ಚಳ್ಳಕೆರೆ ನಗರಸಭೆ ಸದಸ್ಯ .ವೈ. ಪ್ರಕಾಶ್ ರವರಿಂದ ವಾರ್ಡ್ 2ರಲ್ಲಿ ಸ್ಯನಿಟೇಸರ್ ಸಿಂಪಡಣೆ…!!!

Listen to this article

ಚಳ್ಳಕೆರೆ ನಗರಸಭೆ ಸದಸ್ಯ .ವೈ. ಪ್ರಕಾಶ್ ರವರಿಂದ ವಾರ್ಡ್ 2ರಲ್ಲಿ ಸ್ಯನಿಟೇಸರ್ ಸಿಂಪಡಣೆ

ಚಳ್ಳಕೆರೆ ವಾರ್ಡ್ 2ರಲ್ಲಿ ಗೊಲ್ಲರಹಟ್ಟಿಯಲ್ಲಿ ನಗರಸಭೆ ಸದಸ್ಯರಾದ ವೈ. ಪ್ರಕಾಶ್ ರವರು ಅವರ ವಾರ್ಡ್ ನಲ್ಲಿ ಕೋವಿಡ್ 19 ರೋಗದ ನಿಯಂತ್ರಣ ಮಾಡುವ ಉದ್ದೇಶದಿಂದ ನಗರಸಭೆಯ ವತಿಯಿಂದ 2 ನೇ ವಾರ್ಡ್ ನಲ್ಲಿ ಪ್ರಕಾಶ್ ರವರ ಮುಂದಾಳತ್ವದಲ್ಲಿ ಸ್ಯನಿಟೇಸರ್ ರಾಸಾಯನಿಕ ಸಿಂಪಡಣೆ ಮಾಡಿದರು.
ಕೊರೋನ ರೋಗ ವೇಗವಾಗಿ ಹರಡುತ್ತಿದ್ದು . ದಿನೇ ದಿನೇ ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕೆಲಸ ಮಾಡುತ್ತಿದ್ದೇವೆ ಎಂದರು. ಹಾಗೆಯೇ ಜನರಲ್ಲಿ ನೀವು ಹೊರಗಡೆ ಬರುವಾಗ ಮಾಸ್ಕ್ ಹಾಕಿಕೊಂಡು ಬನ್ನಿ ಹಾಗೆಯೇ ಮನೆಯ ಒಳಗಡೆ ಹೋಗುವಾಗ .ಕೈ ಯನ್ನು ಸೋಪಿನಿಂದ ತೊಳೆದುಕೊಂಡು ಒಳಗಡೆ ಹೋಗಿ ಎಂದು ಕೋರೋನ ರೋಗದ ಬಗ್ಗೆ ಜಾಗೃತಿಯನ್ನು ಮೂಡಿಸಿದರು. ಆದಷ್ಟು ಮನೆಯಲ್ಲಿ ಇರಿ ಸುರಕ್ಷಿತವಾಗಿರಿ ಎಂದರು. ಈ ಕಾರ್ಯಕ್ರಮದಲ್ಲಿ ಗೊಲ್ಲರಹಟ್ಟಿ ಮಹಾಲಿಂಗಪ್ಪ . ಎ. ತಿಪ್ಪೇಸ್ವಾಮಿ. ಅಜ್ಜಪ್ಪ . ರಂಗಸ್ವಾಮಿ. ಶ್ರೀನಿವಾಸ್. ಮುಂತಾದವರು ಭಾಗವಹಿಸಿದ್ದರು..

ವರದಿ.ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend