ಅಪ್ಪೆನಹಳ್ಳಿ ಗ್ರಾಪಂ ಬಿಜೆಪಿ ವಶ.ಮತ್ತೆ ಅರಳಿದ ಕಮಲ…!!!

Listen to this article

ಅಪ್ಪೆನಹಳ್ಳಿ ಗ್ರಾಪಂ ಬಿಜೆಪಿ ವಶ.ಮತ್ತೆ ಅರಳಿದ ಕಮಲ.

ಅಪ್ಪೆನಹಳ್ಳಿ ಗ್ರಾ.ಪಂ.ಅಧ್ಯಕ್ಷರಾಗಿ ಪದ್ಮಬಾಯಿ ಉಪಾಧ್ಯಕ್ಷರಾಗಿ ಲಕ್ಷ್ಮೀದೇವಿ ಆಯ್ಕೆ

ಗುಡೇಕೋಟೆ: ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿ ಅಪ್ಪೇನಹಳ್ಳಿ ಗ್ರಾಮ ಪಂಚಾಯಿತಿಯ ಈ ಹಿಂದೆ ಕಾಂಗ್ರೆಸ್ ಅಧಿಕಾರ ಹಿಡಿದಿದ್ದ ಅಪ್ಪೇನಹಳ್ಳಿ ಪಂಚಾಯಿತಿ ಈಗ ಬಿಜೆಪಿ ಪಾಲಾಗಿದೆ.ಅಧ್ಯಕ್ಷ ಉಪಾಧ್ಯಕ್ಷ ಸ್ಥಾನವು ಇತ್ತೀಚೆಗಷ್ಟೇ ತೆರವಾಗಿದ್ದ ಕಾರಣ ನೂತನವಾಗಿ ಅಧ್ಯಕ್ಷ ಉಪಾಧ್ಯಕ್ಷರನ್ನು ಅವಿರೋಧವಾಗಿ ಗ್ರಾಮ ಪಂಚಾಯಿತಿಯ ಸದಸ್ಯರು ತಹಶೀಲ್ದಾರ್ ಟಿ.ಜಗದೀಶ್ ರವರ ಸಮಕ್ಷಮದಲ್ಲಿ ಆಯ್ಕೆ ಮಾಡಿದರು.

ಅಪ್ಪೇನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು 19 ಸದಸ್ಯರಿದ್ದು ಅವರಲ್ಲಿ ಮೊದಲು ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಹೆಚ್ಚಿದ್ದರು. ಈಗ ಕೂಡ್ಲಿಗಿ ಕ್ಷೇತ್ರದ ಜನಪ್ರಿಯ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಅವರ ಅಭಿವೃದ್ಧಿ ಕಾರ್ಯವೈ ಕಾರ್ಯ ಮೆಚ್ಚಿ ಅಧ್ಯಕ್ಷ ಉಪಾಧ್ಯಕ್ಷರು ಬಿಜೆಪಿಗೆ ಸೇರ್ಪಡೆಯಾಗಿ ಶಾಸಕರ ಕೈ ಬಲಪಡಿಸಿದ್ದಾರೆ ಎಂದು ಬಿಜೆಪಿ ಮುಖಂಡ ರಾಯಪುರ ಪ್ರಾಣೇಶ್ ಸ್ವಾಮಿ ತಿಳಿಸಿದರು.ತಾಲ್ಲೂಕು ದಂಡಾಧಿಕಾರಿಯಾದ ಟಿ.ಜಗದೀಶ್. ಮಾತನಾಡಿ, ಅಪ್ಪೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ಚುನಾವಣೆ ಇಲ್ಲದೆ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಪದ್ಮಬಾಯಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀದೇವಿ ರವರನ್ನು ಸದಸ್ಯರೆಲ್ಲರೂ ಸೇರಿ ಆಯ್ಕೆ ಮಾಡಿದ್ದಾರೆ. ಇನ್ನು ಮುಂದೆ ಅಧ್ಯಕ್ಷರಾಗಿ ಶ್ರೀಮತಿ ಪದ್ಮಬಾಯಿ ಉಪಾಧ್ಯಕ್ಷರಾಗಿ ಲಕ್ಷ್ಮೀದೇವಿ ರವರು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು .

ನೂತನ ಅಧ್ಯಕ್ಷೆ ಶ್ರೀಮತಿ ಪದ್ಮಬಾಯಿ ಮಾತನಾಡಿ, ನನ್ನ ಮೇಲೆ ಭರವಸೆಯಿಟ್ಟು ನನ್ನನ್ನು ಅಧ್ಯಕ್ಷೆಯಾಗಿ ಆಯ್ಕೆ ಮಾಡಿರುವ ಕೂಡ್ಲಿಗಿ ಕ್ಷೇತ್ರದ ಜನಪ್ರಿಯ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಹಾಗೂ ಗ್ರಾಮದ ಹಿರಿಯರಿಗೆ ಬಿಜೆಪಿ ಕಾರ್ಯಕರ್ತರಿಗೆ ಎಲ್ಲಾ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಹಾಗೆಯೇ ನನ್ನ ಅಧ್ಯಕ್ಷೆ ಸ್ಥಾನದಲ್ಲಿ ನಾನು ಇರುವವರೆಗೂ ಪ್ರಾಮಾಣಿಕವಾಗಿ ಜನರ ಕುಂದು ಕೊರತೆಗಳನ್ನು ನಾನು ಜನರ ಬಳಿ ಹೋಗಿ ಬಗೆಹರಿಸುತ್ತೇನೆ. ನನಗೆ ಮತ ನೀಡಿ ಗೆಲ್ಲಿಸಿರುವ ಜನರ ಸೇವೆಗೆ ನಾನು ಸದಾ ಸಿದ್ಧಳಿರುತ್ತೇನೆ ಎಂದರು.

ನೂತನ ಉಪಾಧ್ಯಕ್ಷ ಲಕ್ಷ್ಮಿ ಮಾತನಾಡಿ, ನನ್ನನ್ನು ಉಪಾಧ್ಯಕ್ಷೆಯಾಗಿ ಆಯ್ಕೆ ಮಾಡಿರುವ ಎಲ್ಲಾ ಸದಸ್ಯರಿಗೂ ಪಕ್ಷದ ಹಿರಿಯರಿಗೆ ಗ್ರಾಮಸ್ಥರಿಗೆ ನನ್ನ ಧನ್ಯವಾದಗಳು ಹಾಗೆಯೇ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ ಅಲ್ಲಿಗೆ ಅವಶ್ಯಕತೆ ಇರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ ನಮ್ಮ ಕರ್ತವ್ಯ ಜನರಿಗೆ ಬೇಕಾಗಿರುವ ನೀರು ಚರಂಡಿ ವಿದ್ಯುತ್ ಸಿಸಿ ರಸ್ತೆ ಇನ್ನಿತರೆ ಸೌಲಭ್ಯಗಳನ್ನು ಒದಗಿಸುವಲ್ಲಿ ನಮ್ಮ ಗ್ರಾಮ ಪಂಚಾಯಿತಿಯ ಸದಸ್ಯರ ಜೊತೆ ಕೈಜೋಡಿಸಿ ಕೆಲಸಗಳನ್ನು ಮಾಡಲು ಪ್ರಾಮಾಣಿಕಳಾಗಿರುತ್ತೇನೆ ಎಂದರು.
ಈ ಸಂದರ್ಭದಲ್ಲಿ ರಾಯಾಪುರ ಪ್ರಾಣೇಶ್ ಸ್ವಾಮಿ. ಗುಡೆಕೋಟೆ ಬಶೀರ್. ನರಸಿಂಹಗಿರಿ ಎನ್ ಪಿ ಮಂಜುನಾಥ್. ಅಪ್ಪೇನಹಳ್ಳಿ ಜಗದೀಶ್ ಸ್ವಾಮಿ. ವೆಂಕಟಸ್ವಾಮಿ. ಶ್ರೀಧರ. ಸೇವಾಲಾಲ್. ಚೆನ್ನಪ್ಪ. ಅಂಜಿನಪ್ಪ. ರಾಯಪುರದ ರವಿರಾಜ. ಶಿವಣ್ಣ. ನಾಗರಾಜ್. ದೇವರಹಟ್ಟಿ ತಿಪ್ಪೇಸ್ವಾಮಿ. ಅಪ್ಪೆನಹಳ್ಳಿ ಶಿವಕುಮಾರ್ ಗೌಡ. ಲಿಂಗನಹಳ್ಳಿ ತಾಂಡ ಅಂಬರೀಶ ನಾಯಕ. ಗುಡೆಕೋಟೆ ಸೊಸೈಟಿ ಬಸವರಾಜ್. ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಮುಖಂಡರು ಹಾಜರಿದ್ದರು…

ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend