ಆರ್ಥಿಕ ಸಂಕಷ್ಟದಲ್ಲಿ ಘೋಷಣೆಮಾಡಿದ ಪ್ಯಾಕೇಜ್ ನಲ್ಲಿ ಅತಿಥಿ ಉಪನ್ಯಾಸಕರ ಕಷ್ಟವನ್ನು ಮರೆತ ಸರ್ಕಾರ…!!!

Listen to this article

ಸರ್ಕಾರದ ಕಣ್ಣಿಗೆ ಕಾಣದೆ ಇರುವ ಪದವಿಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರು* ಕರೋನಾ ಸಂಕಷ್ಟದ ಸಮಯದಲ್ಲಿ ಬಿಜೆಪಿ ಸರ್ಕಾರದ ಮಾನ್ಯ ಮುಖ್ಯಮಂತ್ರಿಯವರು ಆರ್ಥಿಕ ಸಂಕಷ್ಟದ ಪ್ಯಾಕೇಜ್    (₹  ೧೨೫೦ ಕೋಟಿ)ಎನ್ನುವಂತಹ ಪ್ಯಾಕೇಜ್ ಘೋಷಣೆ ಮಾಡಿದೆ .

ಈ ಕರೋನಾ ಸಂಕಷ್ಟದ ಪ್ಯಾಕೇಜಿನಲ್ಲಿ ಕಮ್ಮಾರರು, ಸವಿತಾ ಸಮಾಜ, ಮಡಿವಾಳರು, ಟೈಲರ್, ಡ್ರೈವರ್ ,ಬೀದಿಬದಿ ವ್ಯಾಪಾರಿಗಳು ಎಲ್ಲರೂ ಕಣ್ಣಿಗೆ ಕಾಣಿಸುತ್ತಾರೆ ಅದರಂತೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದುಡಿಯುತ್ತಿರುವ ಅತಿಥಿ ಉಪನ್ಯಾಸಕರು ಮುಖ್ಯಮಂತ್ರಿಗಳಿಗಾಗಲೀ ಶಿಕ್ಷಣ ಸಚಿವರಿಗಾಗಲಿ ಮಂತ್ರಿ  ಮಂಡಲ ಕ್ಕಾಗಲಿ ಕಾಣಿಸುವುದಿಲ್ಲ .ಈ ಅತಿಥಿ ಉಪನ್ಯಾಸಕರಿಗೆ ನೀಡುವ ಗೌರವ ವೇತನ ತಿಂಗಳಿಗೆ ಕೇವಲ 9ಸಾವಿರ ರೂಪಾಯಿಗಳ ಆದರೂ ಸಹ 6ತಿಂಗಳಿಗೆ ಒಮ್ಮೆ ಅಥವಾ 4 ತಿಂಗಳಿಗೆ ಒಮ್ಮೆ ಹಾಕುತ್ತಾರೆ ಅದರಂತೆ ೨೦೨೧ ನೇ ಸಾಲಿನಲ್ಲಿ ಜನೆವರಿ ತಿಂಗಳ ಮಾಹೆಯಲ್ಲಿ ಬಿಟ್ಟರೆ ಉಳಿದ ಯಾವ ಆದಾಯವೂ ಅಥವಾ ಸಂಬಳವೂ ಇವರಿಗಿಲ್ಲ .ಬೇರೆ ಕೆಲಸ ಮಾಡಲು ಆಗುತ್ತಿಲ್ಲ.ಈ ಅತಿಥಿ ಉಪನ್ಯಾಸಕರನ್ನು ನಂಬಿಕೊಂಡ ಕುಟುಂಬ ಹೇಗೆ ಜೀವನ ಮಾಡಬೇಕು ಸರ್ಕಾರದ ನೆರವು ಇವರಿಗೆಲ್ಲ ಬೇರೆ ಕಡೆ ಕೆಲಸ ಮಾಡಲು ಇವರಿಗೆ ಆಗುತ್ತಿಲ್ಲಾ ಆಗಿದ್ದರೆ ಇವರಿಗೆ ಸರ್ಕಾರದ  ವತಿಯಿಂದ ಇವರಿಗೆ ಪ್ರಯೋಜನಗಳೂ ಇಲ್ಲ ಹೇಗೆ ಜೀವನ ಮಾಡಬೇಕು.ಉಪನ್ಯಾಸಕ ವೃತ್ತಿಯನ್ನು ನಂಬಿಕೊಂಡು ಅತಿಥಿ ಉಪನ್ಯಾಸಕರು ತಿಥಿ ಆಗುವ ಸಮಯ ಬಂದಂತಾಗಿದೆ ದಯಮಾಡಿ ಶಿಕ್ಷಣ ಸಚಿವರುಗಳು ಮಾನ್ಯ ಮುಖ್ಯಮಂತ್ರಿಗಳು ಇವರಿಗೆ ನ್ಯಾಯವನ್ನು  ಒದಗಿಸಿಕೊಡಬೇಕು ಎಂದು ಕೊಪ್ಪಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಬಳಗವು ತಮ್ಮಲ್ಲಿ ಕೋರಿಕೆಯನ್ನ ಮಾಡಿಕೊಂಡಿದೆ .

ವರದಿ. ಮಂಜುನಾಥ್, ದೊಡ್ಡಮನಿ ವಿಜಯನಗರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend