ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ 27.6 ಎಕರೆ ಭೂಮಿ ದಾನ ಮಾಡಿದ ಕಲಿಯುಗದ ಕರ್ಣ ಚಂದ್ರನ್…!!!

Listen to this article

ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ 27.6 ಎಕರೆ ಭೂಮಿ ದಾನ ಮಾಡಿದ ಕಲಿಯುಗದ ಕರ್ಣ ಚಂದ್ರನ್.
ಚಂದ್ರನ್ ಬಿ ಆರ್ ಅವರು ಮತ್ತು ಸಹೋದರರು ಮೂಲತಹ ಕಾಲುವೇಹಳ್ಳಿ ಯವರು ಕೃಷಿಕ ಕುಟುಂಬದಿಂದ ಬಂದವರಾಗಿದ್ದು ಚಂದ್ರನ್ ರವರು 1980 ಪೂರ್ವದಿಂದ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಸಂಘಟನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕಾಲುವೇಹಳ್ಳಿ ಗ್ರಾಮದಲ್ಲಿ ಅನೇಕ ಸ್ವಯಂ ಸೇವಕರನ್ನು ಸಂಘಟನೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ..
ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಸಕ್ರಿಯರಾಗಿರುವುದರಿಂದ ರಾಷ್ಟ್ರೀಯ ವಿಚಾರ ಕ್ಕೋಸ್ಕರ ಏನಾದರೂ ಕೊಡುಗೆ ನೀಡಬೇಕು ಎಂದು ಯೋಚನೆ ಮಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಉಪ ವಿಭಾಗವಾದ ಸಾವಯವ ಕೃಷಿ ಪ್ರಯೋಗಾಲಯಕ್ಕೆ 27.6 ಎಕರೆ ಜಮೀನು ನೀಡುವುದರ ಮೂಲಕ ಕಾಲುವೇಹಳ್ಳಿಯ ಸುತ್ತಮುತ್ತಲಿನ ರೈತರು ರಾಸಾಯನಿಕ ಗೊಬ್ಬರದ ಬಳಕೆ ಮೂಲಕ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ ಪರಿಣಾಮದಿಂದ ಬೆಳೆನಷ್ಟ ಅನುಭವಿಸುತ್ತಿದ್ದಾರೆ ಮತ್ತು ರಾಸಾಯನಿಕ ಗೊಬ್ಬರ ಬಳಕೆಯಿಂದ ರೈತರು ಬೆಳೆದಂತಹ ಶೇಂಗಾ, ಭತ್ತ, ತೊಗರಿ, ಹೆಸರುಬೇಳೆ ಇತರ ಧಾನ್ಯಗಳನ್ನು ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಕಲುಷಿತ ಅಂಶಗಳು ಸೇರ್ಪಡೆಯಿಂದ ಮಾನವನ ಆಯುಸ್ಸು ಮತ್ತು ಆರೋಗ್ಯಕ್ಕೆ ಹಾನಿಯಾಗುತ್ತಿದೆ ಪರಿಣಾಮವಾಗಿ 20~30 ವರ್ಷದ ಯುವಕರು ಸದೃಢರಾಗಿರದೆ ರೋಗಗ್ರಸ್ತರಾಗುತ್ತಿದ್ದಾರೆ, ಆದ್ದರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಾವಯವ ಕೃಷಿಯನ್ನು ಬೆಳೆಯುವುದರ ಮೂಲಕ ಸಾವಯವ ಧಾನ್ಯಗಳನ್ನು ತಿನ್ನುವುದರಿಂದ ಆರೋಗ್ಯವಂತ ಭಾರತ ನಿರ್ಮಾಣ ಎಂಬ ಕಲ್ಪನೆಯಿಂದ ಚಂದ್ರನ್ ರವರು 27.ಎಕರೆ 6 ಗುಂಟೆ ಜಮೀನು ರಾಷ್ಟ್ರೀಯ ಕಾರ್ಯಕ್ಕೆ ನೀಡಿರುತ್ತಾರೆ. ಆ ಜಮೀನಿನಲ್ಲಿ ಸಾವಯವ ಕೃಷಿ ಬೆಳೆಯುವುದು ಹೇಗೆ? ಮತ್ತು ಸಾವಯವ ಕೃಷಿಯಿಂದ ಉಪಯೋಗಗಳು ಏನು? ಎಂಬ ಜಾಗೃತಿ ಮೂಡಿಸಲು ಈ ಜಮೀನಿನಲ್ಲಿ ಮುಂದಿನ ದಿನಗಳಲ್ಲಿ ಸುತ್ತಮುತ್ತಲಿನ ಹಳ್ಳಿಗಳ ರೈತರಿಗೆ ಉಪಯೋಗವಾಗಲಿದೆ. ರಾಷ್ಟ್ರೀಯ ಮಿಷನ್ ಅಡಿಯಲ್ಲಿ ಸಾವಯವ ಕೃಷಿ ಬೆಳೆಯನ್ನು ಬೆಳೆಯಬೇಕೆಂಬ ಇಚ್ಛೆಯಿಂದ, ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ ಜಮೀನನ್ನು ದಾನ ನೀಡಿರುತ್ತಾರೆ. ಚಂದ್ರನ್ ರವರು ನಿನ್ನೆ ಜಮೀನಿನಲ್ಲಿ ಸಸಿ ನೀಡುವುದರ ಮುಖಾಂತರ ಸಾವಯವ ಕೃಷಿಗೆ ಚಾಲನೆ ನೀಡಿದರು, ಈ ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಮಿಷನ್ ಅಧ್ಯಕ್ಷರಾದ ಅರುಣ್ ರವರು, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಿರಿಯರಾದ ಪಟ್ಟಾಭಿರಾಮ್ ರವರು ಇದ್ದರು. ರಾಜ್ಯ ಎಸ್ ಟಿ ಮೋರ್ಚಾ ಕಾರ್ಯದರ್ಶಿಯಾದ ಮಹಾಂತೇಶ ನಾಯಕ ರವರು ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ರಾಮದಾಸ್ ರವರು, ಜಿಲ್ಲಾ ಆರ್ ಎಸ್ಎಸ್ ಪ್ರಮುಖರಾದ ಕೊಂಡ್ಲಹಳ್ಳಿ ನಾಗರಾಜ್, ರವರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಜೈಪಾಲಯ್ಯ, ನವರು ಗ್ರಾಮದ ಮುಖಂಡರಾದ ರಂಗಸ್ವಾಮಿ, ರವರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸೊಪ್ಪಿನ ಪಾಲಯ್ಯ ಆರ್, ರವರು , ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಭಾಗಣ್ಣ ರವರು ಪಂಚಾಯತ್ ಪ್ರಮುಖ್ ಮಂಜುನಾಥ ಪಿ, ರವರು ಸೊಪ್ಪಿನ ಸಣ್ಣಪ್ಪ,ಪೂಜಾರಿ ಮಹಾಂತೇಶ್, ಸಣ್ಣ ಪಾಲಯ್ಯ ಇನ್ನು ಇತರರು ಭಾಗವಹಿಸಿದ್ದರು…

ವರದಿ. ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend