ಆಧುನಿಕತೆ ಪ್ರಭಾವದಿಂದಾಗಿ ಸಾಂಸ್ಕೃತಿಕ ಕಲೆ ಕಣ್ಮರೆಯಾಗುತ್ತಿವೆ.-ಕಲ್ಪನಾ ಹೇಮೇಶಗೌಡ…!!!

Listen to this article

ಆಧುನಿಕತೆ ಪ್ರಭಾವದಿಂದಾಗಿ ಸಾಂಸ್ಕೃತಿಕ ಕಲೆ ಕಣ್ಮರೆಯಾಗುತ್ತಿವೆ.-ಕಲ್ಪನಾ ಹೇಮೇಶಗೌಡ

ಕೂಡ್ಲಿಗಿ:- ನಾಡಿನ ಸಂಸ್ಕೃತಿ ಜಾನಪದ ಕಲೆಗಳನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ, ಆಧುನಿಕತೆ ಪ್ರಾಭಾವದಿಂದಾಗಿ ಸಾಂಸ್ಕೃತಿಕ ಕಲೆ ಹಳ್ಳಿ ಸೊಗಡಿನ ಜಾನಪದ ಕಲೆಗಳು ಕಣ್ಮರೆಯಾಗಿದ್ದಾವೆ ಎಂದು ಮಾಕನಡಕು ಗ್ರಾ.ಪಂ ಅಧ್ಯಕ್ಷೆ ಕಲ್ಪನ ಹೇಮೇಶ ಗೌಡ ಹೇಳಿದರು.

ಅವರು ಕೂಡ್ಲಿಗಿ ತಾಲೂಕಿನ ಮಾಕನಡಕು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಕಲಾ ಸಂಘ ತಿಮ್ಮನಹಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಆಶ್ರಯದಲ್ಲಿ ಮಾಕನಡಕು ಗ್ರಾಮದಲ್ಲಿ ಆಯೋಜಿಸಿದ್ದ ‘ಜಾನಪದ ಉತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಜನಪದ ಕಲೆಗಳಲ್ಲಿ ದೇಸಿಯ ಸೊಗಡು ಕಾಣಬಹುದು. ಈ ನೆಲದ ಸಂಸ್ಕೃತಿ ಹಾಗೂ ಸಂಸ್ಕಾರ ಅದರಲ್ಲಿ ಅಡಕವಾಗಿದೆ. ಮುಂದಿನ ಪೀಳಿಗೆಗೆ ಅದನ್ನು ಉಳಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಸ.ಹಿ.ಪ್ರಾ ಶಾಲೆ ಮುಖ್ಯ ಶಿಕ್ಷಕಿ ಉಷಾ ಮೇಡಂ ಮಾತನಾಡಿ ಜನಪದ ಕಲೆಗಳನ್ನು ಸಂರಕ್ಷಣೆ ಮಾಡುವ ದಿಸೆಯಲ್ಲಿ ಸರ್ಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಕಲಾವಿದರು ಯೋಜನೆಗಳ ಸದುಪಯೋಗ ಪಡೆಯಬೇಕು
ಜಾತ್ರೆ, ಹಬ್ಬಗಳು ಜನಪದ ಸಂಸ್ಕೃತಿಯ ಜೀವವಾಳ
ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜೀವಂತವಾಗಿರುವ ಜಾತ್ರೆ, ಹಬ್ಬ ಹರಿದಿನಗಳು ನಮ್ಮ ಜನಪದ ಸಂಸ್ಕೃತಿಯ ಜೀವಾಳವಾಗಿದ್ದು, ಅವುಗಳನ್ನು ಉಳಿಸಿ ಬೆಳೆಸುವ, ಪ್ರೋತ್ಸಾಹಿಸುವ ಅವಶ್ಯಕತೆ ಇದೆ ಅಂತಹ ಕೆಲಸವನ್ನು ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಕಲಾ ಸಂಘ ಶ್ರದ್ಧೆ ವಹಿಸಿ ಮಾಡುತ್ತಿದೆ ಎಂದು ತಿಳಿಸಿ
ಹಮ್ಮಿಕೊಂಡಿದ್ದ ಜನಪದ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಸ್ತಾವಿಕವಾಗಿ ಸಾರಪ್ಪ ಮಾತನಾಡಿ ಹಳ್ಳಿಗಳಲ್ಲಿ ಹಿರಿಯರು ನಾನಾ ಸಮಾರಂಭಗಳಲ್ಲಿ ಹಾಡುವ ಹಾಡುಗಳು, ಒಗಟುಗಳು, ಲಾವಣಿ ಪದಗಳು, ಹಂತಿ ಪದಗಳು, ಗೀಗೀ ಪದಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಈಚೆಗೆ ಟಿವಿ ಪ್ರಭಾವದಿಂದಾಗಿ ಜನತೆಯಲ್ಲಿ ಈ ಕುರಿತು ಆಸಕ್ತಿ ಕಡಿಮೆಯಾಗುತ್ತಿದೆ ಎಂದರು.
ಗ್ರಾಂ.ಪಂ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿದರು.ಎಸ್.ಡಿ.ಎಂ.ಸಿ ಅಧ್ಯಕ್ಷ ಮುದ್ದಪ್ಪ, ಶಾಂತಮಲ್ಲೇಶ್ವರ ಜಿಲ್ಲಾ ಕಲಾವಿದರು ಸಂಘದ ಅಧ್ಯಕ್ಷರು ಹಾಗೂ ತಬಲವಾದಕರಾದ ಸೂಲದಹಳ್ಳಿ ನರಸಿಂಹಮೂರ್ತಿ.ಮಾತನಾಡಿದರು ವೇದಿಕೆಯಲ್ಲಿ ಬೋರಣ್ಣ,ಕೆ. ಓಂಕಾರ ಗೌಡ ವಿ.ತಿಪ್ಪೇಶ, ನಿವೃತ್ತ ಶಿಕ್ಷಕ ನಾರಾಯಣಸ್ವಾಮಿ. ಈ ಹಿಂದೆ ಸಂಗೀತ ಕ್ಷೇತ್ರದಲ್ಲಿ ಸಂಗೀತ ಕುಮಾರ ಎಂದು ಹೆಸರು ಪಡೆದಿರುವ ನಿವೃತ್ತ ಶಿಕ್ಷಕರಾದ ಹಿರೇ ಕುಂಬಳಗುಂಟೆ ಹನುಮಂತಪ್ಪನವರು.
ಕಲಾವಿದರಾದ ಮಾಕನಡಕು ರಾಜು, ಕರಿಹಟ್ಟಿ ರಾಜು.ಸಕಲಾಪುರದಹಟ್ಟಿ ಯಲ್ಲಪ್ಪ, ಕೆರನಹಳ್ಳಿ ಮಂಜುನಾಥ,
ಜಾನಪದ ನೃತ್ಯ, ಸೋಬಾನೆಪದ. ಭಜನೆ, ಜಾನಪದ ಸಂಗೀತ,ಗೀಗಿಪದ ಸುಗಮ ಸಂಗೀತ,ವಚನ ಸಂಗೀತ,ತತ್ವಪದ ಮುಂತಾದ ಜಾನಪದ ನೃತ್ಯ ಗಳು ಗಮನ ಸೆಳೆದವು …. ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಕಲಾ ಸಂಘ ಅಧ್ಯಕ್ಷ ಡಿ.ಬಿ.ನಿಂಗಪ್ಪ ಸ್ವಾಗತಿಸಿದರು.ಯಲ್ಲಪ್ಪ ವಂದಿಸಿದರು,ಸಾರಪ್ಪ ನಿರೂಪಿಸಿದರು

ವರದಿ : ಸಿ ಅರುಣ್ ಕುಮಾರ್ ಜುಮ್ಮೊಬನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend