ಮನ್ನೆಕೋಟೆ ಗ್ರಾಮ ಪಂಚಾಯತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಮರೀಚಿಕೆ, ಕಣ್ಮುಚ್ಚಿ ಕುಳಿತ ತಾಲೋಕು ಆಡಳಿತ ವ್ಯವಸ್ಥೆ…!!!

Listen to this article

ಚಳ್ಳಕೆರೆ ತಾಲ್ಲೂಕು ಮನ್ನೆಕೋಟೆ ಗ್ರಾ.ಪಂ. ಯಲ್ಲಿ ಮನರೇಗಾ ಕೆಲಸವನ್ನು ಕೂಲಿ ಕಾರ್ಮಿಕರಿಗೆ ನೀಡದೆ ಜೆಸಿಬಿ ಯಂತ್ರದಿಂದ ಬದು ನಿರ್ಮಾಣ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಲಾಕ್ ಡೌನ್ ಗಿಂತ ಮುಂಚೆ ನರೇಗಾ ದಲ್ಲಿ 100ಕ್ಕೂ ಹೆಚ್ಚು ಜನರು ಉದ್ಯೋಗ ಕೋರಿ ಪಾರ್ಮ್ ನಂ 06 ರಲ್ಲಿ ಅರ್ಜಿ ಸಲ್ಲಿಸಿದ್ದರು ಇದುವರೆಗೂ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸದೆ ಭೂ ಅಭಿವೃದ್ಧಿ ಅಡಿಯಲ್ಲಿ ಬದು ನಿರ್ಮಾಣದ ಕೆಲಸಗಳನ್ನು ಜೆಸಿಬಿ ಯಂತ್ರದ ಮೂಲಕ ಮಾಡಲು ಈಗಿನ ಪಿಡಿಒ ಪಾಲಯ್ಯ ಹಾಗೂ ಅಧಿಕಾರಿಗಳು ಬೆಂಬಲ ನೀಡಿರುತ್ತಾರೆ..
ನರೇಗಾ ಕೆಲಸಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರೇ ಈ ಕೆಲಸದ ಸೂತ್ರಧಾರರಾಗಿದ್ದಾರೆ
ಮನ್ನೆಕೋಟೆ ಹಾಗೂ ಇತರ 5 ಹಳ್ಳಿಗಳ ವ್ಯಾಪ್ತಿಯಲ್ಲಿ ನರೇಗಾ ಕೆಲಸಗಳನ್ನು ಯಂತ್ರಗಳಿಂದ ಮಾಡಲಾಗುತ್ತಿದೆ. 2020-21ನೆ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯ ಅವ್ಯವಹಾರದ ಮತ್ತು ಯಂತ್ರಗಳಿಂದ ಮಾಡಿದ ಕೆಲಸದ ಬಗ್ಗೆ ದೂರು ನೀಡಿ ಪಿಡಿಓ ಹಾಗೂ ಇಂಜಿನಿಯರ್ ಮತ್ತು ಗಣಕಯಂತ್ರ ನಿರ್ವಾಹಕನಿಗೆ 2 ಲಕ್ಷದ 10 ಸಾವಿರ ದಂಡ ವಿಧಿಸಲಾಗಿದೆ. ಆದರೂ ಸಹ ಇಂದು ಯಂತ್ರದಿಂದ ನರೇಗಾ ಕೆಲಸಗಳನ್ನು ಮಾಡಲಾಗುತ್ತಿದೆ.
ನರೇಗಾ ಕೆಲಸಗಳನ್ನು ಯಂತ್ರಗಳಿಂದ ಮಾಡಲು ಪಿಡಿಓ ಪಾಲಯ್ಯ ವರ್ಕ್ ಆರ್ಡರ್ ನೀಡಿರುತ್ತಾರೆ ಹಾಗೂ ತಾಂತ್ರಿಕ ಅಭಿಯಂತರ ಪಾಲಯ್ಯ, ತಾಂತ್ರಿಕ ಸಂಯೋಜಕ ಮಂಜುನಾಥ್, ಸಹಾಯಕ ನಿರ್ದೇಶಕ ಸಂತೋಷ್ ನಾಯ್ಕ್, ಚಳ್ಳಕೆರೆ ತಾ.ಪಂ. ಕೆಲ ಅಧಿಕಾರಿಗಳು ಕೃಪಾಟಾಕ್ಷದಲ್ಲೇ ನಡೆಯುತ್ತಿದೆ..ಇವರಿಗೆ ವರ್ಕ್ ಆರ್ಡರ್ ನೀಡಲು ಕಮಿಷನ್ ಕೊಡಬೇಕಾಗಿದೆ.
ಏಪ್ರಿಲ್ ಯಿಂದ ಇದುವರೆಗೂ ಯಾರಿಗೂ ಉದ್ಯೋಗ ನೀಡಿಲ್ಲ ಆದರೂ ಎಲ್ಲಾ ಹಳ್ಳಿಗಳಿಂದ 40 ಲಕ್ಷ ಬಿಲ್ ಮಾಡಲಾಗಿದೆ ಹಳೆಯ ಪಿಡಿಓ ಜಯಣ್ಣ ಅವಧಿಯಲ್ಲಿ ಲಾಕ್ಡೊನ್ ಗಿಂತ ಮುಂಚೆ ಉದ್ಯೋಗ ಕೋರಿ ಪಾರ್ಮ್ ನಂ 06 ರಲ್ಲಿ ಅರ್ಜಿ ಸಲ್ಲಿಸಿದ ಕಾರ್ಮಿಕರು..
ಮನ್ನೆಕೋಟೆ ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಹಳ್ಳಿಗಳಾದ ಕೋಡಿಹಳ್ಳಿ, ಮನ್ನೆಕೋಟೆ ಭೋವಿ ಕಾಲೋನಿ, ಹೊಸಹಳ್ಳಿ, ಕೆರೆಯಾಗಳಹಳ್ಳಿ ಯಲ್ಲಿ ಇದೆ ರೀತಿಯ ನರೇಗಾ ಕೆಲಸಗಳನ್ನು ಯಂತ್ರಗಳಿಂದ ಮಾಡಲಾಗುತ್ತಿದೆ ಎಂದು ಆಯಾ ಊರಿನ ಗ್ರಾಮಸ್ಥರು ಆರೋಪಿಸಿದ್ದಾರೆ..

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend