ವಾಡಿಕೆಗಿಂತ ಬೇಗ ಮುಂಗಾರು ಪ್ರಾರಂಭ, ಚುರುಕುಗೊಂಡ ಬಿತ್ತನೆ ಕಾರ್ಯ…!!!

Listen to this article

ಜೆಎಲ್‍ಆರ್ ಜೂನ್ 12
ತಾಲ್ಲೂಕಿನಲ್ಲಿ ಈ ಬಾರಿ ಪೂರ್ವ ಮುಂಗಾರಿನಲ್ಲಿಯೇ ಹೆಚ್ಚು ಮಳೆಯಾಗಿರು ಹಿನ್ನಲೆ ರೈತರು ಭೂಮಿ ಅಸನು ಮಾಡಿಕೊಂಡು ಬಿತ್ತನೆ ಕಾರ್ಯದಲ್ಲಿ ಬ್ಯೂಸಿಯಾಗಿದ್ದಾರೆ.
ಹೌದು ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ರೈತರೆಲ್ಲೆರು ತಮ್ಮ ಹೊಲಗಳಲ್ಲಿಯೇ ಕೃಷಿ ಚಟುವಟಿಕೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಕರೋನಾದಂತಹ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಎಲ್ಲಾ ಕ್ಷೇತ್ರಗಳು ತಟಸ್ಥಗೊಂಡಿದ್ದರು, ಕೃಷಿ ಕ್ಷೇತ್ರದಲ್ಲಿ ಮಾತ್ರ ರೈತರು ಲವಲವಿಕೆಯಿಂದ ಕಾರ್ಯಪ್ರವೃತ್ತರಾಗಿದ್ದಾರೆ.
ಕೃಷಿ ಚಟುವಟಿಕೆಗೆ ಬ್ರೆಕ್ ಹಾಕದ ಕೋವಿಡ್;
ಕೋವಿಡ್ ಎರಡನೇ ಅಲೆಯು ಬಹುತೇಕ ಎಲ್ಲಾ ಕ್ಷೇತ್ರಗಳನ್ನು ತಟಸ್ಥವನ್ನಾಗಿಸಿದೆ. ಆದರೆ ಇದರ ಬಿಸಿ ಕೃಷಿ ಚಟುವಟಿಕೆಗೆ ಹಾಗೂ ಕೃಷಿ ಕ್ಷೇತ್ರಕ್ಕೆ ತಟ್ಟಿಲ್ಲ. ಅಲ್ಲದೇ ತಾಲ್ಲೂಕಿನ ಜನರು ಜನತಾ ಕರ್ಫೋಗೆ ತಲೆಕಡೆಸಿಕೊಳ್ಳದೇ ತಮ್ಮ ಕೃಷಿ ಕೆಲಸವನ್ನು ನೆಮ್ಮದಿಯಿಂದ ಮಾಡುತ್ತಿದ್ದಾರೆ. ಕೆಲವು ಕಡೆ ಬಿತ್ತನೆ ಕಾರ್ಯ ಹೊಲಗಳ ಹದ ಮಾಡುವ ಕೆಲಸಗಳಲ್ಲಿ ರೈತರು ಬೆಳಗಿನಿಂದ ಸಂಜೆಯವರೆಗೂ ತಮ್ಮ-ತಮ್ಮ ಹೊಲಗಳಲ್ಲಿಯೇ ಸಮಯ ಕಳೆಯುತ್ತಿದ್ದಾರೆ.
ಅಕ್ಕಡಿ ಬೆಳೆಗೆ ಶಾಸಕರಿಂದ ಪ್ರಚಾರ;
ತಾಲ್ಲೂಕಿನಲ್ಲಿ ಉತ್ತಮವಾಗಿ ಮುಂಗಾರು ಮಳೆಯಾಗುತ್ತಿದ್ದು, ಇದರ ಸದುಪಯೋಗವನ್ನು ರೈತರು ಪಡೆದುಕೊಂಡು ಮೆಕ್ಕೆ ಜೋಳ, ಸೂರ್ಯಕಾಂತಿ ಹೀಗೆ ಅನೇಕ ಬೆಳೆಗಳ ಮಧ್ಯೆ ಅಂತರ (ಅಕ್ಕಡಿ) ಬೆಳೆಯಾಗಿ ತೋಗರಿಯನ್ನು ಇನ್ನಿತರ ಧಾನ್ಯಗಳನ್ನು ಬೆಳೆಯರಿ, ಒಂದು ಬೆಳೆ ಕೈ ಕೊಟ್ಟರೆ ಇನ್ನೋಂದು ಬೆಳೆ ಕೈಯಿಡಿಯುವುದು ಎಂದು 3 ನಿಮಿಷ ವಿಡೀಯೊದಲ್ಲಿ ಶಾಸಕರು ರೈತರಿಗೆ ಮನವಿ ಮಾಡಿದ್ದಾರೆ ಅಲ್ಲದೆ ಅಕ್ಕಡಿ ಬೀಜವನ್ನು ಶಾಸಕರೆ ಖುದ್ದು ವಿತರಣೆಯನ್ನು ಮಾಡಿದ್ದಾರೆ.
ಬಿತ್ತನೆ ಬೀಜ, ರಸಗೋಬ್ಬರಕ್ಕೆ ಕೊರತೆ ಇಲ್ಲ;
9 ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜಗಳನ್ನು ನೀಡುವ ಕಾರ್ಯಕ್ಕೆ ವ್ಯವಸ್ಥೆ ಮಾಡಿಕೊಂಡಿರುವ ಕೃಷಿ ಇಲಾಖೆ ಈಗಾಗಲೇ ಎಂಟು ಸಾವಿರ ಟನ್ ಹೆಚ್ಚು ಬಿತ್ತನೆ ಬೀಜ ದಾಸ್ತಾನು ಇದ್ದು, ರೈತರು ಬಿತ್ತನೆಗೂ ಮುಂಚೆಯೇ ತಗೆದುಕೊಂಡಿಹೋಗಿದ್ದಾರೆ, ಅಲ್ಲದೇ ರಸಗೋಬ್ಬರದ ಕೊರೆತೆ ಇಲ್ಲದಂತೆ ಇಲಾಖೆ ಮುನ್ನಚ್ಚೆರಿಗೆಯಿಂದ ದಾಸ್ತನು ಮಾಡಿದ್ದು ರೈತರಿಗೆ ತೊಂದರೆಯಾಗದಂತೆ ಕೃಷಿ ಇಲಾಖೆ ಜವಾಬ್ದಾರಿ ವಹಿಸಿದೆ.
ಕೃಷಿ ಚಟುವಟಿಕೆಯಲ್ಲಿ ಮಕ್ಕಳು, ಯುವಕರು;
ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿ ಸರಕಾರ ಶಾಲೆ ಕಾಲೇಜ್‍ಗಳನ್ನು ಮುಚ್ಚಿರುವುದ್ದರಿಂದ ಹಳ್ಳಿಗಳಲ್ಲಿನ ಇದರ ಸದುಪಯೋಗ ಪಡೆದುಕೊಂಡ ಕೃಷಿಕರು ತಮ್ಮ ಮಕ್ಕಳನ್ನು ಕೃಷಿ ಕೆಲಸಗಳಿಗೆ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಕೋವಿಡ್‍ನಿಂದ ನಗರದಲ್ಲಿನ ಯುವಕರು ಮರುಳಿ ಹಳ್ಳಿಗೆ ಬಂದು ಇರುವ ಅಲ್ಪ ಸ್ವಲ್ಪ ಹೊಲಗಳನ್ನು ಉಳುಮೇ ಮಾಡುವ ನಿರ್ಧಾರವನ್ನು ತಗೆದುಕೊಂಡು ಕೃಷಿ ಜೀವನವನ್ನು ಅಸ್ವಾಧಿಸುತ್ತಿರುವುದು ತಾಲ್ಲೂಕಿನೆಲಡೆ ಕಂಡು ಬರುತ್ತದೆ.
ಕೋಟ್-1
ತಾಲ್ಲೂಕಿನಲ್ಲಿ ಯಾವಬ್ಬ ರೈತರಿಗೆ ತೊಂದರೆಯಾಗದಂತೆ ಬೀಜ, ರಸಗೊಬ್ಬರವನ್ನು ದಾಸ್ತುನು ಮಾಡಿಸಿಲಾಗಿದೆ. ರಸಗೋಬ್ಬರ ಏಜೇನ್ಸಿಗಳು ಯಾವುದೇ ರಸಗೋಬ್ಬರವನ್ನು ನಿಗದಿತ ಬೆಲೆಗಿಂತ ಹೆಚ್ಚು ಬೆಲೆಗಳಿಗೆ ರೈತರಿಗೆ ಮಾರಟ ಮಾಡಿದ್ದು ಗಮನಕ್ಕೆ ಬಂದರೆ ಏಜೇನ್ಸಿಯನ್ನು ಕೊಡಲೇ ರದ್ದು ಮಾಡವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
10 ಜೆಎಲ್‍ಆರ್ ಚಿತ್ರ 01
ತಾಲ್ಲೂಕಿನ ದೊಣೆಹಳ್ಳಿ ಗ್ರಾಮದ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವುದು.

ವರದಿ.ಸಂದೀಪ್, ಎಚ್ ಜಗಳೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend