ಹುಲಿಕೆರೆ ಸಾ.ಹಿ.ಪ್ರಾ. ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಜರಗಿತು…!!!

Listen to this article

ಹುಲಿಕೆರೆ ಸಾ.ಹಿ.ಪ್ರಾ. ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಜರಗಿತು.
ಕಾನಹೊಸಹಳ್ಳಿ:- ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಸಮೀಪದ ಹುಲಿಕೆರೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ವಿಮಲಾಕ್ಷಿ ಮಾತನಾಡಿ ಇಂದು ನಮ್ಮ ಶಾಲೆಗೆ ಹಳೆಯ ವಿದ್ಯಾರ್ಥಿಯಾದ ರುದ್ರಮುನಿ ಅವರು ಶಾಲೆಗೆ ಗಿಡಗಳನ್ನು ದೇಣಿಗೆಯಾಗಿ ಕೊಟ್ಟಿದ್ದು ತುಂಬಾ ಸಂತೋಷದ ವಿಷಯ, ಇದೇ ರೀತಿಯಲ್ಲಿ ಹಳೆಯ-ವಿದ್ಯಾರ್ಥಿಗಳು ಸ್ವಗ್ರಾಮದ ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಶಾಲೆಗೆ ಹಾಗೂ ವಿದ್ಯಾರ್ಥಿಗಳಿಗೆ ಬೇಕಾಗಿರುವ ವಸ್ತುಗಳನ್ನು ಹಾಗೂ ಗಿಡಗಳನ್ನು ದೇಣಿಗೆ ನೀಡಬೇಕು ಆಗ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಸುಂದರವಾಗಿಕಾಣುತ್ತವೆ. ಗಿಡ ಬೆಳೆದು ದೊಡ್ಡವಾದ ಮೇಲೆ ಉನ್ನತಮಟ್ಟ ವಾತಾವರಣ ಒಳ್ಳೆಯ ಗಾಳಿ ಅವಶ್ಯಕವಾದ ಪರಿಸರ ಸಿಗುವುದು? ಈಗ ಮಕ್ಕಳಿಗೆ ಎಲ್ಲಾ ವ್ಯವಸ್ಥೆ ಇದೆ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದುಹೇಳಿದರು. ಈ ಸಂದರ್ಭದಲ್ಲಿ ಶಾಲೆಗೆ ಗಿಡಗಳನ್ನು ದೇಣಿಗೆ ಕೊಟ್ಟವರ ರುದ್ರಮುನಿ ತಾಯಿ ತಿಪ್ಪಮ್ಮ. ಸಹ ಶಿಕ್ಷಕರುಗಳಾದ ತಿಪ್ಪೇಸ್ವಾಮಿ, ವನಜಾಕ್ಷಿ, ಜನಾರ್ಧನ, ಮಮತಾ, ಅಶ್ವಿನಿ ಸೇರಿದಂತೆ, ಶಾಲಾ ಮಕ್ಕಳು ಉಪಸ್ಥಿತರಿದ್ದರು..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend