ಗುತ್ತಿದುರ್ಗ ಗ್ರಾಮಪಂಚಾಯಿತಿ ಹಲವದಂಡಿ ಕೆರೆ ಸಂಜೀವಿನಿ ಯೋಜನೆ ಕೆರೆ ಹೊಳೆತ್ತುವ ಕಾರ್ಯಕ್ರಮಕ್ಕೆ ಗುದ್ದಲಿಪೂಜೆ ಸಲ್ಲಿಸಲಾಯಿತು….

Listen to this article

ವರದಿ. ಸಂದೀಪ್, ಎಚ್, ಸಿ, ಎಂ, ಹೊಳೆ

ಕರ್ನಾಟಕ ಸರ್ಕಾರ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾದಿಕಾರ

ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ)ದರ್ಮಸ್ಥಳ

ಗುತ್ತಿದುರ್ಗ ಗ್ರಾಮಪಂಚಾಯಿತಿ ಹಳವದಂಡಿ ಗ್ರಾಮ
ಇವರ ಸಹಬಾಗಿತ್ವದಲ್ಲಿ
ಕೆರೆ ಸಂಜೀವಿನಿ ಯೋಜನೆಯ ಕೆರೆ ಹೂಳೆತ್ತುವ ಕಾರ್ಯಕ್ರಮಕ್ಕೆ ಗುದ್ದಲಿ ಪೂಜೆ ಮಾಡಿ ಉದ್ಘಾಟಸಿ ಮಾತನಾಡಿದ ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅದ್ಯಕ್ಷರು ಜಗಳೂರು ಶಾಸಕರಾದ ಎಸ್ ವಿ ರಾಮಚಂದ್ರಪ್ಪ

ಜಗಳೂರು ತಾಲೂಕು ಬರದ ನಾಡನ್ನು ಸಮೃದ್ದಿಯ ನಾಡು ಮಾಡಬೇಕು ರೈತರು ಮಳೆಯನ್ನೆ ನಂಬಿ ಜೀವನ ಮಾಡುತ್ತಿರುವುದನ್ನು ತಪ್ಪಿಸಿ ತಾಲೂಕಿನ ಪ್ರತಿಯೊಂದು ಕೆರೆಗಳಿಗೆ ನೀರನ್ನು ಉಣಿಸಬೇಕು ಎಂಬುವ ಸಿರಿಗೆರೆ ಶ್ರೀಗಳ ಒತ್ತಾಸೆಯಂತೆ ಅವರ ಆಶರ್ವಾದಿಂದ ನಮ್ಮ ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಿಯೆ ತಿರುವೆ

ಅದರ ಜೊತೆ ಅಪ್ಪರ್ ಭದ್ರಯೋಜನೆಯನ್ನು ಸಹ ಅದಷ್ಟು ಬೇಗ ಸರ್ಕಾರದ ಮೇಲೆ ಒತ್ತಡ ತಂದು ಮಾರ್ಚ್ ತಿಂಗಳಲಿನಲ್ಲಿ ಭದ್ರಾ ಯೋಜನೆಯ ಟೆಂಡರ್ ಮಾಡಿಸಿ ಮಾನ್ಯ ಪ್ರಧಾನ ಮಂತ್ರಿಗಳಿಂದ ಗುದ್ದಲಿ ಪೂಜೆ ಮಾಡಿಸಿ ಕಾರ್ಯಪ್ರಾರಂಭ ಮಾಡಿಸುವೆ

ನನ್ನ ಜೀವನ ಇರುವ ಕೊನೆಯ ತನಕ ಜಗಳೂರು ತಾಲೂಕಿನ ರೈತರ ಪರವಾಗಿ ಹೋರಾಟ ಮಾಡುವೆ
ಹಳವದಂಡೆ ಗ್ರಾಮದ ಕೆರೆ ಹೂಳೇತ್ತುವ ಕಾರ್ಯಕ್ರಮಕ್ಕೆ ನನ್ನ ಅನುದಾನದಲ್ಲಿ 5ಲಕ್ಷಗಳನ್ನು ನೀಡುವೆ ಎಂದು ತಿಳಿಸಿದರು
ಜಿಲ್ಲಾ ಪಂಚಾಯಿತಿ ಅದ್ಯಕ್ಷರಾದ ಶಾಂತಕುಮಾರಿ ಶಶಿಧರ್ ಮಾತನಾಡಿ.
ಗ್ರಾಮೀಣ ಭಾಗದ ಮಹೀಳೆಯರ ರೈತರ ಬಾಳಲ್ಲಿ ಹೊಸ ಚೈತ್ಯನ ಮಾಡಿಸುತ್ತಿರುವುದು ಶ್ಲಾಘನೀಯ
ದರ್ಮಸ್ಥಳ ಸಂಘ ಈಡಿ ದೇಶದಾದ್ಯಂತ ಇಂದು ರೈತರು ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಕೇಲಸ ಮಾಡುತ್ತಿರುವ ಗುರಿಯನ್ನೊಂದಿ
ಅದರಲ್ಲಿ ನಮ್ಮ ಗ್ರಾಮೀಣ ಭಾಗದ ಮಹಿಳೆಯರಿಗೆ ವ್ಯವಹಾರದ ಬಗ್ಗೆ ಮನವರಿಕೆ ಮಾಡಿಕೊಡುವುದರ ಬಗ್ಗೆಅದ್ಯತೆ ನೀಡುತ್ತಿರುವುದು ಮಹಿಳೆಯರ ಬಾಳಲ್ಲಿ ಹೋಸ ಚೈತನ್ಯ ಮಾಡಿಸುತ್ತಿರುವುದು ಉತ್ತಮ ಸಂಗತಿ
ಕೇವಲ ದರ್ಮಸ್ಥಳ ಸಂಘ ಕೇವಲ ಮಹಿಳೆಯರಿಗೆ ಸಾಲಕೊಡುವುದು ಮಾತ್ರವಲ್ಲ ಇಂದು ನಮ್ಮ ಗ್ರಾಮಿಣ ಭಾಗದ ರೈತರ ಜೀವನ ಹಸನಾಗಬೇಕು ಎಂಬುವ ಆಶಯದೊಂದಿಗೆ ಅಂತರ್ಜಲ ಮಟ್ಟದ ಹೆಚ್ಚಳ ಮಾಡುವುದು ನಿಮ್ಮ ಗುರಿಯಾಗಲಿ
ನಮ್ಮ ಊರು ನಮ್ಮ ಕೆರೆ ಎಂಬುವ ಘೋಷಣೆಯಡಿ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ

ನಮ್ಮ ನಾಗರೀಕತೆ ಉಗಮವಾಗಿದ್ದೆ ನದಿ ಕೆರೆಗಳ ದಡದಲ್ಲಿ
ಆದುದರಿಂದ ನಮ್ಮ ಪೂರ್ವಿಕರು ಕಟ್ಟಿದ ಕೆರೆಕಟ್ಟೆಗಳನ್ನು ಸಂರಕ್ಷಣೆಮಾಡಿಕೊಂಡು ಹೋದರೆ ಮಾತ್ರ ನಮ್ಮ ಜೀವ ಜಲವನ್ನು ಉಳಿಸಿಕೊಳ್ಳಲು ಸಾದ್ಯ ಹಾಗೂ ಇಂದಿನ ದಿನಗಳಲ್ಲಿ ಕೆರೆಯಲ್ಲಿ ತುಂಬಿರುವ ಹೂಳನ್ನು ತೆಗೆದರೆ ನೀರಿನ ಸಂಗ್ರಹಾಮಟ್ಟ ಹೆಚ್ಚಳವಾಗುತ್ತದೆ ನೀರಿನ ಸಂಗ್ರಹ ಹೆಚ್ಚಾದರೆ ಅಂತರ್ಜಲ ಮಟ್ಟ ಹೆಚ್ಚಳವಾಗಿ ಜನ ಜಾನುವಾರುಗಳಿಗೆ ಯಾವುದೆ ರೀತಿಯ ನೀರಿನ ಸಮಸ್ಯೆ ಉದ್ಬವಾಗುವುದಿಲ್ಲ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ದರ್ಮಸ್ಥಳ ಸಂಘದ ಎಲ್ಲಾ ಅಧಿಕಾರಿಗಳು ಹವಳದಂಡೆ ಕೆರೆ ಅಭಿವೃದ್ಧಿ ಸಮತಿಯ ಅದ್ಯಕ್ಷಾರದ ಶಿವನಗೌಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವಾರಜಪ್ಪ ಹಾಗೂ ಗುತ್ತಿದುರ್ಗ ಪಂಚಾಯಿತಿಯ ಸರ್ವಸದಸ್ಯರು ಗ್ರಾಮಸ್ಥರು ಉಪಸ್ಥಿತಿ ಇದ್ದರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend