವಿ ತಿಪ್ಪೇಸ್ವಾಮಿ ಮಾಳೆಹಳ್ಳಿ ಜೈಯಣ ರಾಜಪ್ಪ. ವರದಿಗಾರ ರುದ್ರಮುನಿ ಜಗಳೂರು.ಪರಮೇಶ್ ಡಿ ಎಸ್ ಎಸ್ ಸದಸ್ಯರು ಜಗಳೂರು. ಊರಿನ ಮುಖಂಡರು ಸುತ್ತಮುತ್ತಲಿನ ದಲಿತ ಮುಖಂಡರು ಗ್ರಾಮದ ಮುಖಂಡರು ಹಾಗೂ ದಲಿತ ಸಂಘರ್ಷ ಸಮಿತಿ ತಿಪ್ಪೆ ಹಳ್ಳಿ ಗ್ರಾಮ ಘಟಕದ ಪದಾಧಿಕಾರಿಗಳಾದ ಮಾರೇಶ್ ಶಿವ ರಾಜ್ ಟೀ ರುದ್ರಮುನಿ ಬಿ ತಿಪ್ಪೇಶ.ಏಕಾಂತ. ಸಣ್ಣ ಗಂಗಾಧರ ಟೀ. ಕರಿಬಸಪ್ಪ .ಪಿ ಪ್ರಕಾಶ . ಸಾರ್ವಜನಿಕರು ಮಹಿಳೆಯರು ಸೇರಿದಂತೆ ಗ್ರಾಮಸ್ಥರುತಿಪ್ಪೆ ಹಳ್ಳಿ ಗ್ರಾಮದ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend