ವಿಶ್ವಾಸ ತರಬೇತಿ ಕಾರ್ಯಾಗಾರದಲ್ಲಿ ಭರಮಸಾಗರ ಗ್ರಾ.ಪಂ ಅಧ್ಯಕ್ಷೆ ರತ್ನಮ್ಮ ಜಯಪ್ಪ ಸಮುದಾಯ ಆರೋಗ್ಯ ಕಾಪಾಡೋಣ…!!!

Listen to this article

ವಿಶ್ವಾಸ ತರಬೇತಿ ಕಾರ್ಯಾಗಾರದಲ್ಲಿ ಭರಮಸಾಗರ ಗ್ರಾ.ಪಂ ಅಧ್ಯಕ್ಷೆ ರತ್ನಮ್ಮ ಜಯಪ್ಪ
ಸಮುದಾಯ ಆರೋಗ್ಯ ಕಾಪಾಡೋಣ
ಚಿತ್ರದುರ್ಗ:ಗ್ರಾಮ ಆರೋಗ್ಯ ನೈರ್ಮಲ್ಯ ಪೌಷ್ಟಿಕ ಸಮಿತಿ ಸದಸ್ಯರ ಸಹಭಾಗಿತ್ವದೊಂದಿಗೆ ಸಮುದಾಯ ಆರೋಗ್ಯ ಕಾಪಾಡೋಣ ಎಂದು ಭರಮಸಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಜಯಪ್ಪ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಶುಕ್ರವಾರ ಕಾಲ್ಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ 17 ಗ್ರಾಮ ಆರೋಗ್ಯ ನೈರ್ಮಲ್ಯ ಪೌಷ್ಟಿಕ ಸಮಿತಿಗಳ ಒಟ್ಟು 51 ಸದಸ್ಯರಿಗೆ ವಿಶ್ವಾಸ್ ತರಬೇತಿ ಕಾರ್ಯಾಗಾರ ಉಧ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮ ಆರೋಗ್ಯ ಸಮಿತಿಗಳು ತಮ್ಮ ತಮ್ಮ ಹಂತಗಳಲ್ಲಿ ಸಾಮಾಜಿಕ ಆರೋಗ್ಯ ಪಿಡುಗುಗಳಾದ ಬಾಲ್ಯ ವಿವಾಹ, ಮಕ್ಕಳ ಹಕ್ಕುಗಳ ರಕ್ಷಣೆ, ಗರ್ಭಿಣಿ ಬಾಣಂತಿ ಆರೈಕೆ, ಲಸಿಕಾ ಕಾರ್ಯ ಯಶಸ್ವಿಗೊಳಿಸಲು ಒಗ್ಗೂಡಿ ಕೆಲಸ ಮಾಡಬೇಕು ಈ ನಿಟ್ಟಿನಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಪೌಷ್ಟಿಕ ಸಮಿತಿ ಸದಸ್ಯರ ಸಹಭಾಗಿತ್ವದೊಂದಿಗೆ ಸಮುದಾಯ ಆರೋಗ್ಯ ಕಾಪಾಡೋಣ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ವಿಶ್ವಾಸ್ ಆಂದೋಲನದ ಕ್ರಿಯಾ ಯೋಜನೆ ಪ್ರತಿ ತಿಂಗಳು ಒಂದೊಂದು ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ಆಂದೋಲನದ ಮುಖಾಂತರ ಜನ ಜಾಗೃತಿ ಮಾಡಿಸಬೇಕು. ಬಾಲ್ಯವಿವಾಹ ನಿಯಂತ್ರಣ, ತಾಯಿ ಮರಣ, ಮಕ್ಕಳ ಮರಣ, ಶೌಚಾಲಯ ಬಳಕೆ, ಕೈ ತೊಳೆಯುವ ವಿಧಾನ, ಜೀವನ ಶೈಲಿ, ಘನ ತ್ಯಾಜ್ಯ ವಿಲೇವಾರಿ, ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ, ರಾಷ್ಟ್ರೀಯ ಕೀಶೋರಿ ಸ್ವಾಸ್ಥ್ಯ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು. ಮುಕ್ತನಿಧಿ ಬಳಕೆ, ಲೆಕ್ಕಪತ್ರ ನಿರ್ವಾಹಣೆ, ಮಾಸಿಕ ಸಭೆ ಹೇಗೆ ನಡೆಸಬೇಕು. ಜನರ ಆರೋಗ್ಯ ಕಾಪಾಡುವ ಆರೋಗ್ಯ ಸಮಸ್ಯೆಗಳನ್ನು ಸಮುದಾಯದಲ್ಲಿ ಬಗೆಹರಿಸುವ ಕಾರ್ಯದಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಪೌಷ್ಟಿಕ ಸಮಿತಿಗಳ ಪಾತ್ರ ಪ್ರಮುಖವಾದದ್ದು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ವಿಶ್ವಾಸ್ ಆಂದೋಲನದ ಪರಿಚಯ ಪ್ರತಿ ತಿಂಗಳು ಈ ನಿಟ್ಟಿನಲ್ಲಿ ವಾರ್ಷಿಕ ಕ್ರಿಯಾ ಯೋಜನೆ ಹೇಗೆ ತಯಾರಿಸಬೇಕು ಆರೋಗ್ಯ ಸಮಸ್ಯೆಗಳ ಪಟ್ಟಿ ಮಾಡಿ ಚರ್ಚಿಸಿ ಜನ ಜಾಗೃತಿಯನ್ನು ಪ್ರತಿ ತಿಂಗಳು ಒಂದೊಂದು ಆರೋಗ್ಯ ಮತ್ತು ಶುಚಿತ್ವ, ಜೀವನ ಶೈಲಿ ಬದಲಾವಣೆ ಇತರೆ ಸಾಮಾಜಿಕ ಪಿಡುಗುಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ತರಬೇತಿ ಕಾರ್ಯಾಗಾರದಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಪೌಷ್ಟಿಕ ಸಮಿತಿಯ ರುದ್ರೇಶ್, ರಾಜಪ್ಪ, ಲಕ್ಷ್ಮಿದೇವಿ ಭೀಮಾನಾಯ್ಕ್, ಪಾಲಣ್ಣ, ರುದ್ರೇಶ್ ಜಗದೀಶ್, ಡಾ.ಅಭಿಶೇಕ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಂಗಾ ರೆಡ್ಡಿ, ಆಂಜನೇಯ, ಸಂದೀಪ್, ಕೆಂಚಪ್ಪ, ಮಹಂತೇಶ್ ಸೇರಿದಂತೆ ಮತ್ತಿತರರು ಇದ್ದರು….

ವರದಿ. ಪ್ರದೀಪ್ ಚಿತ್ರದುರ್ಗ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend