ತೋರಣಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕೇಲಸ ನೀಲ್ಲಿಸಿ ಪ್ರತಿಭಟನೆ…!!!

Listen to this article

ಇಂದು ಜಗಳೂರು ತಾಲೂಕು ತೋರಣಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋರಗಟ್ಟೆ ಗುಡ್ಡದಲ್ಲಿ ಕೇಲಸ ನೀಲ್ಲಿಸಿ ಪ್ರತಿಭಟನೆ ಮಾಡಿದ ರಾಷ್ಟ್ರೀಯ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು
ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ನಿರುದ್ಯೋಗ ನಿವಾರಣಗಾಗಿ ಹಾಗೂ ಗೂಳೆ ಹೋಗುವುದನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಉಪಯುಕ್ತ ವಾಗಿ ಜಾರಿಗೊಳಿಸಲು ವಿಪಲಾವಾಗಿರುವುದು ಖಂಡನಿಯ ಎಂದು ಎಚ್ಚೆತ್ತ ಕರ್ನಾಟಕ ನವ ನಿರ್ಮಾಣ ವೇದಿಕೆಯ ರಾಜ್ಯ ಅದ್ಯಕ್ಷ ಮಹಾಲಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದರು

ಸುಮಾರು ದಿನಗಳಿಂದ ತೋರಣಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವಂತಹ ಜಮ್ಮಾಪುರ ತೋರಣಗಟ್ಟೆ ಸುಮಾರು 600 ಅಧಿಕ ಮಹಿಳೆ ಮತ್ತು ಪುರುಷರು ಪ್ರತಿನಿತ್ಯ ಕೇಲಸ ಮಾಡುತ್ತಿದ್ದಾರೆ ಆದರೆ ಇಂದು‌ ಗ್ರಾಮ ಪಂಚಾಯಿತಿ ಅಧಿಕಾರಿಗಳು ತೋರಣಗಟ್ಟೆಯ ಗುಹೇಶ್ವರ ಗುಡ್ಡದಲ್ಲಿ ಗಿಡಗಳನ್ನು ನೇಡುವ ಉದ್ದೇಶದಿಂದ ಕೂಲಿಕಾರರಿಗೆ ಗುಡ್ಡದಲ್ಲಿ ಕೇಲಸ ನೀಡಿದೆ ಕೇಲಸ ನೀಡುವ ಮುನ್ನ ಈ ಜಾಗದಲ್ಲಿ ಕೇಲಸವನ್ನು ಮಾಡಲು ಸಾದ್ಯವೆ ಎಂಬುದನ್ನು ಪರಿಸಿಲಿಸದೆ ಅಧಿಕಾರಿಗಳು ಅತ್ಯಂತ ಗಟ್ಟಿಯಿರುವ ಬರಿ ಕಲ್ಲುಬಡ್ಡೆಗಳು ಇರುವ ಜಾಗದಲ್ಲಿ ಕೇಲಸ ಮಾಡಿ ಎಂದು ತಿಳಿಸುವ ಇಂದಿನ ಉನ್ನಾರ ಉದ್ಯೋಗ ಖಾತ್ರಿ ಕೆಲಸದಿಂದ ಕೇಲಸಗಾರರನ್ನು ಒಕ್ಕಲೇಬ್ಬಸಿ ಜೆ ಸಿ ಪಿ ಮುಂತಾದ ವಾಹನಗಳನ್ನು ಬಳಸಿ ಕೇವಲ ಕೇಲವೆ ಕೇಲವು ವ್ಯಕ್ತಿಗಳ ಹಿತಾಶಕ್ತಿಯನ್ನು ಕಾಪಾಡುವುದಾಗಿದೆ

ಕೇಲಸ ಮಾಡುವ ಜಾಗದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಕೈಗೊಳ್ಳಬೇಕಾಗಿರುವ ಸಾಮಾನ್ಯ ಸೌಲಭ್ಯಗಳಾದ ಕುಡಿಯುವ ನೀರು ಪ್ರಥಮ ಚಿಕಿತ್ಸಾಕ್ರಮಗಳನ್ನು ಕೈಗೊಳ್ಳದೆ ಅವೈಜ್ಞಾನಿಕ ಕ್ರಮಗಳನ್ನು ಕೈಗೊಂಡಿರುವುದು ಅಕ್ಷಮ್ಯ ಅಪಾರದ ಮತ್ತು ಸುಮಾರು 30ರಿಂದ 40ದಿನ ಕೇಲಸ ಮಾಡಿದರು ಸಹ ಅನೇಕ ಕೂಲಿಕಾರರಿಗೆ ಅವರಿಗೆ ಇನ್ನು ಸಹ ಅವರ ಕೇಲಸದ ವೇತನವನ್ನು ಪಾವತಿಸದೆ ಇರುವುದು ದುರಂತ

ಈ ಕೂಡಲೆ ಬಾಕಿ ಇರುವಂತಹ ಕೂಲಿ ಕಾರ್ಮಿಕರ ಹಣವನ್ನು ಬಿಡುಗಡೆ ಮಾಡಬೇಕು ರಾಷ್ಟ್ರೀಯ ಉದ್ಯೋಗ ಖಾತ್ರಿ ಕೇಲಸವನ್ನು ಲೋಪದೋಷಗಳು ಇಲ್ಲದೆ ಸಮರ್ಪಕವಾಗಿ ಜಾರಿಗೋಳಿಸಬೇಕು ಎಂದು ಒತ್ತಾಯಿಸಿ ಇಂದು ಸುಮಾರು600 ಅಧಿಕ ಮಹಿಳಾ ಮತ್ತು ಪುರುಷ ಕೇಲಸಗಾರರು ಹೋರಾಟ ಮಾಡಿದರು ಈ ಸಂದರ್ಭದಲ್ಲಿ
ಕಾಟಪ್ಪ ನಿಂಗಪ್ಪ ತಿಪ್ಪೇಸ್ವಾಮಿ ಜಯ್ಯಣ್ಣ ನಾಗಣ್ಣ ಮದುಕುಮಾರ್ ಮಂಜುನಾಥ ಬಡಪ್ಪ ಬಾಲಪ್ಪ ಜಮ್ಮಾಪುರದ ಮಂಜುನಾಥ ಗೌರಮ್ಮ ರತ್ನಮ್ಮ ಸರೋಜಮ್ಮ ಹಾಗೂ ಸುಮಾರು ಆರೂನೂರಕ್ಕು ಹೆಚ್ಚು ಕಾರ್ಮಿಕರು ಹಾಜರಿದ್ದರು..

ವರದಿ. ಸಂದೀಪ್ ಜಗಳೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend